ದಾವಣಗೆರೆ: ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಕ್ಕೆ ಕ್ಯಾಂಪಸ್ ಆಯ್ಕೆಯಾಗಿದ್ದಾರೆ.
READ ALSO THIS STORY: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ “ಇಂಡಿಪೆಂಡೆಂಟ್” ಆಗಿ ಕಣಕ್ಕಿಳಿಯಲ್ಲ, “ಮತ್ತೇ…”?: ಜಿ. ಬಿ. ವಿನಯ್ ಕುಮಾರ್ ಸ್ಪೋಟಕ ಸಂದರ್ಶನ
ಬಿ.ಐ.ಇ.ಟಿ ಯ ಪ್ಲೇಸ್‌ಮೆಂಟ್ ಮತ್ತು ತರಬೇತಿ ವಿಭಾಗದ ಮುಖ್ಯಸ್ಥೆ ಡಾ. ಸಿ.ಆರ್. ನಿರ್ಮಲ ಅವರ ಸಾರಥ್ಯದಲ್ಲಿ ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ವೃದ್ಧಿಸಲು ನೀಡಲಾದ ನಿರಂತರ ಕಾರ್ಯಾಗಾರಗಳ ಫಲವಾಗಿ ಬಿಐಇಟಿಯ ವಿದ್ಯಾರ್ಥಿಗಳು ಇನ್‌ಫೋಸಿಸ್, ಟಿಸಿಎಸ್, ಆಕ್ಸೇಂಚರ್, ಕಾಗ್ನಿಜಂಟಲ್, ಪೆಂಟಗಾನ್ ಸ್ಪೇಸ್ ಸೇರಿದಂತೆ ಇತರೆ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.
ಈ ವರ್ಷದ ಕ್ಯಾಂಪಸ್ ಸಂದರ್ಶನದಲ್ಲಿ ಎಲೇಕ್ಟಾçನಿಕ್ಸ್ ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿ ಸಾಯಿ ಪ್ರಥಮ್ ಇವರು ಝನೈನ್ ಅವರ ಸಹಯೋಗದಲ್ಲಿ ನಡೆದ ಪ್ರೋಟೆಕ್ ಸಂಸ್ಥೆಯ ಸಂದರ್ಶನದಲ್ಲಿ ವಾರ್ಷಿಕ ಆದಾಯ 27 ಲಕ್ಷ ಗರಿಷ್ಠ ಪ್ಯಾಕೆಜ್‌ನೊಂದಿಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್ ತಿಳಿಸಿದ್ದಾರೆ.





Leave a comment