SUDDIKSHANA KANNADA NEWS/DAVANAGERE/DATE:29_11_2025
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಸಿಎಂ ಖುರ್ಚಿ ಬದಲಾವಣೆ ಸದ್ದು ಜೋರಾಗಿಯೇ ಇದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯರು ಕರೆದ ಡಿನ್ನರ್ ಮೀಟಿಂಗ್ ಗೆ ಡಿಸಿಎಂ ಡಿ. ಕೆ. ಶಿವಕುಮಾರ್ ಆಗಮಿಸಿದ್ದಾರೆ. ಈ ಮೂಲಕ ಇಬ್ಬರು ನಾಯಕರು ಅಧಿಕಾರ ಹಂಚಿಕೆ ಕುರಿತಂತೆ ಸಮಾಲೋಚನೆ ನಡೆಸಿದ್ದಾರೆ.
ಸಿದ್ದರಾಮಯ್ಯರು ಐದು ವರ್ಷ ಪೂರೈಸಲು ಅವಕಾಶ ನೀಡಿ. ಇದೇ ರೀತಿಯಲ್ಲಿ ಮುನ್ನಡೆಯೋಣ. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸೋಣ. ಇಬ್ಬರು ಸೇರಿ ಅಧಿಕಾರ ತಂದಾಗ ನೀವೇ ಮುಖ್ಯಮಂತ್ರಿಯಾಗಿ ಎಂದು ಸಿದ್ದರಾಮಯ್ಯರು ಡಿಕೆಶಿಗೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಮಾತಿನಂತೆ ನಡೆದುಕೊಳ್ಳಿ. ಎರಡೂವರೆ ವರ್ಷ ಮುಖ್ಯಮಂತ್ರಿಯಾಗಲು ಅನುವು ಮಾಡಿಕೊಡಿ. ನಾನು ನಿಮಗೆ ಎರಡೂವರೆ ವರ್ಷ ಸಹಕಾರ ಕೊಟ್ಟಿದ್ದೇನೆ. ಮುಂದೆಯೂ ನಿಮ್ಮ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ. 2028ರ ಚುನಾವಣೆ ಬಳಿಕ ಏನಾಗುತ್ತೋ ಏನೋ ಎಂದು ಡಿಕೆಶಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಭೇಟಿಯಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರದೊಳಗೆ ನಡೆಯುತ್ತಿರುವ ನಾಯಕತ್ವದ ಹಗ್ಗಜಗ್ಗಾಟದ ಬಗ್ಗೆ ಚರ್ಚಿಸಿದರು. ಶಿವಕುಮಾರ್ ಮತ್ತು ಅವರ ಬೆಂಬಲಿಗರು ಪಕ್ಷವು ಅಧಿಕಾರ ಹಂಚಿಕೆ ಒಪ್ಪಂದವನ್ನು ಗೌರವಿಸಬೇಕೆಂದು ಒತ್ತಾಯಿಸಿದ್ದಾರೆ, ಸರ್ಕಾರವು ತನ್ನ ಅವಧಿಯ ಮಧ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಆದೇಶದ ಮೇರೆಗೆ ಸಭೆ ಕರೆಯಲಾಗಿದೆ. ಶಿವಕುಮಾರ್ ಅವರು ‘ಆತುರವಿಲ್ಲ’ ಎಂದು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪುನರುಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ.





Leave a comment