Home ದಾವಣಗೆರೆ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಸುನಾಮಿ ಅಲೆ; ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ: ಬಿ.ವೈ. ವಿಜಯೇಂದ್ರ
ದಾವಣಗೆರೆಬೆಂಗಳೂರು

ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಸುನಾಮಿ ಅಲೆ; ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ: ಬಿ.ವೈ. ವಿಜಯೇಂದ್ರ

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಕೇವಲ ಬಿಜೆಪಿ ಅಲೆಯಲ್ಲ. ಒಂದು ರೀತಿಯ ಸುನಾಮಿಯಂಥ ಅಲೆಯ ವಾತಾವರಣ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಉಪಚುನಾವಣೆಯ ಪ್ರಯುಕ್ತಏರ್ಪಡಿಸಿದ್ದ ಬೃಹತ್ ಶೋಭಾ ಯಾತ್ರೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ಶ್ರೀನಿವಾಸದಾಸ ಕರಿಯಪ್ಪ ಅವರನ್ನು ಗೆಲ್ಲಿಸಲೇಬೇಕೆಂದು ಈ ಕ್ಷೇತ್ರದ ಪ್ರಜ್ಞಾವಂತ ಮತದಾರರು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.

ಆಗರ್ಭ ಶ್ರೀಮಂತರಿಂದ ಈ ಕ್ಷೇತ್ರದ ಅಭಿವೃದ್ಧಿ ಆಗಲಾರದು; ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿ ಆಗಬೇಕೆಂದರೆ ಒಬ್ಬ ಸಾಮಾನ್ಯರಾದ ಶ್ರೀನಿವಾಸದಾಸ ಕರಿಯಪ್ಪ ಅವರು ಶಾಸಕ ಆಗಬೇಕಿದೆ ಎಂದು ತಿಳಿಸಿದರು.

ಹೆಲಿಕಾಪ್ಟರಿನಲ್ಲಿ ಓಡಾಡುವ ಶಾಸಕರು ನಮಗೆ ಬೇಡ. ಸಮಸ್ಯೆ ಇದ್ದಾಗ ಮನೆ ಬಾಗಿಲಿಗೆ ಬರುವಂಥ ಶಾಸಕರು ನಮಗೆ ಬೇಕೆಂದು ಜನತೆ ಹೇಳುತ್ತಿದ್ದಾರೆ ಎಂದು ವಿವರಿಸಿದರು.

ದಾವಣಗೆರೆ ಕಬ್ಜಾ ಮಾಡುವ ಯತ್ನ: ಪ್ರಲ್ಹಾದ್ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಮನೆಯಲ್ಲಿ ತಾತ ಇದ್ದಾಗ ಅವರು ಶಾಸಕರು ಹಾಗೂ ಮಂತ್ರಿಯಾಗಿದ್ದರು. ಈಗ ಮಗ ಶಾಸಕರು ಹಾಗೂ ಮಂತ್ರಿಯಾಗಿದ್ದಾರೆ. ಅವರ ಪತ್ನಿ ಸಂಸದರು. ಇದರ ಜೊತೆಗೆ ಅವರ ಮಗನೂ ಶಾಸಕನಾಗಬೇಕು ಎಂದು ಟಿಕೆಟ್ ನೀಡಿದ್ದಾರೆ. ಹೀಗೆ ಅವರ ಕುಟುಂಬಕ್ಕೇ ಟಿಕೆಟ್ ನೀಡಿ ದಾವಣಗೆರೆ ಕಬ್ಜಾ ಮಾಡಲು ಮುಂದಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಈ ಬಾರಿಯೂ ಗೆದ್ದರೆ ಮುಂದಿನ 40 ವರ್ಷ ಬೇರೆ ಯಾರಿಗೂ ಟಿಕೆಟ್ ಕೊಡುವುದಿಲ್ಲ ಎಂದು ನುಡಿದರು.

ದೇಶದ ವಿವಿಧೆಡೆ ಚುನಾವಣೆ ನಡೆಯುತ್ತಿದ್ದು, ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷ ಸಾಧನೆ ಶೂನ್ಯವಾಗಿದೆ. ಮುಂದೆಯೂ ಶೂನ್ಯವಾಗಿಯೇ ಇರಲಿದೆ. ಕಾಂಗ್ರೆಸ್ ಪಕ್ಷದ ಬ್ಯಾಟರಿ ಇಲ್ಲವಾಗಿದೆ. ಇಲ್ಲಿ ಗ್ಯಾರಂಟಿಯನ್ನು ಸಮರ್ಪಕವಾಗಿ ಕೊಡುತ್ತಿಲ್ಲ ಎಂದು ಟೀಕಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ಶಾಸಕರಾದ ಬಿ.ಪಿ.ಹರೀಶ್, ಎಸ್.ಆರ್.ವಿಶ್ವನಾಥ್, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ್, ಮಾಜಿ ಸಚಿವ ರೇಣುಕಾಚಾರ್ಯ, ಪಕ್ಷದ ಪ್ರಮುಖರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮಂಡಿಪೇಟೆಯ ಶ್ರೀ ಕೋದಂಡರಾಮ ದೇವಸ್ಥಾನದಿಂದ ಕಾಯಿಪೇಟೆಯ ವರೆಗೆ ಬೃಹತ್ ಶೋಭಾಯಾತ್ರೆ ಯಶಸ್ವಿಯಾಗಿ ನಡೆಯಿತು.

Share

Leave a comment

Leave a Reply

Your email address will not be published. Required fields are marked *