Site icon Kannada News-suddikshana

ಯುವನಿಧಿಗೆ ಅರ್ಜಿ ಹಾಕುವುದು ಹೇಗೆ ಗೊತ್ತಾ…? ಏನು ಮಾಡಬೇಕು ಇಲ್ನೋಡಿ

SUDDIKSHANA KANNADA NEWS/ DAVANAGERE/ DATE:03-01-2024

ದಾವಣಗೆರೆ: ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಜಾರಿಗೆ ಮುಹೂರ್ತ ಫಿಕ್ಸ್ ಆಗಿದೆ. ನಿರುದ್ಯೋಗ ಪದವೀಧರರು ಅರ್ಜಿ ಸಲ್ಲಿಸಲು ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಅರ್ಜಿ ಹಾಕುವ ವಿಧಾನ;

ಸೇವಾಸಿಂಧೂ ಪೋರ್ಟಲ್‍ಗೆ ಹೋಗಿ ಮೆನುನಲ್ಲಿ ಕ್ಲಿಕ್ ಅಫ್ಲಿಕೇಷನ್ ಸರ್ವೀಸಸ್, ಎಲ್ಲಾ ಸೇವೆಗಳು ತೆರದುಕೊಳ್ಳುತ್ತವೆ, ಇಲ್ಲಿ ಯುವನಿಧಿ ಅರ್ಜಿ ಕ್ಲಿಕ್ ಮಾಡಬೇಕು, ನಂತರ ಅರ್ಜಿ ಪುಟ ತೆರದುಕೊಳ್ಳುತ್ತದೆ.

ಇಲ್ಲಿ ವಿದ್ಯಾರ್ಥಿಯ ಸ್ವಯಂ ಘೋಷಣೆ ಯಸ್ ಅಥವಾ ನೋ ಇದರಲ್ಲಿ 6 ಅರ್ಹತೆಗಳನ್ನು ಹೊಂದಿರಬೇಕು. ನಂತರ ಆಧಾರ್ ದೃಢೀಕರಣ ಮಾಡಬೇಕು, ಆಧಾರ್ ಮಾಹಿತಿ ಬಾಕ್ಸ್ ಚೆಕ್ ಮಾಡಿ, ನಂತರ ಓಟಿಪಿ ಜನರೇಟ್ ಮಾಡಬೇಕು, ನಂತರ ಮೊಬೈಲ್‍ಗೆ ಓಟಿಪಿ ಬರುತ್ತದೆ. ನಂತರ ಎಲ್ಲಾ ವಿವರ ಅರ್ಜಿಗೆ ಆಧಾರ್‍ನಂತೆ ತೆರೆದುಕೊಳ್ಳಲಿದ್ದು ಸಬ್‍ಮಿಟ್ ಮಾಡಬೇಕು.

ವಿಳಾಸ ಸರಿಯಿದ್ದಲ್ಲಿ ಯಥಾವತ್ತು, ಇಲ್ಲದಿದ್ದಲ್ಲಿ ಅರ್ಜಿದಾರರ ತಾಲ್ಲೂಕು, ಜಿಲ್ಲೆ ಟೈಪ್ ಮಾಡಬೇಕು, ನಂತರ ನಾಡ್‍ನಲ್ಲಿ ಪದವಿ ಶಿಕ್ಷಣದ ಪ್ರಮಾಣ ಪತ್ರದ ಸಂಖ್ಯೆ ಟೈಪ್ ಮಾಡಿದಲ್ಲಿ ವಿವರ ಸ್ವಯಂ ಪ್ರೇರಿತವಾಗಿ ತೆರದುಕೊಳ್ಳುತ್ತದೆ. ಶಿಕ್ಷಣದ ವಿವರ ದಾಖಲು ಮಾಡಬೇಕು, ಇದು ಅರ್ಜಿ ನೊಂದಣಿಯ ವಿವಿಧ ಹಂತಗಳಾಗಿರುತ್ತವೆ.

ಯುವನಿಧಿ ನೊಂದಣಿಯನ್ನು ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಸೇವಾಸಿಂಧೂ ಪೋರ್ಟಲ್‍ನಲ್ಲಿ ನೊಂದಣಿ ಮಾಡಬಹುದಾಗಿದೆ. ಆದರೂ ಸಹ ಅಭಿಯಾನದ ಮೂಲಕ ಹೆಚ್ಚು ಜನರ ನೊಂದಣಿ ಮಾಡಲು
ಹಾಗೂ ಯಾರು ಸಹ ಈ ಯೋಜನೆಯಿಂದ ಹೊರಗುಳಿಯಬಾರದೆಂದು ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ ಕಚೇರಿ, ತಾಲ್ಲೂಕು ಪಂಚಾಯಿತಿಯಲ್ಲಿ ನೊಂದಣಿ ಅಭಿಯಾನವನ್ನು ಹೆಚ್ಚುವರಿಯಾಗಿ ಮಾಡಲಾಗುತ್ತದೆ.

ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ನಿವಾರಣೆಗಾಗಿ ದಾವಣಗೆರೆ ಪಾಲಿಕೆ ನಿಯಂತ್ರಣ ಕೊಠಡಿಯಲ್ಲಿ ಕಾಲ್ ಸೆಂಟರ್ ತೆರೆಯಲಾಗುತ್ತದೆ. ಮತ್ತು ಎಲ್ಲಾ ತಾಲ್ಲೂಕುಗಳಲ್ಲಿನ ತಾಲ್ಲೂಕು ಕಚೇರಿಯಲ್ಲಿ ಕಾಲ್ ಸೆಂಟರ್ ತಾತ್ಕಾಲಿಕವಾಗಿ ತೆರೆಯುವಂತೆ ಸೂಚನೆ ಕೊಡಲಾಗಿದೆ.

Exit mobile version