Home ದಾವಣಗೆರೆ ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಸ್ಪರ್ಧೆ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಜಿ. ಬಿ. ವಿನಯ್ ಕುಮಾರ್!
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಸ್ಪರ್ಧೆ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಜಿ. ಬಿ. ವಿನಯ್ ಕುಮಾರ್!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣ ಕಣ ರಂಗೇರತೊಡಗಿದೆ. ಈ ನಡುವೆ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಸ್ಪರ್ಧೆ ಮಾಡುತ್ತಾರಾ ಎಂಬ ವದಂತಿಯೂ ಹರಿದಾಡುತಿತ್ತು. ಇದಕ್ಕೆ ಜಿ. ಬಿ. ವಿನಯ್ ಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಕಾಂಕ್ಷಿಯಲ್ಲ. ಯಾರ ಬಳಿಯೂ ಹೋಗಿ ಟಿಕೆಟ್ ಕೇಳಿಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ ರಾಷ್ಟ್ರೀಯ ಪಕ್ಷದಿಂದ ಟಿಕೆಟ್ ಸಿಕ್ಕರೆ ಖಂಡಿತವಾಗಿಯೇ ಸ್ಪರ್ಧೆ ಮಾಡುತ್ತೇನೆ. ಪಕ್ಷೇತರನಾಗಿ ಕಣಕ್ಕಿಳಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಶಾಮನೂರು ಶಿವಶಂಕರಪ್ಪರ ಕುಟುಂಬಕ್ಕೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು: ಜಿ. ಬಿ. ವಿನಯ್ ಕುಮಾರ್

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಸೌತ್ ಬೈ ಎಲೆಕ್ಷನ್ ನಲ್ಲಿ ಸ್ಪರ್ಧೆ ಮಾಡುತ್ತೇನೆಂದು ಸೋಷಿಯಲ್ ಮೀಡಿಯಾ, ಪತ್ರಿಕೆಗಳಲ್ಲಿ ಬರುತ್ತಿದೆ. ಹಿತೈಷಿಗಳು, ಸ್ನೇಹಿತರು, ಸ್ವಾಭಿಮಾನಿ ಬಳಗದ ಪ್ರಮುಖರು ಸ್ಪರ್ಧೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದಾಲೂ ಸ್ಪರ್ಧಿಸಿ, ಇಲ್ಲವೇ ಪಕ್ಷೇತರರಾಗಿಯಾದರೂ ಕಣಕ್ಕಿಳಿಯಿರಿ ಎಂಬ ಒತ್ತಾಯ ಮಾಡುತ್ತಿದ್ದಾರೆ. ಎಲ್ ಜೆಪಿ, ನ್ಯಾಷನಲ್ ಪೀಪಲ್ ಪಾರ್ಟಿಯು ಸ್ಪರ್ಧಿಸುವಂತೆ ಆಹ್ವಾನಿಸಿದೆ. ಆದರೆ, ಸದ್ಯಕ್ಕೆ ಸ್ಪರ್ಧೆ ಮಾಡುವ ಆಲೋಚನೆ ಇಲ್ಲ. ಕಾಂಗ್ರೆಸ್ ಪಕ್ಷ ನನ್ನ ಉಚ್ಚಾಟಿಸಿದೆ. ಆದರೂ ನನ್ನ ಸೈದ್ಧಾಂತಿಕ ನಿಲುವು ಕಾಂಗ್ರೆಸ್ ಪಕ್ಷದತ್ತ ಇದೆ. ಆದರೆ, ವಾಸ್ತವವಾಗಿ ಟಿಕೆಟ್ ಸಿಗುವುದಿಲ್ಲ ಎಂಬ ಅರಿವೂ ನನಗಿದೆ ಎಂದು ತಿಳಿಸಿದರು.

ಕಳೆದ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಪಕ್ಷಕ್ಕೆ ಬನ್ನಿ ಎಂಬ ಆಹ್ವಾನ ಬಂದಿದ್ದು ನಿಜ. ಆದೆ ನಾನು ತಿರಸ್ಕರಿಸಿ ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೆ. ಚುನಾವಣೆಯಲ್ಲಿ ಸೋತ ಬಳಿಕ ರಾಜ್ಯದ ಮೂಲೆ ಮೂಲೆಗಳಿಗೆ ಹೋಗಿದ್ದೇನೆ. ದಾವಣಗೆರೆ ಕ್ಷೇತ್ರದಲ್ಲಿಯೂ ಓಡಾಡುತ್ತಿದ್ದೇನೆ. ಹಿಂದುಳಿದವರಿಗೆ ರಾಜಕೀಯದಲ್ಲಿ ಅಧಿಕಾರ ಸಿಗಬೇಕು. ಆದರೆ ರಾಜಕೀಯ ಅಧಿಕಾರದಿಂದ ದೂರವಿಡುವ ಪ್ರಯತ್ನ ನಡೆಯುತ್ತಲೇ ಇದೆ. ಬಿಜೆಪಿಯಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿ ಯೋಚನೆ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದಿಂದ ಸಿಗಲ್ಲ ಎಂದಾಗ ಎಲ್ಲಿಗೆ ಹೋಗಬೇಕು? ಹೊಸ ಪಕ್ಷ ಕಟ್ಟಬೇಕೆಂಬ ಆಸೆ ಇದ್ದರೂ ಅದು ಅಷ್ಟೊಂದು ಸುಲಭವಲ್ಲ ಎಂಬ ಸತ್ಯವೂ ಗೊತ್ತು. ಸಿದ್ದರಾಮಯ್ಯ, ಯಡಿಯೂರಪ್ಪರಂಥ ನಾಯಕರೇ ಪಕ್ಷ ಕಟ್ಟಿ ಕೈಸುಟ್ಟಿಕೊಂಡಿದ್ದಾರೆ. ಹಾಗಾಗಿ ಇದು ಆಗುವ ಕೆಲಸವಂತೂ ಅಲ್ವೇ ಅಲ್ಲ ಎಂದು ಹೇಳಿದರು

ಮತದಾರರಿಗೆ ನಾನು ದುಡ್ಡು ಹಂಚಿಲ್ಲ ಎಂಬ ಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ತಟಸ್ಠನಾಗಿದ್ದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಸೈದ್ಧಾಂತಿಕವಾಗಿ ಹೋರಾಟ ಮಾಡಿದ್ದೇನೆ. ಚುನಾವಣೆ ವೇಳೆ ಸಿಎಂ ಸಿದ್ದರಾಮಯ್ಯರು ದಾವಣಗೆರೆಗೆ ಆಗಮಿಸಿ ಬಾಪೂಜಿ ಸಮುದಾಯ ಭವನದಲ್ಲಿ ಕುರುಬ ಸಮುದಾಯದ ಮುಖಂಡರು, ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ವಿನಯ್ ಕುಮಾರ್ ಗೆ ಒಂದು ಮತ ಹಾಕಬೇಡಿ ಎಂದು ಹೇಳಿ ಹೋಗಿದ್ದರು. ನನ್ನ ವಿರುದ್ಧ ಮನೆ ಮನೆಗೆ ಹೋಗಿ ಹೆಚ್. ಎಂ. ರೇವಣ್ಣರಂಥ ನಾಯಕರು ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದರು. ಹಾಗಾಗಿ, ಮತಗಳು ಕಡಿಮೆ ಬಂದವು. ಆದರೂ 43 ಸಾವಿರ ಮತಗಳು ನನಗೆ ಬಂದಿದ್ದು ಕಡಿಮೆ ಸಾಧನೆ ಏನಲ್ಲ ಎಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.

ಆಗ ನನ್ನ ಜೊತೆಗಿದ್ದು ಹೋದವರು ಈಗಲೂ ಪಶ್ಚಾತ್ತಾಪ ಮಾಡುತ್ತಿದ್ದಾರೆ. ಈಗ ಮನನ ಮಾಡಿಕೊಂಡು ನನಗೆ ಹೇಳುತ್ತಿದ್ದಾರೆ. ಆದರೆ ಕಾಲ ಮಿಂಚಿ ಹೋಗಿದೆ. ಆದರೆ, ನನ್ನ ನಿಲುವು, ಮೌಲ್ಯ, ಸೈದ್ಧಾಂತಿಕ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲದು ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *