Site icon Kannada News-suddikshana

ದಾನದ ರೂಪದಲ್ಲಿ ಪುಸ್ತಕ, ನೋಟ್ ಬುಕ್ ಗ್ರಂಥಾಲಯಕ್ಕೆ ನೀಡಿ: ಡಿಸಿ ಗಂಗಾಧರ ಸ್ವಾಮಿ ಮನವಿ

SUDDIKSHANA KANNADA NEWS/ DAVANAGERE/ DATE-02-07-2025

ದಾವಣಗೆರೆ: ಜಿಲ್ಲಾ ಗ್ರಂಥಾಲಯಕ್ಕೆ ಸಾರ್ವಜನಿಕರು ತಮ್ಮಲ್ಲಿರುವ ಉಪಯೋಗಿಸಿರುವ ಪುಸ್ತಕಗಳು ಹಾಗೂ ಬರೆಯದೆ ಹಾಳೆಗಳು ಉಳಿದಿರುವ ನೋಟ್ ಪುಸ್ತಕ, ಬರೆಯದೇ ಇರುವ ಡೈರಿಗಳನ್ನು ದಾನದ ರೂಪದಲ್ಲಿ ಹತ್ತಿರದ ಗ್ರಂಥಾಲಯಗಳಿಗೆ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

ಪರಿಸರ ಸಂರಕ್ಷಣೆ 2025ರ ಅಂಗವಾಗಿ ದಾವಣಗೆರೆ. ಜಿಲ್ಲಾ, ನಗರ ಸಾರ್ವಜನಿಕ ಗ್ರಂಥಾಲಯಗಳ ಉಪಯೋಗಕ್ಕಾಗಿ ತಾವು ಓದಿದ ಉತ್ತಮ ಪುಸ್ತಕಗಳನ್ನು ಜುಲೈ 16 ರೊಳಗಾಗಿ ದೇಣಿಗೆ ರೂಪದಲ್ಲಿ ಉಚಿತವಾಗಿ ನೀಡಬಹುದು.

ಹರಿದು ಹಾಳಾದ ಪುಸ್ತಕಗಳನ್ನು ಹೊರತುಪಡಿಸಿ ಖಾಲಿ ಹಾಳೆಗಳು ಉಳಿದಿದಲ್ಲಿ ಮತ್ತು ಡೈರಿಗಳನ್ನು ಸಹ ತಾವುಗಳು ಹತ್ತಿರದ ತಾಲೂಕಿನ ಸಾರ್ವಜನಿಕ ಶಾಖಾ ಗ್ರಂಥಾಲಯಗಳಿಗೆ, ಮತ್ತು ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಬರುವ ಶಾಖಾ ಗ್ರಂಥಾಲಯಗಳು ಹಾಗೂ ಹತ್ತಿರದ ವಾಚನಾಲಯಗಳಿಗೆ ತಾವುಗಳು ಪಟ್ಟಿ ಸಹಿತವಾಗಿ ಗ್ರಂಥಾಲಯದ ವೇಳೆಯಲ್ಲಿ ನೀಡಿ ಸಂಬಂಧಪಟ್ಟ ಗ್ರಂಥಾಲಯದ ಅಧಿಕಾರಿಗಳಿಂದ ಸ್ವೀಕೃತಿಯನ್ನು ಪಡೆಯಬಹುದು.

ಉಳಿದಿರುವ ಖಾಲಿ ಹಾಳೆಗಳನ್ನು ಒಂದುಗೂಡಿಸಿ ಬೈಂಡ್ ಮಾಡಿಸಿ ಬಡ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ ಪಿ.ಆರ್. ಇವರ ಮೊಬೈಲ್ ಸಂ : 8722313666 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ತಿಳಿಸಿದ್ದಾರೆ.

Exit mobile version