SUDDIKSHANA KANNADA NEWS/ DAVANAGERE/ DATE:04-08-2023
ದಾವಣಗೆರೆ: ದಾವಣಗೆರೆ ನಗರದಲ್ಲಿ 20 ಕ್ಕೂ ಹೆಚ್ಚು ರೇಬಿಸ್ ಸೋಂಕಿತ ನಾಯಿ (Dog) ಗಳು ಪತ್ತೆ – ತುರ್ತು ಸಾರ್ವಜನಿಕ ಎಚ್ಚರಿಕೆ! ಈ ನ್ಯೂಸ್ ವ್ಯಾಟ್ಸಪ್, ಫೇಸ್ ಬುಕ್ ಸೇರಿದಂತೆ ಎಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿದೆ.
ಜನರಲ್ಲಿಯೂ ಆತಂಕಕ್ಕೆ ಕಾರಣವಾಗಿದೆ. ಮನೆಯಿಂದ ಹೊರ ಬರಲು ಹೆದರುವಂಥ ಸ್ಥಿತಿ ನಿರ್ಮಾಣವಾಗಿದೆ. ಫೇಸ್ ಬುಕ್ ಗ್ರೂಪ್ ಗಳಲ್ಲಿಯೂ ಬಿಸಿ ಬಿಸಿ ದೋಸೆಯಂತೆ ಎಲ್ಲೆಡೆ ಶೇರ್ ಆಗುತ್ತಿದೆ. ನಾಯಿ(Dog)ಗಳನ್ನು ನೋಡಿದಾಕ್ಷಣ ಜನರೂ ಭಯ ಬೀಳುವಂಥ ಸ್ಥಿತಿ ನಿರ್ಮಾಣವಾಗಿತ್ತು.
ಆದ್ರೆ, ಸುದ್ದಿಕ್ಷಣ ಮೀಡಿಯಾಕ್ಕೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್ ಅವರು ಕೊಟ್ಟ ಸ್ಪಷ್ಟನೆ ನೆಮ್ಮದಿ ಮೂಡಿಸಿದೆ. ಯಾರೂ ಹೆದರುವಂಥ ಸ್ಥಿತಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ವಾಟ್ಸಪ್ ನಲ್ಲಿ ಬಂದ ತಪ್ಪು ಸಂದೇಶ ಏನು…?
ದಾವಣಗೆರೆ ನಗರದಲ್ಲಿ ಆಗಸ್ಟ್ ಒಂದರಂದು ಹರಿಬಿಟ್ಟಿರುವ ಸುಳ್ಳು ಸುದ್ದಿ. ದಾವಣಗೆರೆ ನಗರದಲ್ಲಿ 20 ಕ್ಕೂ ಹೆಚ್ಚು ನಾಯಿ(Dog)ಗಳು ರೇಬಿಸ್ ಸೋಂಕಿಗೆ ಒಳಗಾಗಿದ್ದು, ಅಧಿಕಾರಿಗಳು ಗಂಭೀರ ಪರಿಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ.
ಈ ಅಪಾಯಕಾರಿ ವೈರಸ್ ಗೆ ಒಡ್ಡಿಕೊಳ್ಳುವುದನ್ನು ತಡೆಯಲು ಬೀದಿ ಅಥವಾ ಅಪರಿಚಿತ ನಾಯಿಗಳನ್ನು ಎದುರಿಸುವಾಗ ತೀವ್ರ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ
ಎಂಬ ಸುಳ್ಳು ಸುದ್ದಿಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ.
ಗ್ರೂಪ್ ಗಳಲ್ಲಿಯೂ ಚರ್ಚೆ:
ಇನ್ನು ವಾಟ್ಸಪ್ ಗ್ರೂಪ್ ಗಳಲ್ಲಿಯೂ ಇದೇ ಚರ್ಚೆ. ಯಾವ ವಾರ್ಡ್, ಯಾವ ಏರಿಯಾ, ಎಲ್ಲಿ ರೇಬಿಸ್ ಸೋಂಕಿಗೆ ಒಳಗಾದ ನಾಯಿ(Dog)ಗಳಿವೆ ಎಂಬ ಬಗ್ಗೆಯೇ ಚರ್ಚೆ ನಡೆಸಲಾಗುತ್ತಿದೆ. ಆದ್ರೆ, ಇಂಥ ಸುಳ್ಳು ಸುದ್ದಿ ಹರಿಬಿಟ್ಟವರು ಯಾರು ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ನಾಯಿಗಳ ಉಪಟಳ ನಿನ್ನೆ, ಮೊನ್ನೆಯ ಸಮಸ್ಯೆ ಅಲ್ಲ. ಇದು ತುಂಬಾ ದಿನಗಳಿಂದ ಇದೆ. ಈ ಬಗ್ಗೆ ಮಹಾನಗರ ಪಾಲಿಕೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಮಾತ್ರ ಶೂನ್ಯ. ಪ್ರಾಣಿ ದಯಾ ಸಂಘದವರು ಕೋರ್ಟ್ ಗೆ ಹೋಗಿದ್ದಾರೆ. ಇನ್ನೂ ಕೇಸ್ ಗಳು ನಡೆಯುತ್ತಿವೆ. ಪಾಲಿಕೆ ವಿರುದ್ಧವೇ ದೂರು ದಾಖಲಿಸಿದ್ದಾರೆ ಎಂಬ ಸಿದ್ಧ ಉತ್ತರ ಮೊದಲಿನಿಂದಲೂ ಬರುತ್ತಲೇ ಇದೆ.
ಎಷ್ಟು ನಾಯಿ(Dog)ಗಳು ಇವೆ…?
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 12500 ಸಾವಿರಕ್ಕೂ ಹೆಚ್ಚು ನಾಯಿಗಳಿವೆ. ಈ ಪೈಕಿ 7500 ನಾಯಿಗಳಿಗೆ ಪಾಲಿಕೆ ವತಿಯಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ನೀಡಲಾಗಿದೆ.
ಸುದ್ದಿ ಕ್ಷಣ ಮೀಡಿಯಾದಲ್ಲಿ ಮಾತ್ರ Commissioner React:ಸರ್ಕಾರಿ ಭೂ ಕಬಳಿಕೆ ದೂರು ಬಂದಿದೆ, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ: ಆಯುಕ್ತೆ ರೇಣುಕಾ
ಇನ್ನೂ 5 ಸಾವಿರಕ್ಕೂ ಹೆಚ್ಚು ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಆಗಬೇಕಿದೆ. ಪಾಲಿಕೆ ವತಿಯಿಂದ ಟೆಂಡರ್ ಕರೆಯಲಾಗಿದ್ದು, ಈ ಪ್ರಕ್ರಿಯೆ ಇನ್ನೂ ಆಗಬೇಕಿದೆ.
ಉಪನಿರ್ದೇಶಕರು ಹೇಳಿದ್ದೇನು…?
ರೇಬಿಸ್ ಸೋಂಕಿತ ನಾಯಿ(Dog)ಗಳಿವೆ ಎಂಬ ವಿಚಾರ ಎಲ್ಲೆಡೆ ಹಬ್ಬಿದೆ. ಆದ್ರೆ, ಮಹಾನಗರ ಪಾಲಿಕೆಯವರಾಗಲೀ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್ ಅವರು ನಾವು ವಾಟ್ಸಪ್ ಗ್ರೂಪ್ ಗಳಲ್ಲಿ ನೋಡಿದ್ದೇವೆ ಅಷ್ಟೇ. ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ, ದೂರುಗಳು ಬಂದಿಲ್ಲ. ಆದ್ರೆ, ಈ ಸುಳ್ಳು ಸುದ್ದಿ ಹೇಗೆ ಹರಡಿತು ಎಂಬುದು ಗೊತ್ತಾಗುತ್ತಿಲ್ಲ. ಶೇಕಡಾ 99 ರಷ್ಟು ಇಂಥ ಯಾವುದೇ ರೇಬಿಸ್ ಸೋಂಕಿತ ಶ್ವಾನ(Dog)ಗಳು ಇಲ್ಲ ಎಂದು ಸುದ್ದಿಕ್ಷಣ ಮೀಡಿಯಾಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನಾಯಿಗಳು ವ್ಯಾಘ್ರವಾಗುವುದು ಯಾಕೆ..?
ಮಳೆಗಾಲದ ವೇಳೆ ಶ್ವಾನ(Dog)ಗಳು ಸೇರುತ್ತವೆ. ಈ ವೇಳೆ ಹೆರಿಗೆಯಾಗುವಾಗ ಹಾಗೂ ಸೇರುವ ವೇಳೆಯಲ್ಲಿ ಯಾರಾದರೂ ತೊಂದರೆ ಕೊಟ್ಟರೆ ಶ್ವಾನ(Dog)ಗಳು ವ್ಯಾಘ್ರಗಳಾಗಿಬಿಡುತ್ತವೆ. ಮರಿಗಳನ್ನು ಸಂರಕ್ಷಿಸಿಕೊಳ್ಳಲು ಹೆಚ್ಚು ಮುತುವರ್ಜಿ ವಹಿಸುತ್ತವೆ. ಈ ವೇಳೆ ಮನುಷ್ಯ ವಾಸನೆ ಬಂದರೆ ಸಾಕು ಕುಪಿತಗೊಳ್ಳುತ್ತವೆ. ಅವುಗಳಿಗೆ ತೊಂದರೆ ಕೊಟ್ಟರೆ ಕೂಡಲೇ ದಾಳಿ ಮಾಡಿಬಿಡುವ ಸಾಧ್ಯತೆಯೇ ಹೆಚ್ಚು. ಈ ಕಾರಣಕ್ಕೆ ಯಾವುದೇ ಕಾರಣಕ್ಕೂ ಶ್ವಾನ(Dog)ಗಳಿಗೆ ಉಪಟಳ ಕೊಡಲು
ಹೋಗಬಾರದು.
ಪ್ರಾಣಿಗಳು ತನ್ನ ಮರಿಗಳ ಬಗ್ಗೆ ವಿಶೇಷ ಹಾಗೂ ನಿಗಾ ವಹಿಸುತ್ತವೆ. ಬುದ್ಧಿವಂತ ಪ್ರಾಣಿ ನಾಯಿಯು ಸಹ ತನ್ನ ಮರಿಗಳ ರಕ್ಷಣೆಗೋಸ್ಕರ ಕೆಲವೊಮ್ಮೆ ಈ ರೀತಿ ವರ್ತಿಸುತ್ತದೆ. ಮರಿಗಳಿಗೆ ಯಾರಾದರೂ ತೊಂದರೆ ಕೊಟ್ಟರೆ ಅಥವಾ
ತೆಗೆದುಕೊಂಡು ಹೋಗುತ್ತಾರೆ ಎಂಬ ಕಾರಣಕ್ಕೆ ಈ ರೀತಿಯ ವರ್ತನೆ ಮಾಡುತ್ತವೆ. ನಾಯಿ(Dog)ಗಳಿಗೆ ಕೆಲವರು ಕಲ್ಲು ಹೊಡೆಯುವುದು, ಕಲ್ಲು ಬಿಸಾಡುವುದು, ಅವುಗಳಿಗೆ ತೊಂದರೆ ನೀಡುವಂತ ರೀತಿ ಕಂಡು ಬಂದಾಕ್ಷಣ ನಾಯಿಗಳು
ಅಟ್ಯಾಕ್ ಮಾಡಲು ಮುಂದಾಗುತ್ತವೆ.
ರೇಬಿಸ್ ಸೋಂಕಿತ ನಾಯಿ(Dog)ಗಳಿಲ್ಲ:
ರೇಬಿಸ್ ಸೋಂಕಿತ ನಾಯಿ(Dog)ಗಳು ಕಂಡು ಬಂದಿಲ್ಲ. ಹಾಗೇನಾದರೂ ಕಂಡು ಬಂದರೆ ಮಹಾನಗರ ಪಾಲಿಕೆಯ ಸಂಬಂಧಪಟ್ಟವರು ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಗಮನಕ್ಕೆ ತನ್ನಿ. ಜನರಲ್ಲಿ ಆತಂಕ ಉಂಟು ಮಾಡುವಂಥ ಸುಳ್ಳು ಸುದ್ದಿಯನ್ನು ಯಾರೂ ಹರಡಬಾರದು. ಇದರಿಂದ ಪೋಷಕರು ಹಾಗೂ ಜನರು ಭಯಬೀಳುತ್ತಾರೆ. ಪ್ರತಿಯೊಬ್ಬರಿಗೂ ಹೇಳಲು ಸಾಧ್ಯವಾಗದು. ಹಾಗಾಗಿ, ಜನರು ಮಾಹಿತಿ ಪಡೆಯಬೇಕು. ಸುಳ್ಳು ಸುದ್ದಿ ಹರಡುವುದರಿಂದ ನಾಯಿ(Dog)ಗಳನ್ನು ಕಂಡರೆ ಹಾಗೂ ಬೊಗಳಿದರೆ ಹೊಡೆಯಬೇಕು ಎಂದೆನಿಸುವುದು ಸಹಜ. ಜನರು ನಾಯಿ(Dog)ಗಳಿಗೆ ತೊಂದರೆ ಕೊಡಲು ಹೋಗಬಾರದು ಎಂದು ಉಪನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್ ಮನವಿ ಮಾಡಿದ್ದಾರೆ.
ರೇಬಿಸ್ ಸೋಂಕಿತ ನಾಯಿ(Dog)ಗಳು ಕಂಡು ಬಂದರೆ ಮಾಹಿತಿ ನೀಡಿ. ಪಾಲಿಕೆಯವರು ಅಂಥ ನಾಯಿ(Dog)ಗಳನ್ನು ಹಿಡಿದು ತರುತ್ತಾರೆ. ಅವುಗಳ ಸ್ಯಾಂಪಲ್ ತೆಗೆದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಅಲ್ಲಿಂದ ವರದಿ ಬಂದ ಬಳಿಕವಷ್ಟೇ ಸ್ಪಷ್ಟವಾಗಲಿದೆ. ಹದಿನಾಲ್ಕು ದಿನಗಳ ಅಂಥ ನಾಯಿಗಳನ್ನು ಕಣ್ಗಾವಲು ಇರಿಸಲಾಗುತ್ತದೆ. ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇಂಥ ಸುದ್ದಿ ಹರಡಿದೆ. ಯಾರೂ ಆತಂಕ, ಭಯಕ್ಕೆ ಒಳಗಾಗಬೇಕಿಲ್ಲ. ನಾಯಿಗಳು ವಿಚಿತ್ರ ರೀತಿ ವರ್ತಿಸುತ್ತಿದ್ದರೆ ಮಾಹಿತಿ ನೀಡಿ. ಅವುಗಳನ್ನು ಹಿಡಿದು ಚಿಕಿತ್ಸೆ ನೀಡಲಾಗುವುದು ಎಂದು ಸುದ್ದಿಕ್ಷಣ ಮೀಡಿಯಾಕ್ಕೆಮಾಹಿತಿ ನೀಡಿದ್ದಾರೆ.
Dog News, Dog Problem, Dog Fake News, Dog News Update, Dog Suddi, Dog Suddi Update, Dog Fake News, Dog Davanagere, Dog Davanagere News