Site icon Kannada News-suddikshana

ಸರೋವರದಲ್ಲಿ ಬಾಂಗ್ಲಾದೇಶ ಟಿವಿ ಪತ್ರಕರ್ತೆಯ ಶವ ಪತ್ತೆ!

ಢಾಕಾ: ಬಾಂಗ್ಲಾದೇಶ ಟಿವಿ ಪತ್ರಕರ್ತೆ ಸಾರಾ ರಹನುಮಾ ಅವರ ಮೃತದೇಹವು ಢಾಕಾದ ಹತಿರ್‌ಜೀಲ್ ಸರೋವರದಲ್ಲಿ ಬುಧವಾರ ಪತ್ತೆಯಾಗಿದೆ.

ಸರೋವರದಲ್ಲಿ ಆಕೆಯ ಮೃತದೇಹ ತೇಲುತ್ತಿರುವುದು ಕಂಡುಬAದಿದೆ. ಮೃತದೇಹವನ್ನು ಸರೋವರದಿಂದ ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಸಾವಿಗೂ ಮುನ್ನ ಸಾರಾ ನಿನ್ನೆ ರಾತ್ರಿ ಫೇಸ್‌ಬುಕ್‌ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದರು. “ನಿಮ್ಮಂತಹ ಸ್ನೇಹಿತನನ್ನು ಹೊಂದಲು ಸಂತೋಷವಾಗಿದೆ. ದೇವರು ನಿಮ್ಮನ್ನು ಯಾವಾಗಲೂ ಆಶೀರ್ವದಿಸಲಿ. ಶೀಘ್ರದಲ್ಲೇ ನಿಮ್ಮ ಎಲ್ಲಾ ಕನಸುಗಳನ್ನು ನೀವು ಈಡೇರಿಸುತ್ತೀರಿ ಎಂದು ಭಾವಿಸುತ್ತೇವೆ. ನಾವು ಒಟ್ಟಿಗೆ ಸಾಕಷ್ಟು ಯೋಜನೆಯನ್ನು ಹೊಂದಿದ್ದೇವೆ ಎಂದು ನನಗೆ ತಿಳಿದಿದೆ. ಕ್ಷಮಿಸಿ, ನಮ್ಮ ಯೋಜನೆಗಳನ್ನು ಪೂರೈಸಲು ನನಗೆ ಸಾಧ್ಯವಾಗುತ್ತಿಲ್ಲ. ನಿಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ದೇವರು ನಿಮ್ಮನ್ನು ಆಶೀರ್ವದಿಸಲಿ” ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ಹಿಂದಿನ ಪೋಸ್ಟ್ ನಲ್ಲಿ ಅವರು, ಸಾವಿಗೆ ಸಮಾನವಾದ ಜೀವನವನ್ನು ಬದುಕುವುದಕ್ಕಿಂತ ಸಾಯುವುದು ಉತ್ತಮ ಎಂದು ಪೋಸ್ಟ್ ಮಾಡಿದ್ದರು.

ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಆಕೆಯ ಪತಿ ಸೈಯದ್ ಶುವ್ರೋ ಪ್ರಕಾರ, ಅವಳು ಕೆಲಸಕ್ಕೆ ಹೋಗಿದ್ದಳು. ಆದರೆ ಮನೆಗೆ ಹಿಂದಿರುಗಲಿಲ್ಲ. ಬೆಳಗಿನ ಜಾವ 3 ಗಂಟೆಗೆ ಆಕೆ ಕೆರೆಗೆ ಹಾರಿದ್ದಾಳೆ ಎಂಬ ಮಾಹಿತಿ ಲಭಿಸಿದೆ ಎಂದು ಹೇಳಿದ್ದಾರೆ.

Exit mobile version