SUDDIKSHANA KANNADA NEWS/DAVANAGERE/DATE:31_10_2025
ದಾವಣಗೆರೆ: ರಾಷ್ಟ್ರೀಯ ಏಕತಾ ದಿವಸ ಅಂಗವಾಗಿ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ಓಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಚಾಲನೆ ನೀಡಿದರು.
READ ALSO THIS STORY: ರಸ್ತೆ ಗುಂಡಿ ಮುಚ್ಚದಿದ್ದರೆ ಅಧಿಕಾರಿಗಳ ತಲೆತಂಡ: ಮಹಾನಗರ ಪಾಲಿಕೆ ಆಯುಕ್ತೆ ಖಡಕ್ ಎಚ್ಚರಿಕೆ!
ಏಕತಾ ಓಟದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಏಕತಾ ಓಟದಲ್ಲಿ ಮೊದಲ 3 ವಿಜೇತರಿಗೆ ಉಮಾ ಪ್ರಶಾಂತ್ ಅವರು ಬಹುಮಾನ ವಿತರಿಸಿದರು.
ಪೊಲೀಸ್ ವಿಭಾಗ:
ಮೊದಲ ಬಹುಮಾನ ಧ್ರುವ – ಬಡಾವಣೆ ಪೊಲೀಸ್ ಠಾಣೆ, ದ್ವಿತೀಯ ಬಹುಮಾನ – ಕಿರಣ್ ಕುಮಾರ ಡಿಎಆರ್, ತೃತೀಯ ಬಹುಮಾನ – ಅವಿನಾಶ.
ಪಬ್ಲಿಕ್ ವಿಭಾಗ:
ಮೊದಲ ಬಹುಮಾನ – ಮಲ್ಲಿಕಾರ್ಜುನ, ದ್ವಿತೀಯ ಬಹುಮಾನ – ವೆಂಕಟೇಶ, ತೃತೀಯ ಬಹುಮಾನ – ಆಕಾಶ್. ಎಲ್ಲರೂ ಕ್ರೀಡಾ ಹಾಸ್ಟೆಲ್ ದಾವಣಗೆರೆ
ಮಹಿಳೆಯರ ವಿಭಾಗ:
ಮೊದಲ ಬಹುಮಾನ – ಶಮೀಮ್ ಉನ್ನೀಸ್ ಪಿಎಸ್ಐ ಬಸವನಗರ ಠಾಣೆ, ದ್ವಿತೀಯ ಬಹುಮಾನ – ಲತಾ ವಿ ತಾಳೇಕರ್ ಪಿಎಸ್ಐ, ಬಡಾವಣೆ ಠಾಣೆ, ತೃತೀಯ ಬಹುಮಾನ- ಪ್ರಮೀಳಮ್ಮ- ಪಿ ಸ್ಐ ಬಸವನಗರ ಠಾಣೆ
ಸರ್ದಾರ್ ವಲ್ಲಬಾಯ್ ಪಟೇಲ್ ರವರ 150 ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ ಹಿನ್ನೆಲೆ ಜಿಲ್ಲಾ ಪೊಲೀಸ್ ವತಿಯಿಂದ ಬಿಇಎ ಹಾಗೂ ಎಸ್.ಬಿ.ಸಿ ಕಾಲೇಜುಗಳಲ್ಲಿ ಹಮ್ಮಿಕೊಂಡಿದ್ದ ಸರ್ದಾರ್ ವಲ್ಲಬಾಯ್ ಪಟೇಲ್ ರವರ ದೃಷ್ಠಿಕೋನ ಮತ್ತು ಜೀವನ ಕುರಿತು ನಡೆಸಿದ ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದ ಸ್ಪರ್ಧಿಗಳು.
ಎಸ್.ಬಿ.ಸಿ ಕಾಲೇಜ್ ವಿಧ್ಯಾರ್ಥಿಗಳು:
ಮೊದಲ ಬಹುಮಾನ: ಭೂಮಿಕಾ ಜಿ, ಪ್ರಥಮ ವರ್ಷ ಎಂ.ಕಾಂ., ದ್ವಿತೀಯ ಬಹುಮಾನ: ಮೇಘನಾ ಎಂ, ದ್ವಿತೀಯ ವರ್ಷ ಬಿ ಎ, ತೃತೀಯ ಬಹುಮಾನ: ಸಹನಾ ಎಂ ಬಿ ದ್ವಿತೀಯ ವರ್ಷ ಬಿ ಸಿ ಎ
ಬಿಇಎ ಕಾಲೇಜ್ ವಿಧ್ಯಾರ್ಥಿಗಳು:
ಮೊದಲ ಬಹುಮಾನ: ಸುಮಂಗಲ ಶೇಖಪ್ಪ ಗೌಳಿ., ದ್ವಿತೀಯ ಬಹುಮಾನ: ಅಶ್ವಿನಿ ಜಿ, ತೃತೀಯ ಬಹುಮಾನ: ರಕ್ಸರ್ ಬಾನು
ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಉಮಾ ಪ್ರಶಾಂತ್ ಪ್ರತಿ ವರ್ಷದಂತೆ ಈ ಬಾರಿಯೂ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ಓಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. 570 ರಾಜ್ಯಗಳನ್ನು ಒಟ್ಟುಗೂಡಿಸಿದ ಮಹಾನ್ ವ್ಯಕ್ತಿ ಸರ್ದಾರ್ ವಲ್ಲಭಬಾಯಿ ಪಟೇಲ್. ಎಲ್ಲಾ ರಾಜ್ಯಗಳು ತಮ್ಮ ಭಾಷೆಗಳ, ಸಂಸ್ಕೃತಿಯ, ಪ್ರಾದೇಶಿಕ ಆಧಾರದ ಮೇಲೆ ಬೇರೆ ಬೇರೆ ರಾಜ್ಯಗಳಾಗಿ
ವಿಂಗಡನೆಯಾಗಿದೆ. ಅವುಗಳನ್ನು ಒಂದುಗೂಡಿಸಲು ಸರ್ದಾರ್ ವಲ್ಲಭ ಬಾಯಿ ಪಟೇಲ್ ಬಹಳ ಶ್ರಮವಹಿಸಿದ್ದಾರೆ ಎಂದರು.
ದೇಶದಲ್ಲಿ ಎಲ್ಲ ಧರ್ಮದವರು, ಎಲ್ಲ ಭಾಷೆಯವರೂ ಜೊತೆಯಾಗಿ ಇದ್ದಾರೆ. ವಿವಿಧತೆಯಲ್ಲಿ ಐಕ್ಯತೆ ಇರಬೇಕು ಎಂಬ ಧ್ಯೇಯವಾಕ್ಯವಾಗಿದೆ. ನಮ್ಮ ದೇಶದ ರಕ್ಷಣೆ, ಭದ್ರತೆ, ಏಕತೆ, ಐಕ್ಯತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ವೈಯಕ್ತಿಕ ಜೀವನದಲ್ಲಿ ಎಲ್ಲರೂ ಒಗ್ಗಟ್ಟಾಗಿ, ಒಂದಾಗಿದ್ದರೆ ಚೆನ್ನಾಗಿ ಕೆಲಸ ನಿರ್ವಹಿಸಲು ಸಾಧ್ಯ. ನಾವೆಲ್ಲರೂ ರಾಷ್ಟ್ರದ ಏಕತೆ, ಐಕ್ಯತೆ, ಭದ್ರತೆಗೋಸ್ಕರ ಹೋರಾಡಬೇಕು ಎಂದು ಕರೆ ನೀಡಿದರು.
ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಪಿ ಅವರು ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋದಿಸಿರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಬಸವರಾಜ್ ಬಿ ಎಸ್, ಶರಣಬಸವೇಶ್ವರ ಬಿ, ಪಿ ಬಿ ಪ್ರಕಾಶ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.


