Home ದಾವಣಗೆರೆ ಮುಖ್ಯಮಂತ್ರಿಗಳಿಗೆ ದಾವಣಗೆರೆ ದಕ್ಷಿಣ, ಬಾಗಲಕೋಟೆ ಗೆಲುವಿನ ಉಡುಗೊರೆ ನೀಡೋಣ: ಡಾ. ಪ್ರಭಾ ಮಲ್ಲಿಕಾರ್ಜುನ ಕರೆ
ದಾವಣಗೆರೆಬೆಂಗಳೂರು

ಮುಖ್ಯಮಂತ್ರಿಗಳಿಗೆ ದಾವಣಗೆರೆ ದಕ್ಷಿಣ, ಬಾಗಲಕೋಟೆ ಗೆಲುವಿನ ಉಡುಗೊರೆ ನೀಡೋಣ: ಡಾ. ಪ್ರಭಾ ಮಲ್ಲಿಕಾರ್ಜುನ ಕರೆ

Share
ದಾವಣಗೆರೆ
Share

ದಾವಣಗೆರೆ: ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೊದಲು ನೀಡಿದ ಎಲ್ಲಾ ಆಶ್ವಾಸನೆಗಳನ್ನು ನೆರವೇರಿಸಿದೆ. ಈ ಮೂಲಕ ನುಡಿದಂತೆ ನಡೆದ ಏಕೈಕ ಮುಖ್ಯಮಂತ್ರಿಗಳು ನಮ್ಮ ಸಿದ್ದರಾಮಯ್ಯನವರಾಗಿದ್ದಾರೆ. ೫ ಗ್ಯಾರಂಟಿ ಯೋಜನೆಗಳನ್ನು ಒಂದೇ ವರ್ಷದಲ್ಲಿ ಜಾರಿ ಮಾಡಿದ್ದಾರೆ ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ತಿಳಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೂದಾಳ್ ರಸ್ತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಲು ಶಕ್ತಿಯೋಜನೆ ಹಾಗೂ ಗೃಹಲಕ್ಷಿö್ಮÃ ಯೋಜನೆಯ ಗ್ಯಾರಂಟಿಗಳನ್ನು ನೀಡಿದೆ. ನಮ್ಮ ಸಿಎಂ ಬಡವರು, ಹಿಂದುಳಿದ ವರ್ಗಗಳು, ಯಾವುದೇ ಜಾತಿ, ಧರ್ಮ ನೋಡದೆ ಎಲ್ಲರಿಗೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಬಸವಣ್ಣನವರ ತತ್ವವನ್ನು ಚಾಚುತಪ್ಪದೆ ಜಾರಿಗೊಳಿಸಿ ಆಧುನಿಕ ಬಸವಣ್ಣ ಎಂದು ಹೆಸರಾಗಿದ್ದಾರೆ ಎಂದರು.

ಇತ್ತೀಚಿಗೆ ದೇವರಾಜ್ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯನವರು ಸರಿಗಟ್ಟಿದ್ದು, ಹೊಸ ದಾಖಲೆ ನಿರ್ಮಿಸಿದ ನಂತರ ಈ ಎರಡು ಉಪಚುನಾವಣೆಗಳು ಬಂದಿವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಅವರಿಗೆ ಉಡುಗೆರೆಯಾಗಿ ನೀಡಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದರು.

ಅಪ್ಪಾಜಿ ಅವರನ್ನು ದಾವಣಗೆರೆ ದಕ್ಷಿಣಕ್ಕೆ ನೀವು ೫ ವರ್ಷಕ್ಕೆ ಆಯ್ಕೆ ಮಾಡಿದ್ದೀರಿ ಆದರೆ ಅವರ ಅಗಲಿಕೆಯಿಂದ ಉಳಿದ ೨ ವರ್ಷಕ್ಕೆ ಅಪ್ಪಾಜಿ ಅವರು ಮಾಡಿದ ಸೇವೆಗೆ ಶ್ರದ್ಧಾಂಜಲಿ ರೂಪದಲ್ಲಿ ಇದೇ ಏಪ್ರಿಲ್ ೯ ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆ ಮತ ನೀಡುವ ಮೂಲಕ ಅವರಿಗೆ ಶ್ರದ್ದಾಂಜಲಿ ಅರ್ಪಿಸೋಣ ಎಂದು ಹೇಳಿದರು

ಈ ವೇಳೆ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

Share

Leave a comment

Leave a Reply

Your email address will not be published. Required fields are marked *