SUDDIKSHANA KANNADA NEWS/ DAVANAGERE/ DATE-23-05-2025
ಉಡುಪಿ: ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ತನ್ನ ತಂದೆಯನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದಾರೆ ಎಂಬ ದೂರು ಕೇಳಿ ಬಂದಿದ್ದು, ಚೈತ್ರಾ ಕುಂದಾಪುರ ಯಾರ ಸಂಪರ್ಕಕ್ಕೂ ಸಿಗದೇ ಎಸ್ಕೇಪ್ ಆಗಿದ್ದಾರೆ.
ಇನ್ನು ಾಕೆ ತಂದೆ ಬಾಲಕೃಷ್ಣ ನಾಯ್ಕ್ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ತನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ. ತನಗೆ ರಕ್ಷಣೆ ಒದಗಿಸಬೇಕೆಂದು ಕುಂದಾಪುರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಆಸ್ತಿ ಲಪಟಾಯಿಸಲು ಮತ್ತು ಜನರಿಗೆ ಮೋಸ ಮಾಡಲು ನನ್ನ ಪುತ್ರಿ ಮತ್ತು ಹೆಂಡತಿ ಸಂಚು ರೂಪಿಸಿದ್ದರು. ಈ ವಿಚಾರ ನನಗೆ ತಿಳಿದಿತ್ತು. ಇತ್ತೀಚೆಗಷ್ಟೇ ಶ್ರೀಕಾಂತ್ ಎಂಬಾತನನ್ನು ಚೈತ್ರಾ ಮದುವೆಯಾಗಿದ್ದು, ಇಬ್ಬರು ಕಳ್ಳರು ಎಂದು ಗುಡುಗಿದ್ದರು.
ಈಗ ಚೈತ್ರಾ ಕುಂದಾಪುರ ಮತ್ತು ಆಕೆ ತಂದೆ ಫೋನ್ ಸ್ವಿಚ್ ಆಫ್ ಆಗಿದ್ದು, ಯಾರ ಕೈಗೂ ಸಿಗುತ್ತಿಲ್ಲ. ಚೈತ್ರಾ ಕುಂದಾಪುರ ಮದುವೆಯಾದ ಬಳಿಕ ಆರೋಪಗಳ ಮೇಲೆ ಆರೋಪ ಮಾಡುತ್ತಿರುವ ಆಕೆ ತಂದೆ ಈಗ ಪುತ್ರಿಯ ಮೇಲೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.