SUDDIKSHANA KANNADA NEWS/DAVANAGERE/DATE:08_12_2025
ದಾವಣಗೆರೆ: ಜಿಲ್ಲೆಯಲ್ಲಿರುವ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರು ಬೆರಳಚ್ಚು ನೀಡಿ ಪ್ರತಿ ಮಾಹೆ ಪಡಿತರ ಪಡೆಯದೆೆ ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಹೆಚ್ಚುವರಿಯಾಗಿ ಪಡಿತರ ನೀಡುವಂತೆ ಒತ್ತಾಯಿಸುವ ಮೂಲಕ ಪಡಿತರ ಪಡೆಯುತ್ತಿದ್ದಾರೆ ಎಂದು ಮಾಹಿತಿ ಬಂದಿದೆ.
ಈ ರೀತಿ ಪಡಿತರ ವಿತರಿಸಲು ಅವಕಾಶವಿರುವುದಿಲ್ಲ, ಆದುದರಿಂದ ಆಯಾ ತಿಂಗಳುಗಳಲ್ಲೆ ಪಡಿತರ ವಿತರಿಸಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಕ್ರಮವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಪ್ರಸ್ತುತ ಹೊಸದಾಗಿ ಬಿಪಿಎಲ್ ಕಾರ್ಡ್ನ್ನು ವಿತರಿಸಲು ಸರ್ಕಾರದಿಂದ ಅನುಮತಿ ನೀಡಿಲ್ಲ, ಅಪಘಾತ ಮತ್ತು 101 ಮರಣಾಂತಿಕ ಖಾಯಿಲೆಗೆ ತುತ್ತಾದ ಸಂದರ್ಭದಲ್ಲಿ ವೈದ್ಯಕೀಯ ಉದ್ದೇಶಕ್ಕಾಗಿ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶವಿದೆ. ಆದರೆ ಇಲಾಖೆಯ ಮಾನದಂಡಗಳನ್ವಯ ಬಿಪಿಎಲ್ ಚೀಟಿ ಪಡೆಯಲು ಅರ್ಹತೆ ಹೊಂದಿರಬೇಕು. ಆಗಿದ್ದಲ್ಲಿ ವೈದ್ಯಕೀಯ ಉದ್ದೇಶಕ್ಕೆ ಅರ್ಜಿ ಸಲ್ಲಿಸಿದ 3 ದಿನಗಳಲ್ಲಿ ಬಿಪಿಎಲ್ ಕಾರ್ಡ್ ವಿತರಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.





Leave a comment