Site icon Kannada News-suddikshana

ತುಂಬಿ ತುಳುಕಿದ ಸಂಗೇನಹಳ್ಳಿ ಹಳ್ಳ: ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಸಾವು

SUDDIKSHANA KANNADA NEWS/ DAVANAGERE/ DATE:25-10-2024

ದಾವಣಗೆರೆ: ಹಳ್ಳ ದಾಟಲು ಹೋಗಿದ್ದ ವ್ಯಕ್ತಿಯೊಬ್ಬ ನೀರು ಪಾಲಾದ ಘಟನೆ ಜಗಳೂರು ತಾಲೂಕಿನ ಸಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿಯ ಅರಳಿಕಟ್ಟೆ ಗ್ರಾಮದ ಜಯಣ್ಣ (45) ಮೃತಪಟ್ಟ ವ್ಯಕ್ತಿ. ಈ ಬಾರಿ ಭಾರೀ ಮಳೆ ಸುರಿದಿದ್ದು, ಜಗಳೂರು ತಾಲೂಕಿನ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದವು. ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಈ ನಡುವೆ ಸಂಗೇನಹಳ್ಳಿ ಗ್ರಾಮದಲ್ಲಿರುವ ತನ್ನ ಸೊಸೆಯ ಮನೆಗೆ ಬಂದಿದ್ದ ಜಯಣ್ಣ ಅವರು, ಹಳ್ಳ ದಾಟುವ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆಯಾಗದ ಕಾರಣ ಗುರುವಾರ ಬೆಳಿಗ್ಗೆಯೂ ಮುಂದುವರಿದಿತ್ತು. ಸಂಗೇನಹಳ್ಳಿ ಗ್ರಾಮದಿಂದ ಸುಮಾರು 500 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿತ್ತು.

Exit mobile version