Site icon Kannada News-suddikshana

ದಾವಣಗೆರೆಯ ಕಾಲೇಜುಗಳಿಗೆ ಎಸ್ಪಿ ದಿಢೀರ್ ಭೇಟಿ: ವಿದ್ಯಾರ್ಥಿಗಳಿಗೆ ಕೊಟ್ಟ ವಾರ್ನಿಂಗ್ ಏನು..?

Davanagere

SUDDIKSHANA KANNADA NEWS/ DAVANAGERE/ DATE:02_08_2025

ದಾವಣಗೆರೆ (Davanagere) : ನಗರದ ಕಾಲೇಜುಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ದಿಢೀರ್ ಭೇಟಿ ನೀಡಿದರು.

READ ALSO THIS STORY: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ: ಅಸ್ಥಿಪಂಜರದ ಅವಶೇಷಗಳ ಪತ್ತೆ ಬಳಿಕ ಎಸ್ಐಟಿ ತನಿಖೆ ಶುರು, ಢವ..ಢವ.. ಶುರುವಾಗಿರೋದು ಯಾರಿಗೆ?

ನಗರದಲ್ಲಿನ ಸೀತಮ್ಮ ಪಿಯು ಕಾಲೇಜ್, ಅಥಣಿ ಪಿಯು ಕಾಲೇಜ್, ಹೈಸ್ಕೂಲ್ ಮೈದಾನದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.

ಕಾಲೇಜಿಗೆ ಬೈಕ್ ನಲ್ಲಿ ಬರುವ ಕಾಲೇಜು ವಿದ್ಯಾರ್ಥಿಗಳ ಬಳಿ ಚಾಲನಾ ಪರವಾನಿಗೆ ಇದೆಯಾ? ಹೆಲ್ಮೆಟ್ ಧರಿಸುತ್ತಾರೋ ಇಲ್ಲವೋ ಎಂಬ ಕುರಿತಂತೆ ಪರಿಶೀಲಿಸಲು ದಿಢೀರ್ ಆಗಿ ಭೇಟಿ ನೀಡಿದ ಉಮಾ ಪ್ರಶಾಂತ್ ಅವರು, ಕಾನೂನು ಪಾಲನೆ ಮಾಡುವಂತೆ ಸೂಚನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಚಾಲನಾ ಪರವಾನಿಗೆ ಹೊಂದದೇ ಯಾರೂ ಬೈಕ್ ಯಾವುದೇ ವಾಹನ ಚಾಲನೆ ಮಾಡಬಾರದು, ರಸ್ತೆಗಳಲ್ಲಿ ಸಂಚರಿಸುವಾಗ ರಸ್ತೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿ ದೆಸೆಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿ ವಾಹನ ಚಲಾಯಿಸುವುದು ಅಪರಾಧ. ಅಪ್ರಾಪ್ತರ ಚಾಲನೆಗೆ 25 ಸಾವಿರ ರೂಪಾಯಿಯವರೆಗೆ ದಂಡ ವಿಧಿಸಲಾಗುತ್ತದೆ. ಆದ್ದರಿಂದ ನಿಮ್ಮ ಮನೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು

ಸೀತಮ್ಮ ಕಾಲೇಜಿಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ ಯುವತಿಯರು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆಸಕ್ತಿ ವಹಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ದ್ವಿ ಚಕ್ರ ವಾಹನ ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ನಗರ ಡಿವೈಎಸ್ಪಿ ಬಿ. ಶರಣಬಸವೇಶ್ವರ, ಸಂಚಾರ ವೃತ್ತ ಸಿಪಿಐ ನಲವಾಗಲು ಮಂಜುನಾಥ, ಪಿಎಸ್ಐ ನಿರ್ಮಲಾ ಅವರು ಹಾಜರಿದ್ದರು.

Exit mobile version