Site icon Kannada News-suddikshana

ದಾವಣಗೆರೆಯಲ್ಲೂ ಹೃದಯಘಾತಕ್ಕೆ 19 ವರ್ಷದ ಯುವತಿ ಬಲಿ!

ದಾವಣಗೆರೆ

SUDDIKSHANA KANNADA NEWS/ DAVANAGERE/ DATE-30-06-2025

ದಾವಣಗೆರೆ: ಹೃದಯಘಾತಕ್ಕೆ ಒಳಗಾಗಿ ಯುವ ಪೀಳಿಗೆಯವರು ಸಾವನ್ನಪ್ಪುತ್ತಿರುವ ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ. ಹಾಸನ ಜಿಲ್ಲೆಯಲ್ಲಂತೂ ಇದುವರೆಗೆ 16ಕ್ಕೂ ಹೆಚ್ಚು ಮಂದಿ ಹಾರ್ಟ್ ಅಟ್ಯಾಕ್ ಗೆ ಬಲಿಯಾಗಿದ್ದು, ರಾಜ್ಯಾದ್ಯಂತ ಆತಂಕ ಸೃಷ್ಟಿಸಿತ್ತು. ಆದ್ರೆ, ಈಗ ದಾವಣಗೆರೆಯಲ್ಲೂ 19 ವರ್ಷದ ಯುವತಿ ಹೃದಯಘಾತಕ್ಕೆ ಸಾವನ್ನಪ್ಪಿದ್ದು, ಭಯ ಸೃಷ್ಟಿಸಿದೆ.

READ ALSO THIS STORY: ಇನ್ಮುಂದೆ ಧ್ವನಿವರ್ಧಕದಲ್ಲಿ ಕೇಳಲ್ಲ ಅಜಾನ್? ಮಸೀದಿಗಳಿಂದ ಮನೆಗಳಿಗೆ ನೇರವಾಗಿ ಅಜಾನ್ ಪ್ರಸಾರ ಹೇಗೆ ಅನ್ನೋದೇ ಇಂಟ್ರೆಸ್ಟಿಂಗ್!

ದಾವಣಗೆರೆ ನಗರದ ಎಸ್. ಎಸ್. ಹೈಟೆಕ್ ರಸ್ತೆಯ ಸಾಯಿ ಬಾಬ ದೇವಸ್ಥಾನದ ಸಮೀಪದ ವಾಸಿ ತಿಪ್ಪೇಸ್ವಾಮಿ ಹಾಗೂ ಆಶಾ ದಂಪತಿ ಪುತ್ರಿ ಗೌರಿ (19) ಹೃದಯಘಾತ ಸಂಭವಿಸಿ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

ನಗರದ ಚಾಣಕ್ಯ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿ ಎಂಜಿನಿಯರಿಂಗ್ ಸೇರಲು ಸಿಇಟಿ ಕೌನ್ಸಿಲಿಂಗ್ ಗಾಗಿ ಕಾಯುತ್ತಿದ್ದ ಈಕೆ ಬೆಳಿಗ್ಗೆ ಅಂಗಡಿಯಿಂದ ಹಾಲು ತಂದಿದ್ದಾಳೆ. ಭಾನುವಾರ ಎಂಟು ಗಂಟೆ ಸುಮಾರಿಗೆ ತಾಯಿ ತಿಂಡಿ ಮಾಡಲು ತರಕಾರಿ ಎಚ್ಚುತ್ತಿದ್ದರು. ಈ ವೇಳೆ ತಲೆ ಸುತ್ತು ಕಾಣಿಸಿಕೊಂಡಿದೆ. ಈ ವೇಳೆ ದಿಢೀರ್ ಕುಸಿದು ಗೌರಿ ಇಹಲೋಕ ತ್ಯಜಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Exit mobile version