SUDDIKSHANA KANNADA NEWS/ DAVANAGERE/ DATE:17_07_2025
ದಾವಣಗೆರೆ: ಬಾಪೂಜಿ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಎಸ್. ರಾಜಶೇಖರ್ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಅವರಿಗೆ 72 ವರ್ಷ ವಯಸ್ಸಾಗಿತ್ತು. ದಾವಣಗೆರೆ ಸಿಟಿ ಆಂಜನೇಯ ಬಡಾವಣಎಯ 16ನೇ ಕ್ರಾಸ್ ಕಲ್ಲೇಶ್ವರ ಎನ್ ಕ್ಲೇವ್ ಅಪಾರ್ಟ್ ಮೆಂಟ್ ನಿವಾಸಿ ದಿವಂಗತ ಶಾಮನೂರು ಸಂಗಪ್ಪ ಮೇಷ್ಟ್ರು ಇವರ ಜೇಷ್ಠ ಪುತ್ರರಾಗಿದ್ದ ಅವರು ಬಾಪೂಜಿ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರು.
READ ALSO THIS STORY: ದಾವಣಗೆರೆ: ಬೈಕ್ ರಿಪೇರಿ ಮತ್ತು ಸೇವೆ ಕುರಿತು 30 ದಿನಗಳ ಉಚಿತ ತರಬೇತಿ: ಯಾವೆಲ್ಲಾ ದಾಖಲಾತಿ ಬೇಕು?
ಬುಧವಾರ ರಾತ್ರಿ 9.47ಕ್ಕೆ ನಿಧನ ಹೊಂದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಸಹೋದರರು, ಸಹೋದರಿಯರು ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.
ರಾಜಶೇಖರ್ ಅವರ ಪಾರ್ಥಿವ ಶರೀರವನ್ನು ಜುಲೈ 18ರ ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ದಾವಣಗೆರೆ ಆಂಜನೇಯ ಬಡಾವಣೆ 16ನೇ ಕ್ರಾಸ್ ನಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಮಧ್ಯಾಹ್ನ 12.30ಕ್ಕೆ ದಾವಣಗೆರೆಯ ಬೂದಾಳ್ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.