SUDDIKSHANA KANNADA NEWS/ DAVANAGERE/DATE:09_09_2025
ಶಿವಮೊಗ್ಗ: ನಾನು ನಾಲ್ಕು ಬಾರಿ ಶಾಸಕನಾಗಲು ಮುಸ್ಲಿಂರೇ ಕಾರಣ ಎಂದು ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ್ವರ ಹೇಳಿರುವುದು ಹಿಂದೂಪರ ಸಂಘಟನೆಗಳು ಮತ್ತು ಕೇಸರಿ ಪಡೆಯನ್ನು ಕೆರಳಿಸಿದೆ.
READ ALSO THIS STORY: EXCLUSIVE: “ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟಬೇಕೆಂಬ” ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ವರ ಮಾತಿನ ಹಿಂದಿದೆ ರಣತಂತ್ರ!
ನಾನು ಚುನಾವಣೆಯಲ್ಲಿ ಗೆಲ್ಲಲು ಪ್ರೀತಿಯ ಮುಸ್ಲಿಂ ಬಾಂಧವರೇ ಕಾರಣ. ನಾನು ಅವರಿಗೆ ಎಂದೆಂದಿಗೂ ಚಿರಋಣಿಯಾಗಿರುತ್ತೇನೆ ಎಂದು ಸಂಗಮೇಶ್ವರ ಹೇಳಿದ್ದಾರೆ.
ಭದ್ರಾವತಿ ತಾಲೂಕಿನಲ್ಲಿ ಕೇವಲ ಮುಸ್ಲಿಂರ ಮತ ಪಡೆದು ಗೆದ್ದಿದ್ದಾರೆಯೇ? ಹಿಂದೂಗಳು ಮತ ಹಾಕಿಲ್ವಾ. ಮುಸ್ಲಿಂ ತುಷ್ಟೀಕರಣದ ಪರಾಕಷ್ಠೆ ಎಂದು ಹಿಂದೂ ಸಂಘಟನೆ ಮುಖಂಡರು ಮತ್ತು ಬಿಜೆಪಿ ನಾಯಕರು ಹೇಳಿದ್ದಾರೆ.
ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಈ ಮಾತು ಆಡಿರುವುದು ಚರ್ಚೆಗೆ ಕಾರಣವಾಗಿದೆ. ಹಿಂದೂಗಳು ಮತ ಹಾಕದಿದ್ದರೆ ಸಂಗಮೇಶ್ವರ ಅವರು ಶಾಸಕರಾಗುತ್ತಿದ್ದರೆ ಎಂದು ಪ್ರಶ್ನಿಸಿದ್ದಾರೆ. ಸಂಗಮೇಶ್ವರ ಅವರು ಮುಸ್ಲಿಂ ಸಮುದಾಯದ ಓಲೈಕೆಗೆ ಈ ಮಾತು ಆಡಿದ್ದಾರೆ. ಜೊತೆಗೆ ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟಬೇಕೆಂಬ ಹೇಳಿಕೆಯೂ ಚರ್ಚಿತ ವಿಚಾರವಾಗಿದೆ.
ಇನ್ನೂ ಬಿ. ಕೆ. ಸಂಮಗೇಶ್ವರರ ಈ ಮಾತಿಗೆ ಬಿಜೆಪಿ ನಿಗಿ ನಿಗಿ ಕೆಂಡವಾಗಿದೆ. ಪಾಕಿಸ್ತಾನದ ಪರ ಘೋಷಣೆಗಳನ್ನೂ ಭದ್ರಾವತಿಯ ಈದ್ ಮಿಲಾದ್ ಮೆರವಣಿಗೆ ವೇಳೆ ಕೂಗಲಾಗಿದೆ. ಆದರೂ ರಾಜ್ಯ ಸರ್ಕಾರ ಗಂಭೀರ ಸ್ವರೂಪದ ಪ್ರಕರಣವನ್ನು ನಿರ್ಲಕ್ಷಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ಸಿನ ತುಷ್ಟೀಕರಣದ ರಾಜಕೀಯ ಇಂದು ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗಿದೆ. ನಿನ್ನೆ ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ಸಂಭ್ರಮದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಮತಾಂಧರು ಘೋಷಣೆ ಕೂಗಿದ್ದರೂ ಕಾಂಗ್ರೆಸ್ ಸರ್ಕಾರ ಮುಚ್ಚಿಡಲು ಪ್ರಯತ್ನಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕಾಂಗ್ರೆಸ್ ಸಂಸದ ನಜೀರ್ ಅಹ್ಮದ್ ಬೆಂಬಲಿಗರೇ ಕೂಗಿದರೂ ಪ್ರಕಾರಣವನ್ನು ಮುಚ್ಚಿ ಹಾಕಿದೆ ಸರ್ಕಾರ. ಇಂತಹ ತುಷ್ಟಿಕರಣ ರಾಜಕಾರಣದಿಂದಲೇ ದೇಶದ್ರೋಹಿ ಘೋಷಣೆಗಳು ಹೆಚ್ಚುತ್ತಿವೆ ಎಂದು ಕಿಡಿಕಾರಿದೆ.
ಗಣಪತಿ ಮೆರವಣಿಗೆಗೆ ಕಲ್ಲು ಹೊಡೆದಿದ್ದರ ವಿರುದ್ದ ಪ್ರತಿಭಟಿಸಿದ ಹಿಂದೂಗಳಿಗೆ ಲಾಠಿ ಏಟು ಕೊಟ್ಟು 500 ಕ್ಕೂ ಹೆಚ್ಚು ಹಿಂದೂಗಳ ಮೇಲೆ ಕೇಸ್ ದಾಖಲಿಸಿರುವ ಕಾಂಗ್ರೆಸ್ ಸರ್ಕಾರ, ಇಂತಹ ಘೋಷಣೆ ಕೂಗುವ ಮತಾಂಧ ದೇಶದ್ರೋಹಿಗಳಿಗೆ ಶ್ರೀರಕ್ಷೆ ನೀಡುತ್ತಿದೆಯೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ಆರ್.ಎಸ್.ಎಸ್ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಚಾಮುಂಡಿ ಬೆಟ್ಟಕ್ಕೆ ಹೋಗುವುದನ್ನಾಗಲಿ, ಗಣಪತಿ ಉತ್ಸವ ಮಾಡುವುದನ್ನಾಗಲಿ ತಡೆಯಲು ಈ ಸರ್ಕಾರಕ್ಕೆ ಯಾವ ಅಧಿಕಾರವಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುವವರನ್ನು ಬಂಧಿಸಲು ಯೋಗ್ಯತೆ ಇಲ್ಲದ ಈ ಸರ್ಕಾರ ನಮ್ಮನ್ನು ಪ್ರಶ್ನೆ ಮಾಡುತ್ತಿದೆ. ಭಾರತೀಯ ಜನತಾ ಪಾರ್ಟಿ ಹಿಂದುತ್ವದ ಪರವಾಗಿದೆ ಹೌದು, ಪ್ರಶ್ನೆ ಮಾಡಲು ಇವರಾರು, ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಹಿಂದೂಗಳ ಪರವಾಗಿಲ್ಲಾ ಹಿಂದೂಗಳು ಸ್ವಯಂ ರಕ್ಷಣೆ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿಗಳು ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ.
‘ಪಾಕಿಸ್ತಾನ್ ಜಿಂದಾಬಾದ್’ ಕೂಗಿಸುವುದು ಕಾಂಗ್ರೆಸ್ ಸರ್ಕಾರದ ಅಜೆಂಡಾ ಆಗಿರುವಂತಿದೆ. ವಿಧಾನಸೌಧದಲ್ಲಿಯೇ ‘ಪಾಕಿಸ್ತಾನ್ ಜಿಂದಾಬಾದ್’ ಕೂಗಿದ ಕಾಂಗ್ರೆಸ್ ನಿಂದ ಉತ್ತೇಜನ ಪಡೆದ ರಾಷ್ಟ್ರದ್ರೋಹಿ ದುಷ್ಕರ್ಮಿಗಳು ಈಗ ರಸ್ತೆ-ರಸ್ತೆಗಳಲ್ಲಿ ದೇಶದ್ರೋಹಿ ಘೋಷಣೆಗಳನ್ನು ಕೂಗಲು ಆರಂಭಿಸಿದ್ದಾರೆ. ಇದೆ ನಿಟ್ಟಿನಲ್ಲಿ ನೆನ್ನೆ ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲೂ ‘ಪಾಕಿಸ್ತಾನ್ ಜಿಂದಾಬಾದ್’ ಕೂಗಿರುವ ಘಟನೆ ಕಡು ದೇಶದ್ರೋಹ ಕೃತ್ಯವಾಗಿದೆ ಎಂದು ದೂರಿದ್ದಾರೆ.
ಧರ್ಮಸ್ಥಳವಾಯಿತು, ಸಾಂಪ್ರದಾಯಿಕ ದಸರಾ ಉತ್ಸವಕ್ಕೆ ಕಳಂಕ ಹಚ್ಚಲು ನಿರ್ಧರಿಸಲಾಯಿತು, ಮದ್ದೂರು ಹಾಗೂ ರಾಜ್ಯದ ಇತರೆಡೆಗಳಲ್ಲಿ ಗಣೇಶೋತ್ಸವದ ಮೇಲೆ ಕಲ್ಲು ತೂರಿಸಿ ಕರ್ನಾಟಕದ ಶಾಂತಿ ಹದಗೆಡಿಸಲು ಹೊರಟಿದ್ದಾರೆ. ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ಸರ್ಕಾರ ಏನು ಮಾಡಲು ಹೊರಟಿದೆ? ಈ ರೀತಿಯ ದೇಶದ್ರೋಹಿ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಬಿ. ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.