Home ಕ್ರೈಂ ನ್ಯೂಸ್ BIG NEWS: ಆಧುನಿಕ ಭಗೀರಥ, ಶಾಮನೂರಿನ ಬಿಜೆಪಿ ಭೀಷ್ಮ ಚಂದ್ರಶೇಖರ್ ಸಂಕೊಳ್ ಏನೆಲ್ಲಾ ಜನೋಪಯೋಗಿ ಕಾರ್ಯಗಳ ಮಾಡಿದ್ದರು ಗೊತ್ತಾ?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

BIG NEWS: ಆಧುನಿಕ ಭಗೀರಥ, ಶಾಮನೂರಿನ ಬಿಜೆಪಿ ಭೀಷ್ಮ ಚಂದ್ರಶೇಖರ್ ಸಂಕೊಳ್ ಏನೆಲ್ಲಾ ಜನೋಪಯೋಗಿ ಕಾರ್ಯಗಳ ಮಾಡಿದ್ದರು ಗೊತ್ತಾ?

Share
ಭಗೀರಥ
Share

ದಾವಣಗೆರೆ: ನೀರು ಕೊಟ್ಟ ಆಧುನಿಕ ಭಗೀರಥ ಶಾಮನೂರಿನ ಬಿಜೆಪಿ ಭೀಷ್ಮ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ ಸಂಕೊಳ್ ಅವರು ಮಾಜಿ ಸಚಿವ ಹಾಗೂ ಮಾಜಿ ಶಾಸಕ ಎಸ್. ಎ. ರವೀಂದ್ರನಾಥ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. 2007ರಲ್ಲಿ ಬಿಜೆಪಿ ಕಾರ್ಪೊರೇಟರ್ ಆಗಿದ್ದ ಚಂದ್ರಶೇಖರ್ ಸಂಕೊಳ್ ಜನಪ್ರಿಯ ಮಹಾನಗರ ಪಾಲಿಕೆ ಸದಸ್ಯ ಎಂದೇ ಖ್ಯಾತರಾದವರು.

READ ALSO THIS STORY: EXCLUSIVE: ಶಾಸಕನಾಗಿ ಜನಸೇವೆ ಮಾಡ್ಬೇಕೆಂಬ ಕನಸು ಕಂಡಿದ್ದ ನೀರು ಕೊಟ್ಟ ಭಗೀರಥ ಚಂದ್ರಶೇಖರ್ ಸಂಕೊಳ್ ಸಾಲದ ಸುಳಿಗೆ ಸಿಲುಕಿದ್ದೇಗೆ? ಮಕ್ಕಳು ಆತ್ಮಹತ್ಯೆ ಯತ್ನ ಮಾಡಿದ್ಯಾಕೆ?

ಮಾತ್ರವಲ್ಲ, ಅಭಿವೃದ್ಧಿ ಕಾರ್ಯಗಳು ಮತ್ತು ಜನಸೇವೆ ಮೂಲಕ ಜನರ ಮನಸಿನಲ್ಲಿ ನೆಲೆಯೂರಿದ ನಾಯಕ. ಆದರೆ ಈಗ ಈ ನಾಯಕನ ದುರಂತ ಅಂತ್ಯ ಆಗಿದೆ.

ಏನೆಲ್ಲಾ ಕಾರ್ಯಗಳನ್ನ ಮಾಡಿದ್ದರು ಚಂದ್ರಶೇಖರ್?

ಶಾಮನೂರು ಕುಂದುವಾಡದ 2007-2008 ರ ಮಹಾನಗರ ಪಾಲಿಕೆ ಸದ್ಯಸರಾಗಿದ್ದರು. ಬಿಜೆಪಿ ಪಕ್ಷದ ಚಿಹ್ನೆಯಡಿಯಲ್ಲಿ ಸ್ಪರ್ಧಿಸಿ 1000 ಕ್ಕೂ ಹೆಚ್ಚು ಮತಗಳಿಂದ ವಿಜಯ ಶಾಲಿಯಾಗಿದ್ದರು.

2007 -2008 ರ ಬಿಜೆಪಿ ಸರ್ಕಾರದಲ್ಲಿ ಶಾಮನೂರುನಲ್ಲಿ ಬಡವರಿಗೆ 228ಕ್ಕೂ ಹೆಚ್ಚು ಉಚಿತ ಆಶ್ರಯ ನಿವೇಶನ ಕೊಡಿಸಿದ್ದರು. ಆಗ ಸಚಿವರಾಗಿದ್ದ ಎಸ್. ಎ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ವಿತರಣೆ ಮಾಡಿದ್ದರು.

2008-2009ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ. ಎಸ್. ಯಡಿಯೂರಪ್ಪನವರ ಅನುದಾನದ ಅಡಿಯಲ್ಲಿ ಶಾಮನೂರಿನ ಅಂಜೇನೆಯ ದೇವಸ್ಥಾನ ದ ಪಕ್ಕದಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಮಳಿಗೆಗಳನ್ನು ನಿರ್ಮಾಣವನ್ನು
ಮಾಡಿದ್ದರು.

2011-2012 ಶಾಮನೂರು ಗ್ರಾಮದ ಸುತ್ತಮುತ್ತಲಿನ ಓದುವ ಮಕ್ಕಳಿಗೆಗೋಸ್ಕರ ರೂ 3 ಕೋಟಿ ವೆಚ್ಚದ ಶಾಲೆಯನ್ನು ನಿರ್ಮಿಸಿರುವ ಕೀರ್ತಿ ಅವರದ್ದು.

2013 -2014 ಬಡತನ ನಿರ್ಮೂಲನೆಯನ್ನು ಮಾಡಲು ಬಡವರಿಗೆ ಸುಮಾರು 500ಕ್ಕೂ ಹೆಚ್ಚು ಮನೆಗೆಗಳಿಗೆ ಗ್ಯಾಸ್ ಮತ್ತು ಸಿಲೆoಡ್ ರ ಉಚಿತ ವಾಗಿ ಕೊಡಿಸಿದ್ದರು. 300ಕ್ಕೂ ಹೆಚ್ಚು ಶೌಚಾಲಯವನ್ನು ಹಂಚಿಕೆ
ಮಾಡಿದ್ದರು.

ಇಂದಿನ ಸಿಸಿ ರೋಡ್ ಮತ್ತು ಒಳಚರಂಡಿಗಳ ಅಭಿವೃದ್ಧಿ ಮಾಡಿದವರು. ಮಹಾನಗರ ಪಾಲಿಕೆ ಸದಸ್ಯರಾಗಿದ್ದಾಗ ಹಾಳಾಗಿದ್ದ ರಸ್ತೆಗಳಿಗೆ ಕಾಯಕಲ್ಪ ನೀಡಿದ್ದರು.

ಯಾರೇ ಬಡವರು, ಶ್ರೀಮಂತರು ಎಂದು ತಾರತಮ್ಯ ತೋರದೇ ಮನೆ ಬಳಿ ಬಂದವರ ಕಷ್ಟ ನೀಗಿಸಿದವರು.

ಜನರಿಂದ, ಜನರಿಗೋಸ್ಕರ, ಜನರಿಗಾಗಿ ಇದ್ದ ನಮ್ಮ ಜನಾಯಕರು ಅವರು. ಚಂದ್ರಶೇಖರ್ ಸಂಕೊಳ್ ನಿಧನದಿಂದ ಬಿಜೆಪಿ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದ್ದು, ನೆಚ್ಚಿನ ಕಾರ್ಯಕರ್ತರಿಗೆ ಜನಾಯಕ ಇನ್ನಿಲ್ಲವೆಂಬುದು ನೋವಿನ ಸಂಗತಿಯಾಗಿದೆ ಎಂದು ದಾವಣಗೆರೆ ಉತ್ತರ ವಿಧಾನಸಭಾ ಭೇತ್ರದ ಯುವ ಮೋರ್ಚಾ ಉಪಾಧ್ಯಕ್ಷ ಹರೀಶ್ ಶಾಮನೂರು ಕಂಬನಿ ಮಿಡಿದಿದ್ದಾರೆ.

 

Share

Leave a comment

Leave a Reply

Your email address will not be published. Required fields are marked *