ದಾವಣಗೆರೆ: ಡಿಜಿಟಲ್ ಇ-ಸ್ಟಾಂಪ್ ವ್ಯವ್ಥೆಯನ್ನು ಜಾರಿಗೊಳಿಸುವ ಸಂಬಂಧ ಜಿಲ್ಲೆಯ ಉಪ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಹಗೂ ಎಸ್‌ಹೆಚ್‌ಸಿಐಎಲ್ ಮೂಲಕ ವಿತರಿಸುತ್ತಿರುವ ಇ-ಸ್ಟಾಂಪ್ ಮಾರಾಟ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಸಹಕಾರಿ ಸೌಹರ್ದಗಳ ಸಿಬ್ಬಂದಿಯವರಿಗೆ ತರಬೇತಿಯನ್ನು ಆಯೋಜಿಸಲಾಗಿದೆ.
READ ALSO THIS STORY: EXCLUSIVE: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಮುಸ್ಲಿಂರ ಒಗ್ಗಟ್ಟು, ಕಾಂಗ್ರೆಸ್ ಹೈಕಮಾಂಡ್ ಗೆ ಇಕ್ಕಟ್ಟು!
ಜನವರಿ 8 ರಂದು ಹರಿಹರ ಉಪನೋಂದಣಾಧಿಕಾರಿಗಳ ಕಚೇರಿ ಆವರಣ, ಜನವರಿ 9 ರಂದು ದಾವಣಗೆರೆ ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿ ಆವರಣ, ಜನವರಿ 12 ರಂದು ಚನ್ನಗಿರಿ ಉಪ ನೋಂದಣಾಧಿಕಾರಿಗಳ ಕಚೇರಿ ಆವರಣ, ಜನವರಿ 13 ರಂದು ಹೊನ್ನಾಳಿ ಉಪ ನೋಂದಣಾಧಿಕಾರಿಗಳ ಕಚೇರಿ ಆವರಣ, ಜನವರಿ 14 ರಂದು ಜಗಳೂರು ಉಪ ನೋಂದಣಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.





Leave a comment