ದಾವಣಗೆರೆ: ಆನ್ ಲೈನ್ ಮೂಲಕ ಹೊನ್ನಾಳಿಯ ಶಿಕ್ಷಕರೊಬ್ಬರಿಗೆ 11.93 ಲಕ್ಷ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
READ ALSO THIS STORY: ಜಬರ್ದಸ್ತ್ ಬ್ಯಾಟಿಂಗ್.. ಅದ್ಭುತ ಕ್ಯಾಚ್ ಗಳು… ಶಿಸ್ತುಬದ್ಧ ಫೀಲ್ಡಿಂಗ್.. ನಿಖರ ದಾಳಿ: ವಿಶ್ವಕಪ್ ಗೆದ್ದ ಭಾರತ ವನಿತೆಯರಿಗೆ ಭರ್ಜರಿ ಗಿಫ್ಟ್!
ಶೇ. 300ರಷ್ಟು ಲಾಭ ಬರುತ್ತದೆ ಎಂದು ಶಿಕ್ಷಕರಿಗೆ ನಂಬಿಸಿ ಹೊಸ ಕಂಪನಿಗಳಲ್ಲಿ ಷೇರು ಹೂಡಿಕೆ ಮಾಡಿ ಎಂದು ನಂಬಿಸಲಾಗಿದೆ. ಇದನ್ನು ನಂಬಿದ ಶಿಕ್ಷಕ 11.93 ಲಕ್ಷ ರೂಪಾಯಿ ವಿನಿಯೋಗಿಸಿದ್ದಾರೆ.
ಹೊನ್ನಾಳಿಯ ಶಿಕ್ಷಕರ ಮೊಬೈಲ್ ನಂಬರ್ ಅನ್ನು ವಾಟ್ಸಪ್ ಗ್ರೂಪ್ ಗೆ ಸೇರಿಸಲಾಗಿದೆ. ಷೇರು ಹೂಡಿಕೆ ಮಾಡಿದರೆ ಖಂಡಿತ ಲಾಭ ಸಿಗುತ್ತದೆ ಎಂದು ವಂಚಕರು ನಂಬಿಸಿದ್ದಾರೆ. ವಂಚಕರು ತಿಳಿಸಿದ ಬ್ಯಾಂಕ್ ಖಾತೆಗೆ ಲಾಭದ ಹಣದ ಆಸೆಗಾಗಿ ಹಂತ ಹಂತವಾಗಿ 11.93 ಲಕ್ಷ ರೂಪಾಯಿ ಅನ್ನು ಆನ್ ಲೈನ್ ಮೂಲಕ ಪಾವತಿ ಮಾಡಿದ್ದಾರೆ. ಕೊನೆಗೆ ಹಣ ಬಿಡಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಪ್ರಶ್ನಿಸಿದ್ದಾರೆ. ಆಗ ವಂಚಕರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮೋಸ ಹೋಗಿರುವುದು ಗೊತ್ತಾಗಿದೆ.
ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕರ ಪತ್ತೆಗೆ ಬಲೆ ಬೀಸಲಾಗಿದೆ.


