Site icon Kannada News-suddikshana

ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ

ಅಜಿರ್ಬೈಜಾನ್‌ನ ಜೋಲ್ಬಾ ಪ್ರದೇಶದಲ್ಲಿ ನಿನ್ನೆ ಪತನಗೊಂಡಿದ್ದ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ
ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.

ಹೀಗಿರುವಾಗ ಅಧ್ಯಕ್ಷ ರೈಸಿ, ವಿದೇಶಾಂಗ ಸಚಿವ ಹುಸೈನ್‌ ಅಮಿರಾಬ್ದೊಲ್ಲಾಹಿಯಾನ್‌ ಮೃತಪಟ್ಟಿರುವುದು ಇದೀಗ ದೃಢಪಟ್ಟಿದೆ. ಆದರೆ ಈ ಬಗ್ಗೆ ಇರಾನ್‌ ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬೀಳಬೇಕಿದೆ. ಈ ಹಿನ್ನಲೆ ದೇಶಾದ್ಯಂತ ಶೋಕಾಚರಣೆ ಕೂಡ ನಡೆಯಲಿದೆ. ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಅಧ್ಯಕ್ಷರ ಹೆಲಿಕಾಪ್ಟರ್‌ ದಟ್ಟ ಮಂಜಿನ ನಡುವೆ ಕಣಿವೆಯಲ್ಲಿ ಪತನವಾಗಿತ್ತು.

Exit mobile version