ಭಾರತೀಯ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಇದೀಗ ಡ್ರೈವಿಂಗ್ ಲೈಸೆನ್ಸ್ ಪಡೆಯೋಕೆ ಹೊಸ ರೂಲ್ಸ್‌ನ್ನ ಅನೌನ್ಸ್ ಮಾಡಿದೆ. ಜೂನ್ 01, 2024ರಿಂದ ಡ್ರೈವಿಂಗ್ ಟೆಸ್ಟ್ ನೀಡೋಕೆ ಸವಾರರು ಸರ್ಕಾರಿ RTO ಅಫೀಸ್‌ಗೆ ತೆರಳೋ ಅಗತ್ಯವಿಲ್ಲ. ಬದಲಿಗೆ ಡ್ರೈವಿಂಗ್ ತರಬೇತಿ ನೀಡೋ ಸೆಂಟರ್‌ಗಳಲ್ಲೇ ಡ್ರೈವಿಂಗ್ ಟೆಸ್ಟ್ ನೀಡ್ಬೋದು ಅಂತ ಹೇಳಿದೆ.
ಈ ಪ್ರೈವೇಟ್ ಸೆಂಟರ್‌ಗಳಿಗೆ ಡ್ರೈವಿಂಗ್ ಲೈಸೆನ್ಸ್ ಮತ್ತು ಸರ್ಟಿಫಿಕೇಟ್ ಇಶ್ಯು ಮಾಡಲು ಅಧಿಕಾರ ನೀಡಲಾಗುತ್ತೆ. ಆದ್ರಿಂದ ಈ ಪ್ರೈವೇಟ್ ಡ್ರೈವಿಂಗ್ ಸ್ಕೂಲ್‌ಗಳು ಕೆಲ ಹೊಸ ರೂಲ್ಸ್‌ಗಳನ್ನ ಫಾಲೋ ಮಾಡಿ…. ಈ ಕಾರ್ಯಕ್ಕೆ ಅರ್ಹತೆ ಪಡೀಬೇಕಾಗುತ್ತೆ. ಇನ್ನು ಲೈಸೆನ್ಸ್‌ಗೆ ಸಂಬಂಧಿಸಿ ಎಷ್ಟೆಷ್ಟು ಫೀಸ್ ನಿಗದಿ ಪಡಿಸಬೇಕು ಅನ್ನೋ ಬಗ್ಗೇನೂ ಹೊಸ ರೂಲ್ಸ್ ಪಟ್ಟಿಯನ್ನೂ ಸಾರಿಗೆ ಸಚಿವಾಲಯ ರಿಲೀಸ್ ಮಾಡಿದೆ. ಅಲ್ದೆ ವಾಹನಗಳಿಗೆ ಸಂಬಂಧಿಸಿದ ಕೆಲ ಇತರೆ ರೂಲ್ಸ್‌ನ್ನ ಕೂಡ ರಸ್ತೆ ಸಚಿವಾಲಯ ಅನೌನ್ಸ್ ಮಾಡಿದೆ.