ದಾವಣಗೆರೆ: ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಕೊಡಿ. ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇವೆ. ಪಕ್ಷಕ್ಕೆ ದುಡಿಯಲು ಬಾರದೇ, ಚುನಾವಣೆ ಬಂದಾಗ ಬರುವವರಿಗೆ ಯಾವುದೇ ಕಾರಣಕ್ಕೂ ಮಣೆ ಹಾಕಬೇಡಿ, ಟಿಕೆಟ್ ಕೊಡಬೇಡಿ ಎಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಖಡಕ್ ಸಂದೇಶ ನೀಡಿದ್ದಾರೆ.
ಡಾ. ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 9ರಂದು ಉಪ ಚುನಾವಣೆ ನಿಗದಿ ಆದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಕರೆದಿದ್ದ ಜಿಲ್ಲಾ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ನನ್ನ ಬಗ್ಗೆ ಮಾತನಾಡಿದ ಅಬ್ದುಲ್ ಜಬ್ಬಾರ್ ಟೀಂನಲ್ಲಿರುವ ಸುಭಾಶ್ ಯಾವಾಗ ಕಾಂಗ್ರೆಸ್ ನಲ್ಲಿದ್ದ? ಯಾವಾಗ ಬಂದ? ಒಂದು ಲೋಟ ಚಹಾ, ನೀರು ಕುಡಿಸಿದ್ದಾನಾ. ಹರಪನಹಳ್ಳಿಗೆ ಟಿಕೆಟ್ ಕೇಳಿದ್ದ. ಯಾರೇ ಆದರೂ ಕಾಂಗ್ರೆಸ್ ಹಾಳು ಮಾಡುವುದು ಬೇಡ. ಕಾಂಗ್ರೆಸ್ ಎಲ್ಲರೂ ಒಗ್ಗಟ್ಟಿನಿಂದ ಮುಂದೋಗಬೇಕು. ಇಲ್ಲಿ ಬಿಜೆಪಿಯವರ ಹಾವಳಿ ಜಾಸ್ತಿಯಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಅವರನ್ನು ಎದುರಿಸಬಹುದು. ಶಿವಮೊಗ್ಗ, ಭದ್ರಾವತಿಯಲ್ಲಿ ಆದ ಗಲಾಟೆಯಂತೆ ಇಲ್ಲೂ ಆಗಬಾರದು. ಬಿಜೆಪಿಯವರು ಈ ರೀತಿ ಮಾಡಲು ಯತ್ನಿಸುತ್ತಾರೆ. ಹಿಂದೂ ಮುಸ್ಲಿಂ ಗಲಾಟೆ ತರುತ್ತಾರೆ. ಏನಾದರೂ ಒಂದು ಮಾಡ್ತಾರೆ ಎಂದು ಅನುಮಾನ ವ್ಯಕ್ತಪಡಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ವಿರೋಧ ಮಾಡಿದವರೂ ಇದ್ದಾರೆ, ಗೆಲ್ಲಿಸಲು ಶ್ರಮಿಸಿದವರೂ ಇದ್ದಾರೆ. ಸೋಲಿಸಲು ಯತ್ನಿಸಿದವರು ಮತ್ತು ವಿರೋಧಿಗಳನ್ನು ದೂರವಿಡಿ. ಸಸ್ಪೆಂಡ್ ಮಾಡಿದವರಿಗೂ ಅವಕಾಶ ಕೊಡುತ್ತೀರಾ. ಮೋಸ
ಮಾಡಿದವರಿಗೂ ಮಣೆ ಹಾಕುತ್ತೀರಾ. ಬೇರೆ ಪಕ್ಷಕ್ಕೂ ನಮ್ಮ ಪಕ್ಷಕ್ಕೂ ವ್ಯತ್ಯಾಸ ಇದೆ ಎಂದು ಹೇಳಿ. ನಾವೆಲ್ಲರೂ ನಗುನಗುತ್ತಾ, ಸಂತೋಷವಾಗಿ ಅಭ್ಯರ್ಥಿ ಗೆಲ್ಲಿಸಲು ಪ್ರಯತ್ನಿಸೋಣ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಮಾಜಿ ಸಚಿವ ಹೆಚ್. ಆಂಜನೇಯ, ಹುಸೇನ್, ಬಲರಾಜ್, ಡಿ. ಬಸವರಾಜ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮಹಾನಗರ ಪಾಲಿಕೆ ಮಾಜಿ ಮೇಯರ್ ಗಳು, ಮಾಜಿ ಸದಸ್ಯರು, ಕಾಂಗ್ರೆಸ್ ವಿವಿಧ ಘಟಕಗಳ ಅಧ್ಯಕ್ಷರು ಹಾಜರಿದ್ದರು.
- Abdul Jabbar Team
- Candidate Selection
- Davanagere Congress Meeting
- Davanagere Politics
- Davanagere South Bypoll
- Karnataka Byelection 2026
- Party Loyalty
- Shamanur Shivashankarappa
- SS Mallikarjun
- ಅಬ್ದುಲ್ ಜಬ್ಬಾರ್
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ರಾಜಕಾರಣ
- ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ
- ಚುನಾವಣೆ 2026
- ದಾವಣಗೆರೆ ಕಾಂಗ್ರೆಸ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ಶಾಮನೂರು ಶಿವಶಂಕರಪ್ಪ
- ಸುಭಾಷ್ ಹರಪನಹಳ್ಳಿ





Leave a comment