Site icon Kannada News-suddikshana

ಶ್ರೀರಾಮ, ಚಾಮುಂಡೇಶ್ವರಿ ಫ್ಲೆಕ್ಸ್ ಹರಿದು ವಿರೂಪಗೊಳಿಸಿದ್ದ ಐವರು ಕಿಡಿಗೇಡಿಗಳ ಬಂಧನ!

ರಾಮ

SUDDIKSHANA KANNADA NEWS/DAVANAGERE/DATE:11_10_2025

ದಾವಣಗೆರೆ: ಸಾರ್ವಜನಿಕ ಸ್ಥಳದಲ್ಲಿ ಶ್ರೀರಾಮನ ಭಾವಚಿತ್ರ ಮತ್ತು ಮುದ್ದಬೋವಿ ಕಾಲೋನಿಯ 2ನೇ ಕ್ರಾಸ್ ನಲ್ಲಿ ಅಳವಡಿಸಿದ್ದ ಚಾಮುಂಡೇಶ್ವರಿ ಭಾವಚಿತ್ರದ ಫ್ಲೆಕ್ಸ್ ಹರಿದು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: 150 ಕೋಟಿ ರೂ. ವಂಚನೆ, ಖಾತೆಯಲ್ಲಿ 18 ಕೋಟಿ ರೂ. ಹಣ ಹೊಂದಿದ್ದ ವಂಚಕರು: ಸೆರೆ ಸಿಕ್ಕ ಆರೋಪಿ ಹಿಸ್ಟರಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಮುಕ್ತಿಯಾರ್, ಆಬೀದ್, ಆತಿಕ್, ಸಾಧಿಕ್, ಅಮಾನುಲ್ಲ ಬಂಧಿತ ಆರೋಪಿಗಳಾಗಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆ ಹಿನ್ನೆಲೆ:

2025ರ ಅಕ್ಟೋಬರ್ 3ರಂದು ಬೆಳಿಗ್ಗಿನ ಜಾವ 4 ಗಂಟೆ ಸಮಯದಲ್ಲಿ ಗಸ್ತಿನಲ್ಲಿರುವಾಗ ದಸರಾ ಹಬ್ಬದ ಸಂಬಂಧ ಅರಳಿಮರ ಸರ್ಕಲ್ ಹತ್ತಿರ ಗಸ್ತು ಮಾಡುತ್ತಿರುವಾಗ ಆಜಾದ್ ನಗರ ಠಾಣಾ ವ್ಯಾಪ್ತಿಯ ಬೇತೂರು ರಸ್ತೆಯ ಇಮಾಂ ನಗರದ 5ನೇ ಕ್ರಾಸ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿದ್ದ ಶ್ರೀರಾಮನ ಭಾವಚಿತ್ರಕ್ಕೆ ಹಾಗೂ ಮುದ್ದಬೋವಿ ಕಾಲೋನಿಯ 2 ನೇ ಕ್ರಾಸ್ ನಲ್ಲಿ ಅಳವಡಿಸಿದ್ದ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಯಾರೋ ಕಿಡಿಗೆಡಿಗಳು ರಾತ್ರಿ ವೇಳೆಯಲ್ಲಿ ಹಾನಿ ಮಾಡಿದ್ದು ಕಂಡು ಬಂದಿತ್ತು.

ಒಂದು ಕೋಮಿನ ಭಾವನೆಗಳಿಗೆ ಹಾನಿ ಮಾಡುವ ಉದ್ದೇಶದಿಂದ ಅಳವಡಿಸಿದ್ದ ಭಾವಚಿತ್ರವನ್ನು ಹರಿದು ಮತೀಯ ದ್ವೇಷ, ವೈಮನಸ್ಸು ಉಂಟು ಮಾಡುವ ಉದ್ದೇಶದಿಂದ ದ್ವೇಷ ಭಾವನೆ ಬರುವಂತೆ ಹಾಗೂ ಸಮಾಜದ ಶಾಂತಿಯನ್ನು ಕದಡುವ ಕೃತ್ಯ ಎಸಗಿದ್ದು, ಈ ಬಗ್ಗೆ ಸ್ವ ದೂರಿನ ಮೇರೆಗೆ ಆಜಾದ್ ನಗರ ಠಾಣೆಯಲ್ಲಿ ಗುನ್ನೆ ನಂ 137/2025 ಕಲಂ:298, 353(2) ಬಿಎನ್ಎಸ್-2023 ರೀತ್ಯಾ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಅಧೀಕ್ಷಕಿ ಉಮಾಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಪರಮೇಶ್ವರ ಹೆಗ್ಡೆಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶರಣ ಬಸವೇಶ್ವರರ ನೇತೃತ್ವದಲ್ಲಿ ಆಜಾದ್ ನಗರ ಪೊಲೀಸ್ ಠಾಣೆ ನಿರೀಕ್ಷಕ ಲಕ್ಷ್ಮಣ ನಾಯ್ಕ ಉಸ್ತುವಾರಿಯಲ್ಲಿ ಐವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.

ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ನಿರೀಕ್ಷಕ ಲಕ್ಷ್ಮಣ ನಾಯ್ಕ್, ಆಜಾದ್ ನಗರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಎಎಸ್ಐ ಚಂದ್ರಪ್ಪ, ಎಎಸ್ಐ ಈರಣ್ಣ ಸ್ವಾಮಿ, ಮಂಜುನಾಥ ನಾಯ್ಕ್, ಕೃಷ್ಣಪ್ಪ ನಂದ್ಯಾಲ್, ವೆಂಕಟೇಶ್, ಜಿ.ಆರ್ ಗುಗ್ಗರಿ ಲೋಕೇಶ್, ಖಾಜಾ ಹುಸೇನ್ ಅತ್ತಾರ್, ಸಲಹುದ್ದಿನ್, ಮಾಲತೇಶ ಕೆಳಗಿನಮನಿ, ಪರಶುರಾಮ್ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.

Exit mobile version