Home ದಾವಣಗೆರೆ BIG BREAKING: ದಾವಣಗೆರೆಯಲ್ಲಿ ಸಿದ್ದರಾಮಯ್ಯ ರೋಡ್ ಶೋಗೆ ಜನಸಾಗರ: ಕೇಸರಿ ಪಡೆಯಲ್ಲಿ ಕಂಪನ, ಸಮರ್ಥ್ ಶಾಮನೂರು ಪರ ಭರ್ಜರಿ ಪ್ರಚಾರ!
ದಾವಣಗೆರೆಬೆಂಗಳೂರು

BIG BREAKING: ದಾವಣಗೆರೆಯಲ್ಲಿ ಸಿದ್ದರಾಮಯ್ಯ ರೋಡ್ ಶೋಗೆ ಜನಸಾಗರ: ಕೇಸರಿ ಪಡೆಯಲ್ಲಿ ಕಂಪನ, ಸಮರ್ಥ್ ಶಾಮನೂರು ಪರ ಭರ್ಜರಿ ಪ್ರಚಾರ!

Share
ಸಿದ್ದರಾಮಯ್ಯ
Share

ದಾವಣಗೆರೆ: ದಾವಣಗೆರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ರೋಡ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಕೈಗೊಂಡ ಪ್ರಚಾರದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಬಿಜೆಪಿಯಲ್ಲಿ ತಳಮಳಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಹೋದಕಡೆ ಬಂದ ಕಡೆ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಜನಸಾಗರವೇ ಹರಿದು ಬಂದಿದೆ. ಸಿದ್ದರಾಮಯ್ಯರ ಭಾಷಣಕ್ಕೆ ಫಿದಾ ಆಗಿದ್ದಾರೆ. ಕೋಮುವಾದಿ ಬಿಜೆಪಿ, ಭ್ರಷ್ಟಾಚಾರದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಜನಪ್ರಿಯತೆಗೆ ಹೆಚ್ಚು ಮಹತ್ವ ನೀಡಿರುವ ಸಿದ್ದರಾಮಯ್ಯರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಭ್ರಷ್ಟಾಚಾರ ಸೇರಿದಂತೆ ಹತ್ತು ಹಲವು ವಿಚಾರಗಳ ಕುರಿತಂತೆ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ವಿರೋಧಿ ಎಂಬುದನ್ನು ಪದೇ ಪದೇ ಉಲ್ಲೇಖಿಸಿ ಛಾಟಿ ಬೀಸಿದ್ದಾರೆ. ಮಾತ್ರವಲ್ಲ, ಸಿದ್ದರಾಮಯ್ಯರ ಜನಪ್ರಿಯತೆ ದಾವಣಗೆರೆಯಲ್ಲಿಇನ್ನೂ ಕಡಿಮೆಯಾಗಿಲ್ಲ. ಈ ಹಿಂದೆ ಇದ್ದಂತೆ ಈಗಲೂ ಇದೆ. ಹಾಗಾಗಿ, ಎಲ್ಲಾ ಸಮುದಾಯದ ನಾಯಕರು, ಮುಖಂಡರು, ಸಮಾಜ ಬಾಂಧವರು ಸಿದ್ದರಾಮಯ್ಯರನ್ನು ಹಾಡಿ ಹೊಗಳತೊಡಗಿದ್ದಾರೆ.

ಸಮರ್ಥ್ ಶಾಮನೂರು ಗೆದ್ದರೆ ನನಗೆ ಶಕ್ತಿ ಬರುತ್ತದೆ. ನಿಮಗೂ ಅನುಕೂಲವಾಗುತ್ತದೆ ಎಂದು ಹೇಳುವ ಮೂಲಕ ಜನರ ಪ್ರೀತಿ ಸಂಪಾದನೆಯಲ್ಲಿ ಯಶ ಆಗಿದ್ದಾರೆ. ಇನ್ನು ಬಿಜೆಪಿಯವರು ಸಿದ್ದರಾಮಯ್ಯರ ಜನಪ್ರಿಯತೆ ಕಂಡು ಶಾಕ್ ಆಗಿದ್ದಾರೆ. ಜೊತೆಗೆ ಸಮರ್ಥ್ ಶಾಮನೂರು ಯುವಕರಾದರೂ ಪ್ರಚಾರದ ವೈಖರಿ ಗಮನ ಸೆಳೆಯುತ್ತಿದೆ. ಬಿಜೆಪಿಯವರು ಬೇರೆ ಬೇರೆ ರಾಜ್ಯಗಳಲ್ಲಿ ಯುವಕರಿಗೆ ಟಿಕೆಟ್ ನೀಡಿದ್ದಾರೆ. ಅಲ್ಲಿ ಒಂದು ಬಗೆ, ದಾವಣಗೆರೆಯಲ್ಲಿ ಮತ್ತೊಂದು ಬಗೆ ಎಂಬಂತೆ ಮಾತನಾಡತೊಡಗಿದ್ದಾರೆ. ಬಿಜೆಪಿ ನಾಯಕರಿಗೆ ಭ್ರಷ್ಟಾಚಾರವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೇ ರಾಜೀನಾಮೆ ನೀಡಿ ಜೈಲು ಸೇರಿದ್ದು, ಸಚಿವರು ಹಗರಣಗಳಲ್ಲಿ ಬಂಧಿಯಾಗಿದ್ದು ಬಿಜೆಪಿಗೆ ಇರಿಸು ಮುರಿಸು ತಂದಿದೆ.

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹೇಳ ಹೊರಟರೆ, ಬಿಜೆಪಿ ಭ್ರಷ್ಟಾಚಾರ ಎಸಗಿದ್ದ ಬಗ್ಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕೌಂಟರ್ ಕೊಡುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪರ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದರೆ ಯಡಿಯೂರಪ್ಪ ಅವರ ಇಬ್ಬರೂ ಮಕ್ಕಳು ಅಧಿಕಾರದಲ್ಲಿದ್ದಾರೆ. ಯಡಿಯೂರಪ್ಪ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರು. ಒಬ್ಬ ಪುತ್ರ ಸಂಸದ. ಮತ್ತೊಬ್ಬ ಪುತ್ರ ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ. ಇನ್ನು ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಮುಂದಾಗುತ್ತಿಲ್ಲ ಬಿಜೆಪಿ ನಾಯಕರು. ಯಾಕೆಂದರೆ ಅವರೂ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿಗರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಯಡಿಯೂರಪ್ಪರ ಮನೆಯಲ್ಲಿ ಮೂವರು ಅಧಿಕಾರದಲ್ಲಿದ್ದರೂ ಬಿಜೆಪಿಗರಿಗೆ ಕಾಣಿಸುತ್ತಿಲ್ಲವೇ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಖತ್ತಾಗಿಯೇ ತಿರುಗೇಟು ಕೊಡ್ತಿದ್ದಾರೆ.

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಕಾರ್ಯ ಬಹುತೇಕ ಯಶಸ್ವಿಯಾಗಿದೆ. ಸೇರುತ್ತಿರುವ ಜನಸಾಗರ ನೋಡಿ ಬಿಜೆಪಿ ನಾಯಕರಲ್ಲಿ ಕಂಪನ ಶುರುವಾಗಿರುವುದಂತೂ ಸತ್ಯ
ಹೊಂಡದ ಸರ್ಕಲ್ ಏರಿಯಾದಲ್ಲಿ ರೋಡ್ ಶೋ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ಗೆಲುವಿಗೆ ಮನವಿ ಮಾಡಿದರು. ಈ ವೇಳೆ ಸೇರಿದ್ದ ಜನಸ್ತೋಮ ಘೋಷಣೆ ಹಾಕಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಆರ್. ಎಂ ಸಿ ಲಿಂಕ್ ರಸ್ತೆ ಗ್ರಾಮದಲ್ಲಿ ರೋಡ್ ಶೋ ನಡೆಸಿದರು. ಈ ರೋಡ್ ಶೋಗೂ ಭಾರೀ ಪ್ರತಿಕ್ರಿಯೆ
ವ್ಯಕ್ತವಾಗಿದೆ.

Share

Leave a comment

Leave a Reply

Your email address will not be published. Required fields are marked *