Site icon Kannada News-suddikshana

ದಾವಣಗೆರೆ(Davanagere)ಯಲ್ಲಿ ಅಕ್ಟೋಬರ್ 16ಕ್ಕೆ ಬೃಹತ್ ಉದ್ಯೋಗ ಮೇಳ

UDYOGA MELA IN DAVANAGERE

UDYOGA MELA IN DAVANAGERE

SUDDIKSHANA KANNADA NEWS/ DAVANAGERE/ DATE:11-10-2023

ದಾವಣಗೆರೆ (Davanagere): ಅಕ್ಟೋಬರ್ 16 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಮುನ್ಸಿಪಲ್ ಗ್ರೌಂಡ್ ಹತ್ತಿರ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

Read Also This Story:

ಸಚಿನ್ ತೆಂಡೂಲ್ಕರ್ ರೆಕಾರ್ಡ್ ಉಡೀಸ್ ಮಾಡಿದ ಹಿಟ್ ಮ್ಯಾನ್: ಭರ್ಜರಿ ಶತಕ ಬಾರಿಸಿದ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್ ವೈಭವದಲ್ಲಿ ಯಾವೆಲ್ಲಾ ರೆಕಾರ್ಡ್ ಗಳು ಧೂಳೀಪಟ ಗೊತ್ತಾ…?

ಈ ಉದ್ಯೋಗ ಮೇಳಕ್ಕೆ ವಿವಿಧ ಜಿಲ್ಲೆ ಹಾಗೂ ರಾಜ್ಯಮಟ್ಟದಿಂದ 100-150 ಉದ್ಯೋಗದಾತರನ್ನು (Employers/companies/Industries) ಭಾಗವಹಿಸಲಿದ್ದು, ಜಿಲ್ಲೆಯ ನಿರುದ್ಯೋಗಿ ಯುವಕ/ಯುವತಿಯರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದೆಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ ತಿಳಿಸಿದ್ದಾರೆ.

ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನ:

 

ಮಲೇಬೆನ್ನೂರು ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ, ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಿ ಸ್ವೀಕರಿಸಲಾಗಿರುತ್ತದೆ.

ಅದರಂತೆ ಸ್ವೀಕೃತವಾದ ಅರ್ಜಿಗಳನ್ನು ಮಲೇಬೆನ್ನೂರು ಪುರಸಭಾ ಕಚೇರಿಯ ಪ್ರಕಟಣಾ ಫಲಕ ಮತ್ತು ಕಚೇರಿಯ ವೆಬ್ ಸೈಟ್ http://www.malebennurutown.mrc.gov.in ರಲ್ಲಿ ನಿವೇಶನ ವಸತಿ ರಹಿತರ ಸರ್ವೇ ಪಟ್ಟಿಯನ್ನು ಅ.10 ರಿಂದ 17 ರವರೆಗೆ ಪ್ರಕಟಿಸಲಾಗಿರುತ್ತದೆ. ಈ ಪಟ್ಟಿಗೆ ಯಾವುದಾದರೂ ಆಕ್ಷೇಪಣೆಗಳು ಇದ್ದಲ್ಲಿ ನಿಗಧಿತ ದಿನಾಂಕದೊಳಗೆ ಸೂಕ್ತ ದಾಖಲೆಗಳೊಂದಿಗೆ ಪುರಸಭಾ ಕಾರ್ಯಾಲಯಕ್ಕೆ ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಮಲೇಬೆನ್ನೂರು ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.

Exit mobile version