Site icon Kannada News-suddikshana

ದೂರ ಶಿಕ್ಷಣ ಪ್ರವೇಶಾತಿಗೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಅರ್ಜಿ

SUDDIKSHANA KANNADA NEWS/ DAVANAGERE/ DATE_04-07_2025

ಬೆಂಗಳೂರು: ಅಲ್ಪಸಂಖ್ಯಾತರ ನಿರ್ದೇಶನಾಲಯ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಪರಸ್ಪರ ಒಡಂಬಡಿಕೆಯೊಂದಿಗೆ ಬೆಂಗಳೂರು ಹಜ್ ಭವನದಲ್ಲಿ ಪ್ರಾದೇಶಿಕ ಕೇಂದ್ರವನ್ನು ತೆರೆಯಲಾಗಿದ್ದು, ದೂರ ಶಿಕ್ಷಣದ ಪ್ರವೇಶಾತಿಗಾಗಿ ಜಿಲ್ಲೆಯ ಅರ್ಹ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸ್ನಾತಕ ಪದವಿ, ಸ್ನಾತ್ತಕೋತ್ತರ ಪದವಿ, ಸರ್ಟಿಫಿಕೇಟ್ ಹಾಗೂ ಡಿಪ್ಲೋಮಾ ಶಿಕ್ಷಣ ಕ್ರಮಗಳಲ್ಲಿ ವ್ಯಾಸಂಗ ಮಾಡಬಯಸುವ ಅರ್ಹ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ,) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಸುದ್ದಿಯನ್ನೂ ಓದಿ: ಭದ್ರಾ ಡ್ಯಾಂ (Bhadra Dam) ನೀರು ಸಂಗ್ರಹಿಸದೇ ನದಿಗೆ ನೀರು ಬಿಡುಗಡೆ ಯಾಕೆ: ಅಚ್ಚುಕಟ್ಟು ವ್ಯಾಪ್ತಿಯ ರೈತರ ಪ್ರಶ್ನೆಗೆ ಅಧಿಕಾರಿಗಳ ಸ್ಪಷ್ಟನೆ!

ಇಲಾಖೆಯ ಅಂತರ್ಜಾಲ https://dom.karnataka.gov.in ಅಥವಾ https://minority.ksouportal.com ನಲ್ಲಿ ಲಭ್ಯವಿರುವ ಆನ್‌ಲೈನ್ ಆಡ್ಮಿಷನ್ ಪೋರ್ಟಲ್‌ನಲ್ಲಿ ಪ್ರವೇಶಾತಿ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಆ.25 ಕೊನೆಯ ದಿನ.

ಅಲ್ಪಸಂಖ್ಯಾತರ ನಿರ್ದೇಶನಾಲಯವು ಆಯಾ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಹಾಗೂ ಪರೀಕ್ಷಾ (ವಾರ್ಷಿಕ/ಎರಡು ಸೆಮಿಸ್ಟರ್‌ಗಳ) ಶುಲ್ಕವನ್ನು ಮಾತ್ರ ಪಾವತಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಹಜ್ ಭವನದ ಅಧಿಕಾರಿ ಕಚೇರಿ, ಹಜ್ ಭವನದಲ್ಲಿರುವ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕರ ಕಚೇರಿ ಅಥವಾ ಮೊ.9900667916, 9945366062, 9113512565, 96113512565, 9611418726, 9900506659, 9035395137, 8123469017, 9844010407, 8277799990 ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

Exit mobile version