Home ದಾವಣಗೆರೆ ದಾವಣಗೆರೆ ದಕ್ಷಿಣ ಉಪಚುನಾವಣೆ: ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಲು ಸಲೀಂ ಭಾಯಿ ಆಗ್ರಹ
ದಾವಣಗೆರೆಬೆಂಗಳೂರು

ದಾವಣಗೆರೆ ದಕ್ಷಿಣ ಉಪಚುನಾವಣೆ: ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಲು ಸಲೀಂ ಭಾಯಿ ಆಗ್ರಹ

Share
ದಾವಣಗೆರೆ
Share

ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಡಾ. ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಅನ್ನು ಶಾಮನೂರು ಶಿವಶಂಕರಪ್ಪರ ಕುಟುಂಬದವರಿಗೇ ನೀಡಬೇಕೆಂದು ಮುಸ್ಲಿಂ ಮುಖಂಡ, ಜಿಲ್ಲಾ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಆರ್. ಸಲೀಂ ಭಾಯಿ ಮನವಿ ಮಾಡಿದ್ದಾರೆ.

ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿರುವುದರಿಂದ ಪಕ್ಷದಲ್ಲಿ ಗೊಂದಲ ಉಂಟಾಗಿ ಕಾಂಗ್ರೆಸ್‌ಗೆ ಹಾನಿಯಾಗುವ ಸಾಧ್ಯತೆಗಳಿದ್ದು, ಇದನ್ನು ತಪ್ಪಿಸಲು ಶಾಮನೂರು ಕುಟುಂಬಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿಒತ್ತಾಯಿಸಿದ್ದಾರೆ.

ಸಚಿವ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ಅವರು ಮುಸ್ಲಿಂ ಸಮಾಜದ ಪರವಾಗಿ ಎಂ.ಎಲ್.ಸಿ. ಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್ ನೀಡಲು ಶಿಫಾರಸು ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಲೀಂ ಭಾಯಿ ಅವರು, ಅಬ್ದುಲ್ ಜಬ್ಬಾರ್ ಅವರಿಗೆ ಈಗಾಗಲೇ ಮೂರು ಬಾರಿ ಎಂ.ಎಲ್.ಸಿ. ಆಗುವ ಅವಕಾಶ ನೀಡಲಾಗಿದೆ. ಆದರೆ ಸಮಾಜಕ್ಕೆ ಅವರ ಕೊಡುಗೆ ಶೂನ್ಯವಾಗಿದೆ ಎಂದು ಆರೋಪಿಸಿದ್ದಾರೆ.

2001ರಲ್ಲಿ ಮಾಗಾನಹಳ್ಳಿ ರಸ್ತೆಯ ಉರ್ದು ಶಾಲೆಗೆ ಮಂಜೂರಾತಿ ಸಿಕ್ಕಾಗ, ಠೇವಣಿ ಇಡಲು ಹಣ ಕೇಳಿದಾಗ ಅವರು ಕೇವಲ ಹತ್ತು ಸಾವಿರ ರೂಪಾಯಿ ನೀಡಿ ಹಿನ್ನಡೆ ಉಂಟುಮಾಡಿದ್ದರು. ನಂತರ ಉರ್ದು ಶಾಲೆಗೆ ಮರುಮಂಜೂರಾತಿ ಪಡೆದು ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಹಿರಿಯ ಉರ್ದು ಪ್ರೌಢಶಾಲೆ ಎಂದು ನಾಮಕರಣ ಮಾಡಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಗಮನಕ್ಕೆ ತಂದು ಮೂರು ಲಕ್ಷ ರೂಪಾಯಿ ದೇಣಿಗೆ ಪಡೆದು ಶಾಲೆ ಮಂಜೂರು ಮಾಡಿಸಲಾಯಿತು ಎಂದು ಸ್ಮರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ದಕ್ಷಿಣ ಕ್ಷೇತ್ರವನ್ನು ಇಲ್ಲಿಯವರೆಗೆ ಪ್ರತಿನಿಧಿಸಿದ ಶಾಮನೂರು ಕುಟುಂಬದ ಎಸ್.ಎಸ್. ಗಣೇಶ್ ಅಥವಾ ಎಸ್.ಎಂ. ಸಮರ್ಥ ಅವರಿಗೆ ಈ ಬಾರಿ ಉಪಚುನಾವಣಾ ಟಿಕೆಟ್ ನೀಡಬೇಕು. ಆ ಭಾಗದ ಹೆಚ್ಚಿನ ಅಭಿವೃದ್ಧಿಗಾಗಿ ಇದು ಅನಿವಾರ್ಯವಾಗಿದ್ದು, ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ವಿನಂತಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles