Site icon Kannada News-suddikshana

ಮದುವೆಗೂ ಮುನ್ನ ಶಾಲಾ ಜೀರ್ಣೋದ್ಧಾರಕ್ಕೆ ಮುಂದಾದ ಡಾಲಿ: ಬಡುವ್ರ್ ಮಕ್ಳು ಬೆಳೀಬೇಕ್ ಕಣ್ರಯ್ಯಾ!

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ ಮದುವೆಯ ಸಂಭ್ರಮದಲ್ಲಿದ್ದಾರೆ. ಡಾಲಿ-ಧನ್ಯತಾ ಜೋಡಿ ಈಗಾಗಲೇ ಕನ್ನಡ ಸಿನಿಮಾದ ನಟ, ನಟಿಯರು, ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ಪತ್ರಿಕೆ ಕೊಡುತ್ತಿದ್ದಾರೆ.ಮದುವೆ ಸಂಭ್ರಮದ ಮಧ್ಯೆ ನಟ ಡಾಲಿ ಧನಂಜಯ ಅವರು ಒಂದೊಳ್ಳೆ ಕಾರ್ಯಕ್ಕೆ ಮುಂದಾಗಿದ್ದಾರೆ. ಡಾಲಿ ಓದಿದ ಊರಿನ ಸರ್ಕಾರಿ ಶಾಲೆಯ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ.

ಡಾಲಿ ಧನಂಜಯ ಅವರು ಹಾಸನದ ಅರಸೀಕೆರೆ ತಾಲೂಕು ಕಾಳೇನಹಳ್ಳಿಯವರು. ಹುಟ್ಟೂರಿನಲ್ಲಿ ತಾನು ಓದಿದ ಸರ್ಕಾರಿ ಶಾಲೆಗೆ ಡಾಲಿ ಅವರು ತಮ್ಮ ಕೊಡುಗೆ ನೀಡಿದ್ದಾರೆ.ಸರ್ಕಾರಿ ಶಾಲೆಯ ಜೀರ್ಣೋದ್ಧಾರಕ್ಕೆ ಖುದ್ದು ಡಾಲಿ ಧನಂಜಯ ಅವರೇ ಮುಂದೆ ನಿಂತು ಮಾಡುತ್ತಿದ್ದಾರೆ. ಇದರ ಜೊತೆಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಡಾಲಿ ಧನಂಜಯ ಅವರು ಮುಂದಾಗಿದ್ದಾರೆ.

ಫೆಬ್ರವರಿ 16ರಂದು ಡಾಲಿ – ಧನ್ಯತಾ ಜೋಡಿ ಸಪ್ತಪದಿ ತುಳಿಯುತ್ತಿದ್ದಾರೆ. ಮೈಸೂರಿನಲ್ಲಿ ಈ ತಾರಾ ಜೋಡಿಯ ಅದ್ಧೂರಿ ವಿವಾಹ ಮಹೋತ್ಸವ ನಡೆಯುತ್ತಿದೆ.

Exit mobile version