Site icon Kannada News-suddikshana

ನೇತ್ರಾವತಿಯ ಸ್ನಾನಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

SUDDIKSHANA KANNADA NEWS\ DAVANAGERE\ DATE: 11-12-2023

ಪುತ್ತೂರು: ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿಯಲ್ಲಿ ಜನರು ಸ್ನಾನ ಮಾಡುವ ವೇಳೆ ಶವ ನೀರಿನಲ್ಲಿ ತೇಲಿ ಬರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

ಮೃತ ವ್ಯಕ್ತಿ 40ರಿಂದ 45 ವರ್ಷ ವಯಸ್ಸಿನದ್ದಾಗಿರಬಹುದೆಂದು ಅಂದಾಜಿಸಲಾಗಿದ್ದು ಎರಡರಿಂದ ಮೂರು ದಿನದ ಹಿಂದೆ ನೀರಿಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಶವವನ್ನು ನದಿ ನೀರಿನಿಂದ ಮೇಲೆತ್ತಲು ಶೌರ್ಯ ವಿಪತ್ತು ನಿರ್ವಹಣ ತಂಡದ ಸ್ವಯಂ ಸೇವಕರಾದ ಅವಿನಾಶ ಭಿಡೆ, ರವೀಂದ್ರ ಉಜಿರೆ, ರಾಘವೇಂದ್ರ, ಶಶಿಕುಮಾರ್‌, ಧನ್ವಿ ಆಯಂಬುಲೆನ್ಸ್‌ ನ ಧನೇಶ್‌ ಮತ್ತಿತರರು ಪೊಲೀಸರೊಂದಿಗೆ ಸಹಕರಿಸಿದರು.

ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Exit mobile version