ದಾವಣಗೆರೆ: ನಗರದಲ್ಲಿ ಅಕ್ಟೋಬರ್ 21ರಂದು ನಡೆಯಲಿರುವ ವಿಜಯದಶಮಿ ಹಬ್ಬದ ಶೋಭಾಯಾತ್ರೆ ಮತ್ತು ಮೆರವಣಿಗೆಯ ಸುಗಮ ಸಂಚಾರಕ್ಕಾಗಿ ಜಿಲ್ಲಾ ವಿಶೇಷ ಸಂಚಾರ ಮಾರ್ಗ ಬದಲಾವಣೆ ಆದೇಶ ಪ್ರಕಟಿಸಲಾಗಿದೆ. ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗದಂತೆ ಹಾಗೂ ಕಾನೂನು-ಸುವ್ಯವಸ್ಥೆ ಕಾಪಾಡಲು ನಿರ್ದಿಷ್ಟ ಸಮಯಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.
ಪ್ರಮುಖ ಸಂಚಾರ ಬದಲಾವಣೆಗಳು ಮತ್ತು ಸಮಯ:
ಅಕ್ಟೋಬರ್ 21 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ:
ಜಗಳೂರು ಕಡೆಯಿಂದ ಬರುವ ವಾಹನಗಳು: ಜಗಳೂರು ಕಡೆಯಿಂದ ಬರುವ ಎಲ್ಲಾ ಭಾರಿ ಹಾಗೂ ಲಘು ಸರಕು ಸಾಗಾಣಿಕೆ ವಾಹನಗಳು ಬೇತೂರು ಹಳ್ಳದ ಸಮೀಪದ ರಿಂಗ್ ರಸ್ತೆ, ಟಿಪ್ಪು ಸರ್ಕಲ್, ಆಖ್ತರ್ ರಜಾ ಸರ್ಕಲ್, ಆರ್.ಟಿ.ಓ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗವಾಗಿ ಹಳೇ ಪಿ.ಬಿ ರಸ್ತೆಯಲ್ಲಿ ಸಂಚರಿಸಬೇಕು.
ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ಗಳು:
ಈ ಬಸ್ಗಳು ಬೇತೂರು ರಸ್ತೆಯಲ್ಲಿರುವ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಹತ್ತಿಸಿ/ಇಳಿಸಿ ಅಲ್ಲಿಂದಲೇ ವಾಪಸ್ ತೆರಳಬೇಕು. ಅಂದು ಕೆ.ಆರ್ ರಸ್ತೆಯ ಖಾಸಗಿ ಬಸ್ ನಿಲ್ದಾಣವು ಮೆರವಣಿಗೆ ಮುಗಿಯುವವರೆಗೆ ಕಾರ್ಯನಿರ್ವಹಿಸುವುದಿಲ್ಲ.
ಹರಪನಹಳ್ಳಿ ಕಡೆಯಿಂದ ಬರುವ ವಾಹನಗಳು: ಕಂಚಿಕೆರೆ ಮಾಗಾನಹಳ್ಳಿ ಮಾರ್ಗವಾಗಿ ಬರುವ ಸರಕು ವಾಹನಗಳು ಚೌಡಮ್ಮ ದೇವಸ್ಥಾನ ಕ್ರಾಸ್ನಿಂದ ಬೂದಾಳ್ ರಸ್ತೆ, ಆರ್.ಟಿ.ಓ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ಹಳೇ ಪಿ.ಬಿ ರಸ್ತೆ ತಲುಪಬೇಕು. ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ಗಳು: ಟಿಪ್ಪು ಸರ್ಕಲ್ ನಿಂಗ ರಿಂಗ್ ರಸ್ತೆ ಮುಖಾಂತರ ಬೇತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ಹತ್ತಿಸಿಕೊಂಡು ಅಲ್ಲಿಂದಲೇ ವಾಪಸ್ ಹೊರಡುವುದು.
ಪ್ರಮುಖ ವೃತ್ತಗಳಲ್ಲಿ ನಿಷೇಧ:
ಮಾಗಾನಹಳ್ಳಿ ರಸ್ತೆ ಟಿಪ್ಪು ಸರ್ಕಲ್ನಿಂದ ಅರಳೀಮರ ಸರ್ಕಲ್, ಕೆ.ಆರ್ ರಸ್ತೆ ಹಾಗೂ ಅಶೋಕ ಎಲ್.ಸಿ ಗೇಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ನಿರ್ಬಂಧಿತ ರಸ್ತೆಗಳು:
ಎ.ಪಿ.ಎಂ.ಸಿ ಲಿಂಕ್ ರಸ್ತೆ ಮೂಲಕ ವೆಂಕಟೇಶ್ವರ ಸರ್ಕಲ್ ಕಡೆಗೆ ಬರುವ ಎಲ್ಲಾ ಭಾರಿ ಮತ್ತುಲಘು ಸರಕು ಸಾಗಾಣಿಕ ವಾಹನಗಳು ಮತ್ತು ಪ್ರಯಾಣಿಕ ವಾಹನಗಳು ಬೆಳಿಗ್ಗೆ 10 ಗಂಟೆಯಿಂದ 04 ಗಂಟೆಯವರಿಗೆ ಮಟ್ಟಿಕಲ್ ಮುಖಾಂತರ ವೆಂಕಟೇಶ್ವರ ಸರ್ಕಲ್ ಕಡೆಗೆ ಬರದೇ ಖಾಸಗಿ ಬಸ್ಸುಗಳು ಹಳೇ ಪಿ.ಬಿ ರಸ್ತೆಯಲ್ಲಿ ಬರುವ ಖಾಸಗಿ ಬಸ್ ನಿಲ್ದಾಣದಿಂದ ಮತ್ತು ಕೆ.ಎಸ್. ಆರ್.ಟಿ.ಸಿ ಬಸ್ಸುಗಳು ಬಸ್ ನಿಲ್ದಾಣದಿಂದ ಜನರನ್ನು ಇಳಿಸಿ, ಹತ್ತಿಸಿಕೊಂಡು ಡಿ.ಸಿ.ಎಂ ಅಂಡರ್ ಬ್ರಿಡ್ಜ್ ಮೂಲಕ ಅವರೆಗೆರೆ ಮಾರ್ಗವಾಗಿ ಬಾಡಾ ಕ್ರಾಸ್ ಮೂಲಕ ಎನ್.ಹೆಚ್.ರಸ್ತೆಯಲ್ಲಿ ಸಂಚರಿಸುವುದು.
ವೆಂಕಟೇಶ್ವರ ಸರ್ಕಲ್ ನಿಂದ ಎ.ಪಿ.ಎಂ.ಸಿ ಫ್ಲೈ ಓವರ್ ವರೆಗೆ, ವೆಂಕಟೇಶ್ವರ ಸರ್ಕಲ್ ನಿಂದ ಅರಳೀಮರ ಸರ್ಕಲ್ ವರೆಗೆ, ಕೆ.ಆರ್ ರಸ್ತೆ ಗಣೇಶ ಗುಡಿ ಕ್ರಾಸ್ ನಿಂದ ಹಾಸಭಾವಿ ಸರ್ಕಲ್ ವರೆಗೆ, ಹಾಸಭಾವಿ ಸರ್ಕಲ್ ನಿಂದ ಗ್ಯಾಸ್ ಕಟ್ಟೆ ಸರ್ಕಲ್ ವರೆಗೆ, ಗ್ಯಾಸ್ ಕಟ್ಟೆ ಸರ್ಕಲ್ ನಿಂದ ಕಾಳಿಕದೇವಿ ರಸ್ತೆವರೆಗೆ, ಕಾಳಿಕದೇವಿ ರಸ್ತೆಯಿಂದ ಹಗೇದಿಬ್ಬ ಸರ್ಕಲ್ ಮಾರ್ಗವಾಗಿ ದುರ್ಗಾಂಭಿಕಾ ದೇವಸ್ಥಾನದವರೆಗೆ ಹಾಗೂ ದುರ್ಗಾಂಭಿಕಾ ದೇವಸ್ಥಾನದಿಂದ ಹೊಂಡದ ಸರ್ಕಲ್ ಮಾರ್ಗವಾಗಿ ಅರುಣ ಎಲ್.ಸಿ ಗೇಟ್ ವರೆಗೆ ಯಾವುದೇ ರೀತಿಯ ಭಾರಿ ಮತ್ತು ಲಘು ವಾಹನಗಳು ಸಂಚರಿಸದಂತೆ ಹಾಗೂ ಯಾವುದೇ ರೀತಿಯ ವಾಹನಗಳು ನಿಲುಗಡೆಯಾಗದಂತೆ ನಿಷೇಧಿಸುವುದು.
ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ:
ಹರಿಹರ ಕಡೆಯಿಂದ ಬಾತಿ ಮೂಲಕ ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಬರುವ ಎಲ್ಲಾ ಭಾರಿ ವಾಹನಗಳು ಅಂದರೆ ಸರಕು ಲಾರಿಗಳು, ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ಗಳು ಹರಿಹರ ನಗರದಿಂದ ದಾವಣಗೆರೆ ಕಡೆಗೆ ಬರುವ ಹಳೇ ಪಿ.ಬಿ ರಸ್ತೆಗೆ ಬರದೇ ಹರಿಹರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮುಖಾಂತರ ಹೊಸ ಎನ್.ಹೆಚ್-48 ರಸ್ತೆ ಮೂಲಕ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ದಾವಣಗೆರೆ ನಗರಕ್ಕೆ ಬಂದು ಸರಕು ಲಾರಿಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೆಟ್ ಕ್ರಾಸ್ ಮುಖಾಂತರ ಎಪಿಎಂಸಿಗೆ ಹೋಗುವುದು. ಕೆ.ಎಸ್.ಆರ್.ಟಿ.ಸಿ ಬಸ್ಗಳು ಮೇಲ್ಕಂಡ ಮಾರ್ಗದಲ್ಲಿ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಬೆಂಗಳೂರು, ಬೆಳಗಾವಿ ಕಡೆಗೆ ಹೋಗುವುದು. ನಂತರ ಖಾಸಗಿ ಬಸ್ಗಳು ಮೇಲ್ಕಂಡ ಮಾರ್ಗದಲ್ಲಿ ಬಂದು ಹಳೇ ಪಿ.ಬಿ.ರಸ್ತೆಯ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಜನರನ್ನು ಇಳಿಸಿ ಹತ್ತಿಸಿಕೊಂಡು ವಾಪಾಸ್ ಅದೇ ಮಾರ್ಗದಲ್ಲಿ ಸಂಚರಿಸುವುದು.
ಚಿತ್ರದುರ್ಗದ ಕಡೆಯಿಂದ ಬರುವ ಎಲ್ಲಾ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೆಟ್ ಕ್ರಾಸ್ ಮುಖಾಂತರ ಎಪಿಎಂಸಿಗೆ ಹೋಗುವುದು. ಕೆ.ಎಸ್.ಆರ್.ಟಿ.ಸಿ. ಬಸ್ಗಳು ಮೇಲ್ಕಂಡ ಮಾರ್ಗದಲ್ಲಿ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಬೆಂಗಳೂರು, ಬೆಳಗಾವಿ ಕಡೆಗೆ ಹೋಗುವುದು. ಖಾಸಗಿ ಬಸ್ಗಳು ಮೇಲ್ಕಂಡ ಮಾರ್ಗದಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಜನರನ್ನು ಇಳಿಸಿ ಹತ್ತಿಸಿಕೊಂಡು ವಾಪಾಸ್ ಅದೇ ಮಾರ್ಗದಲ್ಲಿ ಸಂಚರಿಸುವುದು.
ಹಳೇ ಪಿ.ಬಿ ರಸ್ತೆಯ ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ಎಂ.ಜಿ ಸರ್ಕಲ್ ವರೆಗೆ ಯಾವುದೇ ರೀತಿಯ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ಮತ್ತು ಭಾರಿ ಮತ್ತು ಲಘು ಪ್ರಯಾಣಿಕರ ವಾಹನಗಳು ಸಂಚರಿಸದಂತೆ ನಿಷೇಧಿಸುವುದು. ಈ ವಾಹನ ಸಂಚಾರ ಮಾರ್ಗ ಬದಲಾವಣೆ ಕುರಿತು ಅಗತ್ಯವಾದ ಸೂಚನಾ ಫಲಕಗಳನ್ನು ಮೇಲ್ಕಂಡ ಸ್ಥಳಗಳಲ್ಲಿ ಅಳವಡಿಸಲು ಪೊಲೀಸ್ ಇಲಾಖೆಗೆ ಆದೇಶ ನೀಡಿರುತ್ತೇನೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದ್ದಾರೆ.





Leave a comment