Site icon Kannada News-suddikshana

ಡಿಪ್ಲೊಮಾ, ಐಟಿಐ ಪಾಸಾದವರ ಅಪ್ರೆಂಟಿಸ್ ಮೇಳ: ಫೆ. 19ಕ್ಕೆ ಮುಂದೂಡಿಕೆ

SUDDIKSHANA KANNADA NEWS/ DAVANAGERE/ DATE:09-02-2024

ದಾವಣಗೆರೆ: ಹರಿಹರದ ಎಪಿಎಂಸಿ ಬಳಿ ಇರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಡಿಪ್ಲೊಮಾ, ಐಟಿಐ ಪಾಸಾದವರಿಗೆ ಏರ್ಪಡಿಸಲಾದ ಜಿಲ್ಲಾ ಮಟ್ಟದ ರಾಷ್ಟ್ರೀಯ ಅಪ್ರೆಂಟಿಸ್ ಮೇಳವನ್ನು
ಫೆಬ್ರವರಿ 19 ಕ್ಕೆ ಮುಂದೂಡಲಾಗಿದೆ.

ಈ ಶಿಶಿಕ್ಷು ಮೇಳದಲ್ಲಿ ಜಿಲ್ಲೆಯ ಐ.ಟಿ.ಐ, ಡಿಪ್ಲೋಮಾ ಪಾಸ್ ಆದ ನಿರುದ್ಯೋಗಿ ಯುವಕ, ಯುವತಿಯರು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9480085001, 9945049894, 9743104863 ಸಂಪರ್ಕಿಸಲು ಸ.ಕೈ.ತ.ಸಂಸ್ಥೆ ಪ್ರಾಂಶುಪಾಲರಾದ ಜಯಪ್ಪ ಎಂ. ತಿಳಿಸಿದ್ದಾರೆ.

Exit mobile version