Home ನವದೆಹಲಿ “ನನ್ನ ಬಳಿ ಅತ್ಯುತ್ತಮ ಕಾನೂನು ತಂಡವಿದೆ”: ಟ್ರಂಪ್ ವಿರುದ್ಧ ವಕೀಲ ನೀಲ್ ಕಟ್ಯಾಲ್ ಕೌಂಟರ್!
ನವದೆಹಲಿಬೆಂಗಳೂರುವಾಣಿಜ್ಯವಿದೇಶ

“ನನ್ನ ಬಳಿ ಅತ್ಯುತ್ತಮ ಕಾನೂನು ತಂಡವಿದೆ”: ಟ್ರಂಪ್ ವಿರುದ್ಧ ವಕೀಲ ನೀಲ್ ಕಟ್ಯಾಲ್ ಕೌಂಟರ್!

Share
ಕಾನೂನು
Share

ವಾಷಿಂಗ್ಟನ್: ನನ್ನ ಬಳಿ ಅತ್ಯುತ್ತಮ ಕಾನೂನು ತಂಡವಿದೆ”. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕಗಳ ವಿರುದ್ಧ ಸುಪ್ರೀಂಕೋರ್ಟ್ ಗೆಲುವಿನ ಬಗ್ಗೆ ವಕೀಲ ನೀಲ್ ಕಟ್ಯಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಲೆವಿಗಳ ಕಾನೂನುಬಾಹಿರತೆಯ ಬಗ್ಗೆ ಯುಎಸ್ ಸುಪ್ರೀಂ ಕೋರ್ಟ್ ಮುಂದೆ ವಾದಿಸಿದ ಭಾರತೀಯ ಮೂಲದ ವಕೀಲ ನೀಲ್ ಕಟ್ಯಾಲ್, ಅವರು “ವಿಶ್ವದ ಅತ್ಯುತ್ತಮ ಕಾನೂನು ತಂಡ” ಹೊಂದಿದ್ದಾರೆ ಎಂದು ಹೇಳಿದ್ದಾರೆ.

“ನನಗೆ ವಿಶ್ವದ ಅತ್ಯುತ್ತಮ ಕಾನೂನು ತಂಡವಿದೆ. ಅದ್ಭುತ ವಕೀಲರು ಮತ್ತು ದಯಾಳುಗಳು.#ಅದೃಷ್ಟವಂತರು. ” ಸುಪ್ರೀಂ ಕೋರ್ಟ್ ಟ್ರಂಪ್ ಅವರ ಸುಂಕಗಳನ್ನು ರದ್ದುಗೊಳಿಸಿದ ನಂತರ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಮೆರಿಕದ ಆರ್ಥಿಕತೆಯನ್ನು ಸರಿಪಡಿಸುವ ಹೆಸರಿನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ಸರಕುಗಳ ಮೇಲೆ ಹೇರಿದ್ದ ಭಾರಿ ಪ್ರಮಾಣದ ಸುಂಕಗಳಿಗೆ (Tariffs) ಅಮೆರಿಕದ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ಟ್ರಂಪ್ ಅವರ ಈ ಕ್ರಮ ಸಂವಿಧಾನಬಾಹಿರ ಎಂದು ತೀರ್ಪು ನೀಡಿರುವ ನ್ಯಾಯಾಲಯವು, ಸುಂಕ ವಿಧಿಸುವ ಅಧಿಕಾರ ಕೇವಲ ಸಂಸತ್ತಿಗೆ (Congress) ಇದೆಯೇ ಹೊರತು ಅಧ್ಯಕ್ಷರಿಗಲ್ಲ ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂ ತೀರ್ಪಿನ ಮುಖ್ಯಾಂಶಗಳು:

ಸಂವಿಧಾನದ ಪ್ರಕಾರ ಸುಂಕ ವಿಧಿಸುವುದು ತೆರಿಗೆ ಅಧಿಕಾರದ ಭಾಗವಾಗಿದ್ದು, ಇದನ್ನು ಕಾಂಗ್ರೆಸ್ ಮಾತ್ರ ನಿರ್ಧರಿಸಬೇಕು.

ತುರ್ತು ಪರಿಸ್ಥಿತಿಯ ಅಧಿಕಾರವನ್ನು (IEEPA) ಬಳಸಿ ಟ್ರಂಪ್ ಸುಂಕ ಹೇರಿದ್ದು ಕಾನೂನುಬಾಹಿರ.

ಈ ತೀರ್ಪಿನಿಂದಾಗಿ ಭಾರತೀಯ ಮೂಲದ ವಕೀಲ ನೀಲ್ ಕಾಟ್ಯಾಲ್ ಅವರು ಸಣ್ಣ ಉದ್ಯಮಿಗಳ ಪರವಾಗಿ ದೊಡ್ಡ ಜಯ ಸಾಧಿಸಿದ್ದಾರೆ.

ಟ್ರಂಪ್ ಅವರ ಪ್ರತಿ ಸವಾಲು:

ಸುಪ್ರೀಂ ಕೋರ್ಟ್ ತೀರ್ಪಿನಿಂದ ಕೆರಳಿದ ಟ್ರಂಪ್, “ನ್ಯಾಯಾಲಯದ ನಿರ್ಧಾರ ನಾಚಿಕೆಗೇಡಿನ ಸಂಗತಿ” ಎಂದು ಕಿಡಿಕಾರಿದ್ದಾರೆ. ತೀರ್ಪು ಬಂದ ಕೆಲವೇ ಗಂಟೆಗಳಲ್ಲಿ ಅವರು ಹೊಸ ಆದೇಶಕ್ಕೆ ಸಹಿ ಹಾಕಿದ್ದು, ಅದರಂತೆ ಫೆಬ್ರವರಿ 24 ರಿಂದ ಜಾರಿಗೆ ಬರುವಂತೆ ಅಮೆರಿಕಕ್ಕೆ ಆಮದಾಗುವ ಎಲ್ಲಾ ದೇಶಗಳ ಸರಕುಗಳ ಮೇಲೆ ಶೇ. 10ರಷ್ಟು ಹೆಚ್ಚುವರಿ ಸುಂಕ ಹೇರಿದ್ದಾರೆ. ಇದು ಮುಂದಿನ 150 ದಿನಗಳವರೆಗೆ ಚಾಲ್ತಿಯಲ್ಲಿರುತ್ತದೆ.

ಭಾರತದ ಮೇಲಾಗುವ ಪರಿಣಾಮ:

ಈ ಮೊದಲು ಭಾರತದ ಮೇಲೆ ಶೇ. 18ರಷ್ಟು ಸುಂಕ ಹೇರಲಾಗಿತ್ತು. ಆದರೆ ಈಗಿನ ಹೊಸ ಆದೇಶದ ಪ್ರಕಾರ, ಜಾಗತಿಕವಾಗಿ ಶೇ. 10ರಷ್ಟು ಸುಂಕ ಜಾರಿಯಾಗುವುದರಿಂದ ಭಾರತಕ್ಕೆ ಸ್ವಲ್ಪ ಮಟ್ಟಿನ ಸಮಾಧಾನ ಸಿಕ್ಕಂತಾಗಿದೆ. ಆದರೂ ಭಾರತದ ರಫ್ತುದಾರರಿಗೆ ಅಮೆರಿಕದ ಈ ಅನಿಶ್ಚಿತ ನೀತಿ ಆತಂಕ ತಂದಿದೆ.

Share

Leave a comment

Leave a Reply

Your email address will not be published. Required fields are marked *