Home ದಾವಣಗೆರೆ ನಿಮ್ಹಾನ್ಸ್ ಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭೇಟಿ: ಏನೆಲ್ಲಾ ಸೂಚನೆ ಕೊಟ್ರು ಸಂಸದರು?
ದಾವಣಗೆರೆಬೆಂಗಳೂರು

ನಿಮ್ಹಾನ್ಸ್ ಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭೇಟಿ: ಏನೆಲ್ಲಾ ಸೂಚನೆ ಕೊಟ್ರು ಸಂಸದರು?

Share
Share

SUDDIKSHANA KANNADA NEWS/DAVANAGERE/DATE:08_12_2025

ದಾವಣಗೆರೆ: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಸದಸ್ಯೆಯಾಗಿರುವ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಸೌಕರ್ಯಗಳು, ರೋಗಿ ಸೇವೆಗಳು ಹಾಗೂ ಕಾರ್ಯವೈಖರಿಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು.

ಭೇಟಿಯ ಸಂದರ್ಭದಲ್ಲಿ ತುರ್ತುನಿಗಾ ಘಟಕ, ವಾರ್ಡ್‌ಗಳು ಹಾಗೂ ಆಪರೇಷನ್ ಯೂನಿಟ್‌‌ಗಳನ್ನು ಪರಿಶೀಲಿಸಿ, ಚಿಕಿತ್ಸಾ ಗುಣಮಟ್ಟ ಮತ್ತು ಸಿಬ್ಬಂದಿ ಕಾರ್ಯಪದ್ಧತಿಯನ್ನು ವೀಕ್ಷಿಸಿದರು. ನಂತರ ಟ್ರಾಮಾ ಕೇರ್ ಯೂನಿಟ್, ಡೈಯಾಗ್ನೋಸ್ಟಿಕ್ ಸೆಂಟರ್ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಕೆಯ ಘಟಕಗಳ ಕಾರ್ಯವೈಖರಿಯನ್ನೂ ಅವಲೋಕಿಸಿದರು.

ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳೊಂದಿಗೆ ಸಂಸದರು ನೇರವಾಗಿ ಮಾತುಕತೆ ನಡೆಸಿ, ಅವರ ಅನುಭವಗಳು ಮತ್ತು ಅಗತ್ಯಗಳನ್ನು ಆಲಿಸಿದರು. ತಜ್ಞ ವೈದ್ಯರು, ಆಸ್ಪತ್ರೆಯ ನಿರ್ವಾಹಕ ತಂಡ ಹಾಗೂ ಸಿಬ್ಬಂದಿಗಳೊಂದಿಗೆ ಮಾತನಾಡಿ,
ಚಿಕಿತ್ಸಾ ಸೇವೆಗಳ ಸುಧಾರಣೆಗಾಗಿ ವಿವರವಾದ ಚರ್ಚೆ ಮಾಡಿದರು.

ರೋಗಿ ಕೇಂದ್ರಿತ ಸೇವೆ, ನಿಖರವಾದ ರೋಗನಿರ್ಣಯ ಸೌಲಭ್ಯಗಳು ಮತ್ತು ಪರಿಣಾಮಕಾರಿಯಾದ ಆರೋಗ್ಯ ಸೇವೆಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯತೆಯನ್ನು ತಿಳಿಸಿದರು. ಆಸ್ಪತ್ರೆಯ ವಿವಿಧ ಘಟಕಗಳಲ್ಲಿ ಗುಣಮಟ್ಟದ ಮಾನದಂಡಗಳನ್ನು
ವೃದ್ಧಿಸುವ ಬಗ್ಗೆ ಸೂಕ್ತ ಸಲಹೆಗಳು ನೀಡಿದರು

ಸಂಸ್ಥೆಯ 28 ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸಂಸದರು ಆಸ್ಪತ್ರೆಗೆ ಭೇಟಿ ನೀಡಿದ್ದರು.

Share

Leave a comment

Leave a Reply

Your email address will not be published. Required fields are marked *