ದಾವಣಗೆರೆ: ಜಿಲ್ಲೆಯಲ್ಲಿ 20 ಕೆ.ಪಿ.ಎಸ್ ಹೊಸದಾದ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಇದರಲ್ಲಿ 6 ಜೂನಿಯರ್ ಕಾಲೇಜುಗಳು ಹಾಗೂ 14 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಶಿಕ್ಷಣ ಇಲಾಖೆಯು ಆದೇಶಿಸಿದ್ದು, ಮ್ಯಾಗ್ನೇಟೆಕ್ ಶಾಲೆಗಳಿಗೆ ಯಾವ ಶಾಲೆಗಳನ್ನು ಜೋಡಿಸಬೇಕು ಎಂದು ಕ್ರಮಕೈಗೊಂಡಿರುವುದಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಯಾವ ಶಾಲೆಯನ್ನು ಕೆ.ಪಿ.ಎಸ್ ಅಡಿಯಲ್ಲಿ ಮರುಹೊಂದಾಣಿಕೆ ಮಾಡಿರುವುದಿಲ್ಲ ಹಾಗೂ ಶಾಲೆಗಳನ್ನು ಮುಚ್ಚಿರುವುದಿಲ್ಲ. ಶಿಕ್ಷಣ ಇಲಾಖೆಯ ಆದೇಶ ಬಂದ ನಂತರ ಅಗತ್ಯ ಕ್ರಮವಹಿಸುವುದಾಗಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Leave a comment