ದಾವಣಗೆರೆ: ಲಂಬಾಣಿ ಸಮುದಾಯದವರು ಒಳ್ಳೆಯವರು. ಶೇಕಡಾ 90ರಷ್ಟು ಮಂದಿ ಒಳ್ಳೆಯವರಾಗಿದ್ದರೂ ಶೇಕಡಾ 10ರಷ್ಟು ಮಂದಿ ಕೆಟ್ಟವರು ಇರುತ್ತಾರೆ. ನೂರು ಮಂದಿ ಹೆದರಿಸಲು ಬಂದರೆ ಹೆದರಲು ಆಗುತ್ತಾ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಖಡಕ್ ಉತ್ತರ ನೀಡಿದರು.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬಾಯ್ ಗಡ್ ಸೂರಗೊಂಡನಕೊಪ್ಪದಲ್ಲಿ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಅವರ 287ನೇ ಜಯಂತಿ ಕಾರ್ಯಕ್ರಮದ ವೇಳೆ ಚಪ್ಪಲಿ ತೋರಿಸಿದ್ದಕ್ಕೆ ಈ ರೀತಿಯ ಪ್ರತಿಕ್ರಿಯೆ ನೀಡಿದರು.
ಘಟನೆಯ ಹಿನ್ನೆಲೆ
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಅವರ 287ನೇ ಜಯಂತಿ ಕಾರ್ಯಕ್ರಮದ ವೇಳೆ ಪ್ರತಿಭಟನಾಕಾರರು ಚಪ್ಪಲಿ ತೋರಿಸಿದ ಘಟನೆ ನಡೆಯಿತು. ಈ ವರ್ತನೆಯಿಂದ ಕೆಂಡಾಮಂಡಲವಾದ ಡಿ.ಕೆ. ಶಿವಕುಮಾರ್ ಅವರು ವೇದಿಕೆಯ ಮೇಲೆಯೇ ಕಠಿಣ ಶಬ್ದಗಳಲ್ಲಿ ಉತ್ತರ ನೀಡಿದರು.
ಡಿ.ಕೆ. ಶಿವಕುಮಾರ್ ಅವರ ಪ್ರಮುಖ ಹೇಳಿಕೆಗಳು
ಹೆದರುವ ಪ್ರಶ್ನೆಯೇ ಇಲ್ಲ: “ನೂರು ಮಂದಿಯನ್ನು ಕರೆದುಕೊಂಡು ಬಂದು ಹೆದರಿಸಲು ಬಂದರೆ ನಾವು ಹೆದರುತ್ತೇವೆಯೇ? ಇಂತಹದ್ದನ್ನು ನಾವು ಬಹಳ ನೋಡಿದ್ದೇವೆ. ಯಾವುದೇ ಕಾರಣಕ್ಕೂ ಜಗ್ಗುವ ಅಥವಾ ಹೆದರುವ ಜಾಯಮಾನ ನಮ್ಮದಲ್ಲ.”
ಸಮುದಾಯದ ಬಗ್ಗೆ ಮೆಚ್ಚುಗೆ: “ಲಂಬಾಣಿ ಸಮುದಾಯದವರು ತುಂಬಾ ಒಳ್ಳೆಯವರು. ಶೇ. 90ರಷ್ಟು ಮಂದಿ ಸಾಧು ಪ್ರಾಣಿಗಳು, ಆದರೆ ಶೇ. 10ರಷ್ಟು ಮಂದಿ ರಾಜಕೀಯ ಪ್ರೇರಿತರಾಗಿ ಈ ರೀತಿ ಕೆಟ್ಟದಾಗಿ ವರ್ತಿಸುತ್ತಿದ್ದಾರೆ.”
ರಾಜಕೀಯ ಟೀಕೆ: ಇದು ರಾಜಕೀಯ ಸಭೆಯಲ್ಲ, ಬದಲಿಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮ. ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಸಹಿಸಲಾಗದೆ ಬಿಜೆಪಿ ಮತ್ತು ವಿರೋಧ ಪಕ್ಷದವರು ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಕೊಡುಗೆಗಳ ಸ್ಮರಣೆ
ಪ್ರತಿಭಟನಾಕಾರರಿಗೆ ತಿರುಗೇಟು ನೀಡುವ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಪಕ್ಷ ಸಮುದಾಯಕ್ಕೆ ನೀಡಿದ ಕೊಡುಗೆಗಳನ್ನು ಪಟ್ಟಿ ಮಾಡಿದರು:
ಎಸ್.ಸಿ ಮೀಸಲಾತಿ: ಬಂಜಾರ ಸಮುದಾಯವನ್ನು ಪರಿಶಿಷ್ಟ ಜಾತಿಗೆ (SC) ಸೇರಿಸಿದ್ದು ಕಾಂಗ್ರೆಸ್ ಪಕ್ಷ.
ಅಭಿವೃದ್ಧಿ ನಿಗಮ: ಸಮುದಾಯದ ಏಳಿಗೆಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ.
ಭೂಮಿ ಹಕ್ಕು: ತಾಂಡಾಗಳಲ್ಲಿ ವಾಸಿಸುವ ಸುಮಾರು 1 ಕೋಟಿ 11 ಲಕ್ಷ ಮಂದಿಗೆ ಭೂಮಿ ಪಟ್ಟ (ಹಕ್ಕು ಪತ್ರ) ನೀಡಿದ ಹೆಮ್ಮೆ ನಮ್ಮದು.
ಸಂತ ಸೇವಲಾಲ್ ಜಯಂತಿ ಕಾರ್ಯಕ್ರಮ ಜಕೀಯದ ಸಭೆ ಅಲ್ಲ. ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಡಿಸಿದೆ. ಕಾಂಗ್ರೆಸ್ ಪಕ್ಷದ ಜನಪ್ರಿಯ ಯೋಜನೆಳು, ಆಡಳಿತವನ್ನು ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಈಗಾಗಲೇ ರಾಜೀವ್ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿ ಈ ರೀತಿ ಮಾಡ್ತಿದ್ದಾರೆ. ನೂರು ಮಂದಿ ಕರೆದುಕೊಂಡು ಬಂದು ಹೆದರಿಸಿದರೆ ಹೆದರುತ್ತೇವೆಯೇ. ಇಂಥವನ್ನು ಬಹಳ ನೋಡಿದ್ದೇವೆ. ಯಾವುದೇ ಕಾರಣಕ್ಕೂ ಹೆದರುವ, ಜಗ್ಗುವ ಜಾಯಮಾನ ನಮ್ಮದಲ್ಲ ಎಂದು ಹೇಳಿದರು.
ಲಂಬಾಣಿ ಸಮುದಾಯದವರು ಒಳ್ಳೆಯವರು. ಶೇಕಡಾ 10ರಷ್ಟು ಮಂದಿ ಇರ್ತಾರೆ. ರಾಜಕಾರಣ ಮುಖ್ಯ ಅವರಿಗೆ. ಸಮುದಾಯದ ಬದುಕಿಗೆ ಶ್ರಮಿಸಿದವರು ನಾವು. ಬಂಜಾರ ಸಮುದಾಯವನ್ನು ಎಸ್ಸಿಗೆ ಸೇರಿಸಿದ್ದೇ ಕಾಂಗ್ರೆಸ್. ಸಮುದಾಯಕ್ಕೆ ಅಭಿವೃದ್ಧಿ ನಿಗಮ ಕೊಟ್ಟಿದ್ದೇ ಕಾಂಗ್ರೆಸ್. ತಾಂಡಾಗಳಲ್ಲಿ ವಾಸಿಸುವ ಒಂದು ಕೋಟಿ 11 ಲಕ್ಷ ಮಂದಿಗೆ ಭೂಮಿ ಪಟ್ಟ ನೀಡಿದ್ದೇವೆ. ಇಂಥ ಒಳ್ಳೆಯ ಕಾರ್ಯ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.





Leave a comment