Home ಕ್ರೈಂ ನ್ಯೂಸ್ ದಾವಣಗೆರೆ ಪಾಲಿಕೆ ಆಯುಕ್ತೆ ನಿಯಮನೂ ಪಾಲಿಸಲ್ಲ, ಕೋರ್ಟ್ ಆದೇಶ ಪಾಲಿಸಿಲ್ಲ: ಎಸ್. ಎ. ರವೀಂದ್ರನಾಥ್ ಬಡಾವಣೆ ನಾಗರಿಕ ಸಮಿತಿ ಕೆಂಡಾಮಂಡಲ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆ ಪಾಲಿಕೆ ಆಯುಕ್ತೆ ನಿಯಮನೂ ಪಾಲಿಸಲ್ಲ, ಕೋರ್ಟ್ ಆದೇಶ ಪಾಲಿಸಿಲ್ಲ: ಎಸ್. ಎ. ರವೀಂದ್ರನಾಥ್ ಬಡಾವಣೆ ನಾಗರಿಕ ಸಮಿತಿ ಕೆಂಡಾಮಂಡಲ!

Share
ದಾವಣಗೆರೆ
Share

SUDDIKSHANA KANNADA NEWS/DAVANAGERE/DATE:29_12_2025

ದಾವಣಗೆರೆ: ಮನೆಯ ಕಟ್ಟಡದ ತ್ಯಾಜ್ಯವನ್ನು ನಗರದ ಹೊರ ವಲಯದಲ್ಲಿ ಕಡ್ಡಾಯವಾಗಿ ವಿಲೇವಾರಿ ಮಾಡಬೇಕು. ತಪ್ಪಿದಲ್ಲಿ ದಂಡ ವಿಧಿಸುವುದಾಗಿ ಪತ್ರಿಕೆಗಳಲ್ಲಿ ಪ್ರಚುರಪಡಿಸಿರುವ ಮಹಾನಗರ ಪಾಲಿಕೆಯೇ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದೆ ಎಂದು ಶ್ರೀ ಎಸ್.ಎ. ರವೀಂದ್ರನಾಥ್ ನಗರ ನಾಗರೀಕ ಹಿತರಕ್ಷಣಾ ಸಮಿತಿ ಆರೋಪಿಸಿದೆ.

ಈ ಸುದ್ದಿಯನ್ನೂ ಓದಿ: EXCLUSIVE: ಫಿಲ್ಮ್ ಮಾಡ್ತೀನಿ ಎಂದು ಓಡಾಡಿಕೊಂಡಿದ್ದ ದಾವಣಗೆರೆಯ ಕೃಷ್ಣಮೂರ್ತಿ ಡ್ರಗ್ಸ್ ಕೇಸಲ್ಲಿ ಅರೆಸ್ಟ್: ಮೂಲತಃ ಎಲ್ಲಿಯವನು?

ಪಾಲಿಕೆ ವ್ಯಾಪ್ತಿಯ ಲೋಕಿಕೆರೆ ರಸ್ತೆಯಲ್ಲಿರುವ ಎಸ್.ಎ.ರವೀಂದ್ರನಾಥ ಬಡಾವಣೆಯಲ್ಲಿ ಸಾರ್ವಜನಿಕರಿಗಾಗಿ ಮೀಸಲಿದ್ದ ಸ್ಥಳದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಮನೆಗಳನ್ನು ತೆರವುಗೊಳಿಸಿದಾಗ ಉಂಟಾದ ತ್ಯಾಜ್ಯವನ್ನು ಇದೇ ಬಡಾವಣೆಯಲ್ಲಿರುವ ಉದ್ಯಾನವನಕ್ಕೆ ನ್ಯಾಯಾಲಯದ ನಿರ್ಬಂಧಕಾಜ್ಞೆ ಇದ್ದಾಗ್ಯೂ ಉದ್ಯಾನವನದಲ್ಲಿ ಗುಡ್ಡೆ ಹಾಕಿದ್ದಾರೆ. ಮಹಾನಗರ ಪಾಲಿಕೆಯ ಆಯುಕ್ತರು ಪ್ರಚುರಪಡಿಸಿರುವುದು ದಂಡ ವಿಧಿಸುವುದು ತೋರಣಿಕೆಯ ಪ್ರಚಾರದಂತಿದೆ ಎಂದು ಸಮಿತಿಯ ಉಪಾಧ್ಯಕ್ಷ ಎಸ್.ಆರ್. ಸೋಮಶೇಖರಪ್ಪ ದೂರಿದ್ದಾರೆ.

ಪಾಲಿಕೆ ಆಯುಕ್ತರು ತಮ್ಮ ನಿಯಮಗಳನ್ನೇ ಪಾಲಿಸಲು ತಯಾರಿಲ್ಲದಿರುವಾಗ ಇನ್ನೂ ಸಾರ್ವಜನಿಕರು ಪಾಲಿಸುತ್ತಾರೆಯೇ? ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದಕ್ಕಿಂತಲೂ ಮೊದಲು, ಖುದ್ದು ತಾವೇ ರಚಿಸಿರುವ ನಿಯಮಗಳನ್ನು ಖಡ್ಡಾಯವಾಗಿ ತಾವು ಪಾಲಿಸಿ ನಂತರ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಸೂಕ್ತವೆಂದು ಸಲಹೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles