ದಾವಣಗೆರೆ:ಪ್ರತಿ ವರ್ಷ ನಮ್ಮ ಕಾಂಗ್ರೆಸ್ ಸರ್ಕಾರ ಸುಮಾರು 50 ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ನೀಡುತ್ತಿದೆ. ಇಡೀ ದೇಶದಲ್ಲಿ ಜನರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಗ್ಯಾರಂಟಿ ನೀಡುತ್ತಿರುವುದು ಕರ್ನಾಟಕದಲ್ಲಿ ಮಾತ್ರ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹೇಳಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಳ್ಳಿಗಳಾದ ಕೈದಾಳೆ, ಕೈದಾಳೆ ಕ್ಯಾಂಪ್, ಗಿರಿಯಾಪುರ, ಕುಕ್ಕುವಾಡ, ಹಳೇಕೊಳೆನಹಳ್ಳಿ, ಹೊಸಕೊಳೆನಹಳ್ಳಿ,ನಾಗರಸನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಕಾಲ್ನಡಿಗೆ ಮೂಲಕ ಮನೆಮನೆಗೆ ಭೇಟಿ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಮಾತಾಡಿದ ಅವರು ಸಮರ್ಥ್ ಅವರು ಯುವಕರಾಗಿದ್ದಾರೆ ಅವರಿಗೆ ಒಂದು ಯೂತ್ ವಿಜನ್ ಇದೆ. ಚಿಕ್ಕ ವಯಸ್ಸಿನಿಂದಲೇ ರಾಜಕಾರಣ ನೋಡಿದವರು. 2019 ರಿಂದ ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ಎಲ್ಲರ ಪರ ಪ್ರಚಾರ ಮಾಡಿದ್ದಾರೆ.
ಮೊಮ್ಮಗನಾಗಿ ಅಪ್ಪಾಜಿ ಅವರ ಜೊತೆ ಒಳ್ಳೆಯ ಒಡನಾಟ ಹೊಂದಿದ್ದರು. ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜನ ಅಪ್ಪಾಜಿ ಅವರನ್ನು ಸತತವಾಗಿ 6 ಬಾರಿ ಆಯ್ಕೆ ಮಾಡಿದ್ದಾರೆ. ಇದು ಅಪ್ಪಾಜಿ ಅವರ ಭದ್ರಕೋಟೆ. ಇಡೀ ದಾವಣಗೆರೆ ದಕ್ಷಿಣ ಭಾಗದಲ್ಲಿ ಅಪ್ಪಾಜಿ ಅವರು ಎಲ್ಲ ರಸ್ತೆಗಳನ್ನು ಸಿಮೆಂಟೀಕರಣಗೊಳಿಸಿದ್ದಾರೆ. ಪ್ರಚಾರದ ವೇಳೆ ಜನರು ಮನೆಗಳನ್ನು ಕೇಳುತ್ತಿದ್ದಾರೆ. ಎಲ್ಲಾ ಕೆಲಸಗಳನ್ನು ಜನಗಳಿಗಾಗಿ ಮಾಡುತ್ತೇವೆ ಎಂದರು.
ಸಮರ್ಥ್ ಆಲೋಚನೆ ಉತ್ತಮವಾಗಿವೆ ಶಿಕ್ಷಣದ ವಿಚಾರದಲ್ಲಿ ಅದರಲ್ಲೂ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ಅವರ ಆಶಯ ಮತ್ತು ಜನರಿಗೆ ಒಳ್ಳೆಯ ಆರೋಗ್ಯ ನೀಡಬೇಕು. ವೈದ್ಯರ ಸಂಖ್ಯೆ ಹೆಚ್ಚಿಸುವಲ್ಲಿ ನಮ್ಮ ಸರಕಾರ ಕಾರ್ಯ ಪ್ರವೃತ್ತವಾಗಿದೆ ಎಂದರು.
ಈಗಾಗಲೇ ನಮ್ಮ ಎಸ್.ಎಸ್.ಕೇರ್ ಟ್ರಸ್ಟ್ ನಿಂದ ಉಚಿತವಾಗಿ ಡಯಾಲಿಸಿಸ್ ಸೇರಿದಂತೆ ಹಲವು ಸೌಲಭ್ಯ ನೀಡಿದ್ದೇವೆ. ಅಂಬುಲೆನ್ಸ್ ಸೇವೆಗಳನ್ನು ಒದಗಿಸುತ್ತಿದ್ದೇವೆ. ಸಮರ್ಥ್ ಅವರು ಜನ ಸೇವೆ ಮಾಡುತ್ತಿದ್ದಾರೆ ಮತ್ತು ಜನಾನುರಾಗಿಯಾಗಿದ್ದಾರೆ. ಜನರ ಬೆಂಬಲ ಧನಾತ್ಮಕವಾಗಿದೆ. ಜನರು ಉಪಚುನಾವಣೆಯಲ್ಲಿ ಸಮರ್ಥ್ ಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು
ಈ ಸಂದರ್ಭದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮುಖಂಡರುಗಳು ಇದ್ದರು.
- Congress Candidate Samarth
- Davanagere Byelection 2026
- Davanagere South Constituency.
- Dr. Prabha Mallikarjun
- Kaidale Village Campaign
- Karnataka Congress Government 50000 Crores.
- Karnataka Guarantee Schemes
- Shamanur Shivashankarappa
- SS Care Trust
- ಎಸ್.ಎಸ್. ಕೇರ್ ಟ್ರಸ್ಟ್
- ಕರ್ನಾಟಕ ಕಾಂಗ್ರೆಸ್ ಸರ್ಕಾರ 50 ಸಾವಿರ ಕೋಟಿ.
- ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್
- ಕೈದಾಳೆ ಗ್ರಾಮ ಪ್ರಚಾರ
- ಗ್ಯಾರಂಟಿ ಯೋಜನೆಗಳು ಕರ್ನಾಟಕ
- ಡಾ. ಪ್ರಭಾ ಮಲ್ಲಿಕಾರ್ಜುನ್
- ದಾವಣಗೆರೆ ಉಪಚುನಾವಣೆ 2026
- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ
- ಶಾಮನೂರು ಶಿವಶಂಕರಪ್ಪ





Leave a comment