Site icon Kannada News-suddikshana

ತಮಸೋಮಾ ಜ್ಯೋತಿರ್ಗಮಯ, ದೀಪ ಬೆಳಗಿಸುವ ಮಹತ್ವ, ನಿಯಮಗಳು ಗೊತ್ತಾ…? ಯಾವ ಹೊತ್ತಲ್ಲಿ ದೀಪ ಹಚ್ಚಿದರೆ ಒಳಿತು…?

SUDDIKSHANA KANNADA NEWS/ DAVANAGERE/ DATE:12-11-2023

ದೀಪಾವಳಿ ಹಬ್ಬ ಬಂತೆಂದರೆ ದೀಪ ದೀಪ ಎಲ್ಲೆಲ್ಲೂ ದೀಪಗಳ ಸಡಗರ. ದೀಪವು ಮಂಗಳಕರ ಹಾಗೂ ಶುಭ. ಸೂರ್ಯ ಮತ್ತು ಅಗ್ನಿಯ ಸಂಕೇತವಾಗಿದೆ. ಮನುಷ್ಯರು ಕಂಡು ಹಿಡಿದ ಅದ್ಭುತಗಳಲ್ಲಿ ಬೆಂಕಿಯು ( ಅಗ್ನಿ) ಒಂದು. ಜಗತ್ತಿಗೆ ಬೆಳಕು ಶ್ರೇಷ್ಠ ಪ್ರಧಾನವಾದದ್ದು.

ಬೆಳಕಿಲ್ಲದೆ ಜಗತ್ತು ಇಲ್ಲ ಸಕಲ ಜೀವರಾಶಿಗಳಿಗೂ ಬೆಳಕು ಬೇಕೇ ಬೇಕು. ಪ್ರಾಚೀನ ಕಾಲದಲ್ಲಿ ದೀಪವನ್ನು ಕಲ್ಲು ಅಥವಾ ಚಿಪ್ಪಿನಿಂದ ಮಾಡುತ್ತಿದ್ದರು, ಕಾಲ ಬದಲಾವಣೆ ಆದಂತೆ ವಿಧ ವಿಧ ಮಣ್ಣಿನ, ಲೋಹದ ಹಾಗೂ ಬೆಳ್ಳಿ ದೀಪಗಳು ಬೆಳಕಿಗೆ ಬಂದುವು. ಮಣ್ಣಿನ ದೀಪ ಹಚ್ಚುವುದು ಸರ್ವ ಶ್ರೇಷ್ಠ.

ದೀಪಗಳಲ್ಲಿ ಹಲವು ವಿಧಗಳಿವೆ. ಪ್ರಾರ್ಥನೆಗಾಗಿ ಉಪಯೋಗಿಸುವ ದೀಪವೇ ಆರತಿದೀಪ ದೇವರ ಮುಂದೆ ಶಾಶ್ವತವಾಗಿ ಬೆಳಗುವ ದೀಪವೇ ನಂದಾದೀಪ. ಸರಪಳಿಗಳಿಂದ ತೂಗುಹಾಕಿದ ದೀಪ ತೂಗುದೀಪವಾದರೆ, ಪುಟ್ಟಸ್ತಂಭದಂಥ ಪೀಠದ ಮೇಲಿರುವ ದೀಪವೇ ಕಾಲುದೀಪ.

ದೀಪಗಳಿಗೂ ನಾನ ಹೆಸರಿನ ರೂಪಗಳು ದಿಯಾ, ಹಣತೆ. ಮನೆಯಲ್ಲಿ ದೀಪ ಬೆಳಗುವುದರಿಂದ ಸಕಾರಾತ್ಮಕ ಶಕ್ತಿಯ ಆಗಮನ, ನಕಾರಾತ್ಮಕ ಶಕ್ತಿಗಳ ನಿರ್ಗಮನ, ಶಾಂತಿ ನೆಮ್ಮದಿ ನೆಲೆಸುತ್ತದೆ. ದೀಪ ಅಂದರೆ ಲಕ್ಷ್ಮಿ ಸ್ವರೂಪ ಸಾಕ್ಷಾತ್ ಲಕ್ಷ್ಮಿ ಮನೆಯಲ್ಲಿ ವಾಸಿಸುತ್ತಾರೆ ಎಂಬುದು ನಂಬಿಕೆ.

ದೀಪ ಬೆಳಗಿಸುವ ಮೊದಲು ದೀಪ ಬೆಳಗಿಸಲು ನಿಯಮಗಳ ಬಗ್ಗೆ ತಿಳಿಯಿರಿ….?

ಯಾವ ಸಮಯದಲ್ಲಿ ದೀಪವನ್ನು ಬೆಳಗಿಸುವುದರಿಂದ ಮನೆಗೆ ಶ್ರೇಷ್ಠ, ಯಾವ ದಿಕ್ಕಿನಲ್ಲಿ ಬೆಳಗಿಸಬೇಕು ತಿಳಿದುಕೊಳ್ಳಬೇಕು. ಬೆಳಕು ದೀಪದಲ್ಲಿ ನೆಲೆಸಿದೆ  ಯಾವುದೇ ಶುಭ ಕಾರ್ಯಕ್ರಮಗಳನ್ನು ಶುರು ಮಾಡುವ ಮೊದಲು  ದೀಪ ಬೆಳಗುವುದರ ಮೂಲಕವೇ ಶುರುವಾಗುವುದು. ದೀಪಾ ಜ್ಞಾನಾಭಿವೃದ್ಧಿ ಯನ್ನು ಹೆಚ್ಚಿಸುತ್ತದೆ.

ಮನಸ್ಸಿನ ಅಂಧಕಾರವನ್ನು ತೊಲಗಿಸುತ್ತದೆ. ದೀಪವನ್ನು  ಜ್ಞಾನದ ಸಂಕೇತವೆಂದು ಕರೆಯುತ್ತಾರೆ. ದೀಪ ಕತ್ತಲೆಯ ತೊಲಗಿಸಿ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ. ದೀಪವನ್ನು ಬೆಳಗ್ಗೆ 5 ರಿಂದ 10 ರವರೆಗೆ ಸಂಜೆ 5ರಿಂದ 7ರವರೆಗೆ  ಬೆಳಗಿಸುವುದು ಶ್ರೇಷ್ಠ ಕಾಲ. ಮಣ್ಣಿನ ದೀಪವಾದರೆ ದೀಪದ ತುದಿಯು ಎಲ್ಲೂ  ಮುರಿದಿರಬಾರದು ಮುರಿದ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿ ದೇವಿಯ ತನುಮನ ತೃಪ್ತಿಯಾಗುವುದಿಲ್ಲ. 

ದೀಪವನ್ನು ಬೆಳಗಿಸುವ ಮೊದಲು ದ್ವೀಪವನ್ನು ಸ್ವಚ್ಛಗೊಳಿಸಿ ಉಪಯೋಗಿಸುವುದು.  ಪೂಜಿಸಲು  ದೇವರ ಮುಂದೆ ಬೆಳಗಿದ ದೀಪ ಗಾಳಿಗೆ ಮತ್ತೆ ಯಾವುದೊ ಕಾರಣದಿಂದ  ನಂದಿ ಹೋದರೆ ಮತ್ತೆ ದೀಪ ಹಚ್ಚಿ ದೇವರಿಗೆ ಭಕ್ತಿಯಲ್ಲಿ ಭಾವಪರವಶವಾಗಿ ಪೂಜೆ ಸಲ್ಲಿಸಬೇಕು. ದೀಪಗಳನ್ನು ಮೂಲೆಯಲ್ಲಿ ಇಡಬಾರದು ಮತ್ತು ಪಶ್ಚಿಮ ದಿಕ್ಕಿನಲ್ಲಿ ಇಡಬಾರದು.  ಇದರಿಂದ ಹಣಕಾಸಿನ ತೊಂದರೆ ಹೆಚ್ಚಾಗುತ್ತದೆ. ಸಂಜೆಯ  ಸಮಯ  ಮನೆಯ ಮುಖ್ಯ ಬಾಗಿಲಲ್ಲಿ ರಂಗೋಲಿ ಬಿಡಿಸಿ ದೀಪ ಬೆಳಗಿಸುವುದು ಶುಭಕರ.

ಲೇಖಕಿ: ವಾಣಿ ಮೈಸೂರು, ಲೇಖಕರು, ಬರಹಗಾರರು

 

Exit mobile version