Site icon Kannada News-suddikshana

ಅದ್ಧೂರಿಯಾಗಿ ನಡೆಯಿತು ಶ್ರೀ ದುರ್ಗಾಂಬಿಕಾ ದೇವಿಯ ಹೊಳೆ ಪೂಜೆ, ಪ್ರಾಣ ಪ್ರತಿಷ್ಠಾನ ಅಭಿಷೇಕ

SUDDIKSHANA KANNADA NEWS/ DAVANAGERE/ DATE:31-08-2024

ದಾವಣಗೆರೆ: ಇಡೀ ಗ್ರಾಮದಲ್ಲಿ ಸಂಭ್ರಮದ ವಾತಾವರಣ. ಎಲ್ಲೆಲ್ಲೂ ಹಬ್ಬದ ಕಳೆ. ಗ್ರಾಮದ ತುಂಬೆಲ್ಲಾ ಉಘೇ ಉಘೇ ಶ್ರೀ ದುರ್ಗಾಂಬಿಕಾ ದೇವಿಯ ಜಪ. ಭಕ್ತಿ, ಭಾವದಿಂದ ದೇವಿಗೆ ಪೂಜೆ ಸಮರ್ಪಣೆ.

ಇಂಥ ಸನ್ನಿವೇಶ ಕಂಡು ಬಂದಿದ್ದು ದಾವಣಗೆರೆ ತಾಲೂಕಿನ ಎಲೆಬೇತೂರು ಸಮೀಪದ ಬಿ. ಕಲ್ಪನಹಳ್ಳಿ ಗ್ರಾಮದಲ್ಲಿ. ಶ್ರೀ ದುರ್ಗಾಂಬಿಕಾ ದೇವಿಯ ಹೊಳೆ ಪೂಜೆ ಮತ್ತು ಪ್ರಾಣ ಪ್ರತಿಷ್ಠಾಪನೆ ಅಭಿಷೇಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದರು.

ಶ್ರೀ ದೇವಿಯ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮದ ಯಶಸ್ವಿಗೆ ಸರ್ವ ಭಕ್ತಾದಿಗಳು ಕಾರಣ. ವಿಶೇಷವಾಗಿ ಬಿ ಕಲಪನಹಳ್ಳಿ ಗ್ರಾಮಸ್ಥರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಸೇವಾ ಸಮಿತಿಯ ಸದಸ್ಯ ಹೆಚ್. ಮಲ್ಲಿಕಾರ್ಜುನ ವಂದಾಲಿ ತಿಳಿಸಿದರು.

ಹರಿಹರದ ತುಂಗಾಭದ್ರಾ ನದಿಯ ದಡದಲ್ಲಿ ಹೊಳೆ ಪೂಜೆ ಅದ್ಧೂರಿಯಾಗಿ ನೆರವೇರಿತು. ದೇವಿಯ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿತು. ಕಲಾ ತಂಡಗಳು ಮೆರವಣಿಗೆಗೆ ಮತ್ತಷ್ಟು ರಂಗು ನೀಡಿದವು. ಸಂಜೆ ಗರ್ಭಗುಡಿಯಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ, ಮಹಾ ಮಂಗಳಾರತಿ ನಡೆಯಿತು. ಬಳಿಕ ಅನ್ನ ಸಂತರ್ಪಣೆಯೂ ಇತ್ತು.

ಶ್ರೀ ದುರ್ಗಾಂಬಿಕಾ ತಾಯಿಯ ಅನುಗ್ರಹ ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು. ಒಳ್ಳೆಯ ಮಳೆ ಆಗಿದೆ. ಈ ಬಾರಿ ಒಳ್ಳೆಯ ಬೆಳೆ ಆಗಲಿ. ಯಾವುದೇ ರೋಗ ರುಜಿನಗಳು ಕಾಡದಿರಲಿ. ಲೋಕಕಲ್ಯಾಣಾರ್ಥವಾಗಿ ದೇವಿಯ ಹೊಳೆ ಪೂಜೆ ನೆರವೇರಿಸಲಾಗಿದೆ. ಜನರು, ರೈತರಿಗೆ ಒಳಿತು ಮಾಡಲಿ, ದೇವಿಯ ಅನುಗ್ರಹ, ಆಶೀರ್ವಾದ ಇದ್ದರೆ ಕೈಗೊಂಡ ಕೆಲಸಗಳು ನೆರವೇರುತ್ತವೆ ಎಂದು ಮಲ್ಲಿಕಾರ್ಜುನ ವಂದಾಲಿ ಹೇಳಿದರು.

Exit mobile version