Home ಕ್ರೈಂ ನ್ಯೂಸ್ ಇ-ಚಲನ್ ದಂಡಕ್ಕೆ ಶೇ.50ರಷ್ಟು ರಿಯಾಯಿತಿ ದಂಡ ಪಾವತಿಗೆ ನಾಳೆಯೇ ಕೊನೆ ದಿನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಇ-ಚಲನ್ ದಂಡಕ್ಕೆ ಶೇ.50ರಷ್ಟು ರಿಯಾಯಿತಿ ದಂಡ ಪಾವತಿಗೆ ನಾಳೆಯೇ ಕೊನೆ ದಿನ!

Share
Share

SUDDIKSHANA KANNADA NEWS/DAVANAGERE/DATE:11_12_2025

ದಾವಣಗೆರೆ: ಸಂಚಾರ ನಿಯಮಗಳ ಉಲ್ಲಂಘನೆಯ ಇ-ಚಲನ್ ದಂಡವನ್ನು ಪಾವತಿಸದೇ ಇರುವ ಪ್ರಕರಣಗಳಿಗೆ ಶೇ.50 ರಷ್ಟು ರಿಯಾಯತಿ ದಂಡವನ್ನು ಪಾವತಿಸಲು ಡಿಸೆಂಬರ್ 12ರ ನಾಳೆಯೇ ಕೊನೆ ದಿನ.

ರಾಜ್ಯ ಸರ್ಕಾರವುಪೊಲೀಸ್ ಇಲಾಖೆಯಲ್ಲಿ ಸಂಚಾರಿ ಈ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ರಿಯಾಯಿತಿಯನ್ನು ನೀಡಿ ಆದೇಶಿಸಿತ್ತು.

ಸಂಚಾರ ನಿಯಮಗಳ ಉಲ್ಲಂಘನೆಯ ಇ-ಚಲನ್ ದಂಡವನ್ನು ಪಾವತಿಸಲು ಶೇ 50% ರಷ್ಟು ಈ ಆದೇಶವು ದಿನಾಂಕ: 23.08.2025 ರಿಂದ 12.09.2025 ರವರೆಗೆ ಜಾರಿಯಲ್ಲಿತ್ತು.

ಸಂಚಾರ ನಿಯಮಗಳ ಉಲ್ಲಂಘನೆಯ ಇ-ಚಲನ್ ದಂಡವನ್ನು ಪಾವತಿಸದೇ ಇರುವ ಪ್ರಕರಣಗಳಿಗೆ ಶೇ.50 ರಷ್ಟು ರಿಯಾಯತಿ ದಂಡವನ್ನು ಪಾವತಿಸಲು ನಾಳೆ ದಿನಾಂಕ 12-12-2025 ರಂದು ಕೊನೆ ದಿನವಾಗಿದ್ದು ಕೂಡಲೇ ಈ ಸ್ಥಳಗಳಲ್ಲಿ ದಂಡವನ್ನು ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.

ಬಾಕಿ ಇರುವ ಇ-ಚಲನ್ ದಂಡ ಪಾವತಿಸುವ ಸ್ಥಳಗಳು :

  • 1. ಪೋಸ್ಟ್ ಆಫೀಸ್ ಗಳಿಗೆ ಬೇಟಿ ನೀಡಿ ಪಾವತಿಸಬಹುದಾಗಿದೆ.
  • 2. ದಾವಣಗೆರೆ ನಗರದ ಉತ್ತರ ಸಂಚಾರಿ ಪೊಲೀಸ್ ಠಾಣೆ, ದಕ್ಷಿಣ ಸಂಚಾರ ಠಾಣೆ, ಆರ್.ಟಿ.ಓ ಕಛೇರಿ ವೃತ್ತ, ಎಸಿ ಕಛೇರಿ ವೃತ್ತ, ಅರುಣ ವೃತ್ತ ( ಸಂಚಾರ ವೃತ್ತ ಕಛೇರಿ), ಸಂಗೊಳ್ಳಿ ರಾಯಣ್ಣ ವೃತ್ತ, ನಿಜಲಿಂಗಪ್ಪ ಬಡಾವಣೆ ಬಳಿ ಕರ್ನಲ್ ರವೀಂದ್ರನಾಥ ವೃತ್ತ (ಟವರ್ ಕ್ಲಾಕ್ ವೃತ್ತ), ಡೆಂಟಲ್ ಕಾಲೇಜ್ ರಸ್ತೆ, ಬಾಡಾ ಕ್ರಾಸ್, ರಾಮ & ಕೋ ವೃತ್ತ, ಹೈಸ್ಕೂಲ್ ಮೈದಾನ ಗಳಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳ ಬಳಿ ಬೇಟಿ ನೀಡಿ ಇ-ಚಲನ್ ದಂಡವನ್ನು ಪಾವತಿಸಬಹುದಾಗಿದೆ.
  • ಈ ಸ್ಥಳಗಳಲ್ಲಿ ಅಲ್ಲದೇ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆ ಭೇಟಿ ನೀಡಿ ತಮ್ಮ ವಾಹನಗಳ ಮೇಲೆ ಇರುವ ಇ-ಚಲನ್ ಬಾಕಿ ಇರುವ ದಂಡವನ್ನು ಪರಿಶೀಲಿಸಿ ಪಾವತಿಸಬಹುದಾಗಿದೆ

ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದೆ.

ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ 50% ರಿಯಾಯಿತಿ ಯ ಕೊಡುಗೆಯಲ್ಲಿ ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ಬೇಟಿ ನೀಡಿ ತಮ್ಮ ವಾಹನಗಳ ಮೇಲೆ ಇದ್ದಂತಹ ಇ-ಚಲನ್ ದಂಡವನ್ನು ಪಾವತಿಸುತ್ತಿದ್ದು, ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ 50% ರಿಯಾಯಿತಿ ಯ ಕೊಡುಗೆಯ ನಾಳೆ ಕೊನೆ ದಿನವಾಗಿದ್ದು ಸಾರ್ವಜನಿಕರು ಇದರ ಸಧುಪಯೋಗಪಡಿಸಿಕೊಳ್ಳುವಂತೆ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

Share

Leave a comment

Leave a Reply

Your email address will not be published. Required fields are marked *