Home ದಾವಣಗೆರೆ ದಾವಣಗೆರೆ ಅಭಿವೃದ್ಧಿ ರಾಜ್ಯ, ದೇಶಕ್ಕೆ ಮಾದರಿ: ಎಸ್. ಎಸ್. ಮಲ್ಲಿಕಾರ್ಜುನ್ ಬಣ್ಣನೆ!
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆ ಅಭಿವೃದ್ಧಿ ರಾಜ್ಯ, ದೇಶಕ್ಕೆ ಮಾದರಿ: ಎಸ್. ಎಸ್. ಮಲ್ಲಿಕಾರ್ಜುನ್ ಬಣ್ಣನೆ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ನಗರ ಮತ್ತು ಜಿಲ್ಲೆಯ ಅಭಿವೃದ್ಧಿ ರಾಜ್ಯ ಮತ್ತು ದೇಶಕ್ಕೆ ಮಾದರಿ ಆಗಿದೆ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ತಿಳಿಸಿದರು.

READ ALSO THIS STORY: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾಪುರುಷನ ಹೆಸರಿದ್ದ “ಮನರೇಗಾ” ಯೋಜನೆ ಹೆಸರನ್ನೇ ಅಳಿಸಿ ಹಾಕುವ ಕೆಲಸ: ಕೇಂದ್ರದ ವಿರುದ್ಧ ಡಾ. ಪ್ರಭಾ ಮಲ್ಲಿಕಾರ್ಜುನ್ ಕಿಡಿ

ಅವರಿಂದು ದಾವಣಗೆರೆ ನಗರದ 40ನೇ ವಾರ್ಡ್‍ನ ಆಂಜನೇಯ ಬಡಾವಣೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕೊಠಡಿಗಳು, ಶೌಚಾಲಯ, ಲೈಬ್ರರಿ, ಆವರಣ ಮತ್ತು ಸಭಾಂಗಣ ನಿರ್ಮಾಣ ಹಾಗೂ 1ನೇ ವಾರ್ಡ್‍ನ ಮೆಟ್ರಿಕ್ ನಂತರದ ವಸತಿ ನಿಲಯದ ಕಟ್ಟಡ ನಿರ್ಮಾಣದದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಹುತೇಕ ಎಲ್ಲಾ ರಸ್ತೆಗಳು ಸಿಮೇಂಟಿಕರಣಗೊಳಿಸಲಾಗಿದೆ. ಜೊತೆಗೆ ಎಲ್ಲಾ ಕಡೆ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದರು.

ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಗೆ ಶೀಘ್ರದಲ್ಲೇ 100 ಕೋಟಿ ಅನುದಾನ ತರಲಾಗುವುದು ಎಂದರು.

40ನೇ ವಾರ್ಡ್‍ನ ಆಂಜನೇಯ ಬಡಾವಣೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ 4 ಕೋಟಿ ಮೊತ್ತದಲ್ಲಿ ಕೊಠಡಿಗಳು, ಶೌಚಾಲಯ, ಲೈಬ್ರರಿ, ಆವರಣ ಮತ್ತು ಸಭಾಂಗಣ ನಿರ್ಮಾಣ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳ ಕೆಲವು ಬೇಡಿಕೆಗಳ ಬಗ್ಗೆ ಸಚಿವರೊಂದಿಗೆ ಮಾತನಾಡಲಾಗುವುದು ಎಂದು ತಿಳಿಸಿದರು.

ದಾವಣಗೆರೆ ನಗರದ 1ನೇ ವಾರ್ಡ್‍ನ ಮೆಟ್ರಿಕ್ ನಂತರದ ವಸತಿ ನಿಲಯದ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಅಂದಾಜು 4.15 ಕೋಟಿ ಮೊತ್ತದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಸಚಿವರ ಜೊತೆಗೆ ಮಾತನಾಡಿ ಆರಂಭಿಸಲಾಗುತ್ತಿದ್ದು, ಬರುವ ವರ್ಷವೇ ಈ ಕಟ್ಟಡ ವಿದ್ಯಾರ್ಥಿಗಳಿಗೆ ಲಭ್ಯವಾಗಲೆಂದ ಅವರು ತರಾತುರಿ ಕಾಮಗಾರಿ ಹೆಸರಿನಲ್ಲಿ ಕಳಪೆ ಕಾಮಗಾರಿ ಆಗುವುದು ಬೇಡ ಎಂದರು.

ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರು, ಕಾಲೇಜಿನ ಸಲಹಾ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು, ಅಪೆಕ್ಸ್ ಬ್ಯಾಂಕ್‌ ನಿರ್ದೇಶಕರಾದ ಮುದೇಗೌಡ್ರು ಗಿರೀಶ್‌, ಬಿ.ಕೆ.ಪರಶುರಾಮ್‌, ಸಾಗರ್‌ ಎಲ್.ಹೆಚ್.‌, ಬೂದಾಳ್‌ ಬಾಬು, ಎಲ್.ಡಿ.ಗೋಣೆಪ್ಪ, ಉಮಾಶಂಕರ್‌, ಟಿ.ರಮೇಶ್‌ , ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು ಮತ್ತಿತರರಿದ್ದರು.

Share

Leave a comment

Leave a Reply

Your email address will not be published. Required fields are marked *