Home ಕ್ರೈಂ ನ್ಯೂಸ್ ದೆಹಲಿಯ 9ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ: ಸಂಸತ್ ಭವನ ಉಡಾಯಿಸುವ ಎಚ್ಚರಿಕೆ ನೀಡಿದ ಕಿಡಿಗೇಡಿಗಳು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ದೆಹಲಿಯ 9ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ: ಸಂಸತ್ ಭವನ ಉಡಾಯಿಸುವ ಎಚ್ಚರಿಕೆ ನೀಡಿದ ಕಿಡಿಗೇಡಿಗಳು!

Share
ಶಾಲೆ
Share

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪ್ರತಿಷ್ಠಿತ ಶಾಲೆಗಳಿಗೆ ಸೋಮವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ದೆಹಲಿ ಕಂಟೋನ್ಮೆಂಟ್‌ನ ಲೊರೆಟೊ ಕಾನ್ವೆಂಟ್, ರೋಹಿಣಿಯ ಬಾಲ ಭಾರತಿ ಮತ್ತು ಕೇಂಬ್ರಿಡ್ಜ್ ಶಾಲೆ ಸೇರಿದಂತೆ ಒಟ್ಟು 9ಕ್ಕೂ ಹೆಚ್ಚು ಶಾಲೆಗಳಿಗೆ ಈ ಬೆದರಿಕೆ ಬಂದಿದೆ.

ಬೆದರಿಕೆ ಬಂದ ಶಾಲೆಗಳು: 

ದೆಹಲಿ ಕಂಟೋನ್ಮೆಂಟ್

ದಕ್ಷಿಣ ದೆಹಲಿಯ ಶ್ರೀನಿವಾಸಪುರಿ,

ಕೇಂಬ್ರಿಡ್ಜ್ ಶಾಲೆ ವಾಯುವ್ಯ ದೆಹಲಿಯ ರೋಹಿಣಿ,

ವೆಂಕಟೇಶ್ವರ ಶಾಲೆ ಸಿಎಂ ಶಾಲೆ,

ರೋಹಿಣಿ ಬಾಲ ಭಾರತಿ ಶಾಲೆ,

ರೋಹಿಣಿ ದಕ್ಷಿಣ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ,

ಕೇಂಬ್ರಿಡ್ಜ್ ಶಾಲೆ

ದಕ್ಷಿಣ ದೆಹಲಿಯ ಸಾದಿಕ್ ನಗರ

 ದಿ ಇಂಡಿಯನ್ ಸ್ಕೂಲ್ ಡಿಟಿಎ ಶಾಲೆ,

ಐಎನ್ಎ

ಸಂಸತ್ ಭವನಕ್ಕೂ ಬೆದರಿಕೆ:

ಕಳುಹಿಸಲಾದ ಇ-ಮೇಲ್‌ನಲ್ಲಿ ಕೇವಲ ಶಾಲೆಗಳಲ್ಲದೆ, ಮುಂಬರುವ ಫೆಬ್ರವರಿ 13ರಂದು ಮಧ್ಯಾಹ್ನ 1:11ಕ್ಕೆ ಭಾರತದ ಸಂಸತ್ ಭವನವನ್ನು ಸ್ಫೋಟಿಸುವುದಾಗಿ ಉಗ್ರರು ಎಚ್ಚರಿಕೆ ನೀಡಿದ್ದಾರೆ. ಇ-ಮೇಲ್‌ನಲ್ಲಿ “ದೆಹಲಿಯು ಖಲಿಸ್ತಾನ್ ಆಗಲಿದೆ” ಎಂಬ ಪ್ರಚೋದನಾಕಾರಿ ಸಂದೇಶಗಳಿದ್ದು, ಅಫ್ಜಲ್ ಗುರು ಸ್ಮರಣಾರ್ಥ ಈ ದಾಳಿ ನಡೆಸುವುದಾಗಿ ಉಲ್ಲೇಖಿಸಲಾಗಿದೆ.

ಪೊಲೀಸ್ ಕಾರ್ಯಾಚರಣೆ:

ಬೆಳಿಗ್ಗೆ 8:33ಕ್ಕೆ ಮೊದಲ ಕರೆ ಬಂದ ತಕ್ಷಣ ದೆಹಲಿ ಅಗ್ನಿಶಾಮಕ ದಳ (DFS), ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ದೆಹಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಂದ ವಿದ್ಯಾರ್ಥಿಗಳನ್ನು ತಕ್ಷಣವೇ ಸ್ಥಳಾಂತರಿಸಲಾಗಿದ್ದು, ಇಡೀ ಆವರಣವನ್ನು ತಪಾಸಣೆ ಮಾಡಲಾಗುತ್ತಿದೆ. ಸದ್ಯಕ್ಕೆ ಪೊಲೀಸರು ಸೈಬರ್ ಸೆಲ್ ಮೂಲಕ ಇ-ಮೇಲ್ ಬಂದ ಮೂಲವನ್ನು ಪತ್ತೆಹಚ್ಚುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *