Home ದಾವಣಗೆರೆ ದಾವಣಗೆರೆ ದಕ್ಷಿಣ ಕಾಂಗ್ರೆಸ್ ಭದ್ರಕೋಟೆ; ಸಮರ್ಥ್ ಅವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ: ಮಾಜಿ ಸಚಿವ ಎಚ್. ಆಂಜನೇಯ ಕರೆ
ದಾವಣಗೆರೆಬೆಂಗಳೂರು

ದಾವಣಗೆರೆ ದಕ್ಷಿಣ ಕಾಂಗ್ರೆಸ್ ಭದ್ರಕೋಟೆ; ಸಮರ್ಥ್ ಅವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ: ಮಾಜಿ ಸಚಿವ ಎಚ್. ಆಂಜನೇಯ ಕರೆ

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಇದನ್ನು ಬೇಧಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಹದಡಿ ಜಿಪಂ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ಭಾನುವಾರ ಬಿರುಸಿನ ಪ್ರಚಾರ ನಡೆಸಿದ್ದ ಆಂಜನೇಯ ತಂಡ, ಸೋಮವಾರವೂ ಪ್ರಚಾರ ಕಾರ್ಯದ ಕಾವನ್ನು ಕಾಯ್ದುಕೊಂಡಿತು. ಆನೆಕೊಂಡದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಆಂಜನೇಯ, ದಾವಣಗೆರೆ ಜಿಲ್ಲೆ ಶಿಕ್ಷಣದ ಕಾಶಿ ಎಂಬ ಹೆಗ್ಗುರುತು ಪಡೆದುಕೊಂಡಿದ್ದು, ಇದಕ್ಕೆ ಶಾಮನೂರು ಶಿವಶಂಕರಪ್ಪ ಅವರ
ಕೊಡುಗೆ ಅಪಾರ ಎಂದು ಸ್ಮರಿಸಿದರು.

ಸಂಸದ, ಶಾಸಕ, ಮಂತ್ರಿಯಾಗಿ ಕ್ಷೇತ್ರದ ಬಡ, ಶೋಷಿತ, ದುರ್ಬಲ, ಅಹಿಂದ ವರ್ಗದ ಪ್ರಗತಿಗೆ ಶ್ರಮಿಸಿದ್ದಾರೆ. ಮನೆ, ನಿವೇಶನ, ಭೂಮಿ ನೀಡುವ ಜೊತೆಗೆ ಕಲ್ಯಾಣ ಮಂಟಪ ಕಟ್ಟಿಸಿದ್ದಾರೆ. ಕರೋನಾ ಸಂದರ್ಭದಲ್ಲಿ 10 ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚ ಮಾಡಿ ಜನರಿಗೆ ಉಚಿತ ಲಸಿಕೆ ಹಾಕಿಸುವ ಮೂಲಕ ಮಾನವೀಯತೆ ಮರೆದ ನಾಯಕ ಶಿವಶಂಕರಪ್ಪ ಎಂದರು.

ಅವರ ಅಗಲಿಕೆ ಬಳಿಕ ಪಕ್ಷ ಅವರ ಮೊಮ್ಮಗ, ಉನ್ನತ ಶಿಕ್ಷಣ ಪಡೆದಿರುವ ಸಮರ್ಥ ಅವರನ್ನು ಕಣಕ್ಕೆ ಇಳಿಸಿದೆ. ಅವರ ಗೆಲುವು ಈಗಾಗಲೇ ಖಚಿತವಾಗಿದ್ದು, ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸುವ ಮೂಲಕ ದಾಖಲೆ ಬರೆಯಬೇಕಾಗಿದೆ ಎಂದು ತಿಳಿಸಿದರು.

ಮಾದಿಗ ಸಮುದಾಯಕ್ಕೆ ಅತ್ಯಂತ ಸಹಕಾರ ನೀಡಿರುವ ಶಾಮನೂರು ಅವರ ಕುಟುಂಬದ ಕುಡಿ ಸಮರ್ಥ ಅವರನ್ನು ಗೆಲ್ಲಿಸುವ ಮೂಲಕ ಮಾದಿಗ ಸಮುದಾಯ ನಂಬಿಕೆ ಅರ್ಹವೆಂಬುದನ್ನು ಸಾಕ್ಷಿಕರಿಸಬೇಕು. ಪ್ರತಿ ಬೂತ್‌ಗಳಲ್ಲೂ ನೂರಕ್ಕೆ ನೂರು ಮತ ಕಾಂಗ್ರೆಸ್ ಪಕ್ಷಕ್ಕೆ ನೀಡುವ ಮೂಲಕ ನಾವು ಪಕ್ಷನಿಷ್ಠರಾಗಿದ್ದು, ನಮಗೆ ಇನ್ನಷ್ಟು ಸೌಲಭ್ಯ ಕಲ್ಪಿಸಿ ಎಂಬ ಹಕ್ಕೋತ್ತಾಯ ಮಂಡಿಸಲು ಹಾದಿ ಸುಗಮಪಡಿಸಿಕೊಳ್ಳಬೇಕೆಂದರು.

ಸಮರ್ಥ ಗೆದ್ದ ಬಳಿಕ ಶಾಮನೂರು ಕುಟುಂಬ ಹಾಗೂ ಸರ್ಕಾರದಿಂದ ಏನೇನೂ ಅನುಕೂಲ ಬೇಕು ಅದನ್ನು ಹಕ್ಕುಮಂಡಿಸಿ ಪಡೆಯಲು ನಾವು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ಹಾಕಿಸಬೇಕು ಎಂದು ತಿಳಿಸಿದರು.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯನ್ನು ದೇಶದಲ್ಲಿಯೇ ಮೊದಲ ಬಾರಿಗೆ ಜಾರಿಗೊಳಿಸುವ ಮೂಲಕ ಸಿದ್ದರಾಮಯ್ಯ ಅವರು ನಾನು ದಲಿತದ್ಧೋರಕ ಎಂಬುದನ್ನು ದೃಢಪಡಿಸಿದ್ದಾರೆ. ಒಳಮೀಸಲಾತಿ ವಿಷಯದಲ್ಲಿ ಅಂತಹದ್ದೇ ಬದ್ಧತೆ ಪ್ರದರ್ಶಿಸಿ ಜಾರಿಗೊಳಿಸಿದ್ದಾರೆ. ಈಗಾಗಲೇ ಶಿಕ್ಷಣದಲ್ಲಿ ಒಳಮೀಸಲಾತಿ ಸೌಲಭ್ಯ ಅನುಷ್ಠಾನಗೊಂಡಿದ್ದು, ಉದ್ಯೋಗ ನೇಮಕಾತಿ
ಪ್ರಕ್ರಿಯೆಗೆ ಶೇ.56ರ ಬದಲು ಶೇ.50 ಮೀಸಲಾತಿ ಅಳವಡಿಸಿಕೊಳ್ಳುವಂತೆ ಕೋರ್ಟ್ ಸೂಚಿಸಿದೆ ಎಂದರು.

ಆದ್ದರಿಂದ ಶೇ.50 ಮೀಸಲಾತಿಯಡಿ ಪರಿಶಿಷ್ಟ ಜಾತಿಯಲ್ಲಿನ ಎ, ಬಿ, ಸಿ ಗುಂಪುಗಳಿಗೆ ಮೀಸಲಾತಿ ಹಂಚಿಕೆ ಮಾಡಬೇಕಾಗಿದೆ. ಮಾ.9ರ ಬಳಿಕ ವಿಶೇಷ ಸಚಿವ ಸಂಪುಟ ಸಭೆ ಕರೆದು ಎಲ್ಲ ಸಮುದಾಯಗಳಿಗೂ ಸಮಾಧಾನಗೊಳ್ಳುವ ರೀತಿ ಮೀಸಲಾತಿ ಹಂಚಿಕೆ ಮಾಡಲಿದ್ದಾರೆ ಎಂದು ತಿಳಿಸಿದರು.

ಆದರೆ, ಈ ಕುರಿತು ಗೊಂದಲ ಮೂಡಿಸಿ, ಮುಗ್ದ ಮಾದಿಗರನ್ನು ದಾರಿತಪ್ಪಿಸುವ ರೀತಿ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ನಾವ್ಯಾರೂ ಅವಕಾಶ ನೀಡುವುದು ಬೇಡ. ನಮ್ಮ ಮತ ಕಾಂಗ್ರೆಸ್ ಪಕ್ಷಕ್ಕೆ ಹಾಕಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಸೌಲಭ್ಯ
ಕಲ್ಪಿಸುವ ವಿಷಯದಲ್ಲಿ ನಾನು ಮುಂಚೂಣಿಯಲ್ಲಿ ನಿಂತು ಸರ್ಕಾರದ ಮೇಲೆ ಒತ್ತಡ ತಂದು ಪರಿಶಿಷ್ಟ ಜಾತಿಯವರಿಗೆ ಸಿಗಬೇಕಾಗ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುವೆ ಎಂದರು.

ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಗೆಲುವು ಈಗಾಗಲೇ ನಿಗದಿ ಆಗಿದ್ದು, ಫಲಿತಾಂಶ ಘೋಷಣೆ ಬಾಕಿ ಉಳಿದಿದೆ ಎಂದು ತಿಳಿಸಿದರು.

ರಾಜಕಾರಣಕ್ಕೆ ಯುವಪೀಳಿಗೆ ಪ್ರವೇಶಿಸಬೇಕೆಂಬ ಆಶಯದಿಂದ ಕಾಂಗ್ರೆಸ್ ಸಮರ್ಥ್ಗೆ ಟಿಕೆಟ್ ನೀಡಿದ್ದು, ರಾಜ್ಯದಲ್ಲಿಯೇ ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಈ ವಿಷಯದಲ್ಲಿ ಮಾದಿಗ ಹಾಗೂ ಮುಸ್ಲಿಂ ಸಮುದಾಯದ ಹೊಣೆಗಾರಿಕೆ ಹೆಚ್ಚು ಇದೆ ಎಂದು ಹೇಳಿದರು.

ಮುಖಂಡ ಬಿ.ಎಂ.ಹನುಮಂತಪ್ಪ ಮಾತನಾಡಿ, ಮಾದಿಗ ಸಮುದಾಯದ ಕುರಿತು ಕಕ್ಕುಲತೆ ಹೊಂದಿದ್ದ ಶಾಮನೂರು ಶಿವಶಂಕರಪ್ಪ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ ಎಂದು ತಿಳಿಸಿದರು.

ಈಗ ಅವರ ಮೊಮ್ಮಗ ಸಮರ್ಥ ಅವರನ್ನು ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸುವ ಹೊಣೆಗಾರಿಕೆ ಮಾದಿಗರ ಮೇಲಿದೆ. ಈ ಅವಕಾಶವನ್ನು ನಾವು ಬಳಸಿಕೊಂಡು, ನಮ್ಮ ಸಮುದಾಯದ ಪ್ರಗತಿಗೆ ಶಾಮನೂರು ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಒತ್ತಡ ತರುವ ಹಕ್ಕು ಪಡೆದುಕೊಳ್ಳೋಣಾ ಎಂದರು.

ದಾವಣಗೆರೆ ನಗರದ ಆನೆಕೊಂಡ, ಬಸಾಪುರ-ಹೊಸಕ್ಯಾಂಪ್, ಇಂದಿರಾ ನಗರ ಸೇರಿ ವಿವಿಧೆಡೆ ಆಂಜನೇಯ ನೇತೃತ್ವದ ತಂಡ ಬಿರುಸಿನ ಪ್ರಚಾರ ನಡೆಸಿತು. ಬಹುತೇಕ ಕಡೆ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಲಾಯಿತು. ಮುಖಂಡರಾದ ಕೊಟ್ರಯ್ಯ, ವೀರಯ್ಯ, ಚೌಡಪ್ಪ, ಧ್ಯಾಮಪ್ಪ, ಎತ್ತಪ್ಪ, ವೇಮಣ್ಣ, ಮಲ್ಲೇಶ್, ನಾಗರಾಜ್, ಭರಮಸಾಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮುಬಾರಕ್, ರಹಮತ್ ವುಲ್ಲಾ ಇತರರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Share

Leave a comment

Leave a Reply

Your email address will not be published. Required fields are marked *