Home ದಾವಣಗೆರೆ ಎಸ್‌. ಎಸ್‌. ಮಲ್ಲಿಕಾರ್ಜುನ್ ಆಕ್ರೋಶ: ‘ಒಬ್ಬನಿಂದ ಊರು ಹಾಳಾಗೋದು ಬೇಡ’ – ಅಬ್ದುಲ್ ಜಬ್ಬಾರ್ ವಿರುದ್ಧ ವಾಗ್ದಾಳಿ!
ದಾವಣಗೆರೆಬೆಂಗಳೂರು

ಎಸ್‌. ಎಸ್‌. ಮಲ್ಲಿಕಾರ್ಜುನ್ ಆಕ್ರೋಶ: ‘ಒಬ್ಬನಿಂದ ಊರು ಹಾಳಾಗೋದು ಬೇಡ’ – ಅಬ್ದುಲ್ ಜಬ್ಬಾರ್ ವಿರುದ್ಧ ವಾಗ್ದಾಳಿ!

Share
ಎಸ್‌. ಎಸ್‌. ಮಲ್ಲಿಕಾರ್ಜುನ್
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ವಿಚಾರವಾಗಿ ಜಿಲ್ಲಾ ರಾಜಕಾರಣದಲ್ಲಿ ಕಿಚ್ಚು ಹತ್ತಿಕೊಂಡಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿರುವ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ನಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನೇರಾನೇರ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಅಬ್ದುಲ್ ಜಬ್ಬಾರ್ ಇವತ್ತಿನಿಂದ ಅಲ್ಲ, 1991ರಿಂದಲೂ ಇದನ್ನೇ ಮಾಡುತ್ತಿದ್ದಾರೆ. ಒಬ್ಬನಿಂದ ಇಡೀ ಊರು ಹಾಳಾಗುವುದು ಬೇಡ. ಎಲ್ಲರೂ ಕುಳಿತು ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ನಾನು ಸುಮ್ಮನಿದ್ದೇನೆ ಎಂದರೆ ನನಗೆ ಮಾತನಾಡಲು ಬರಲ್ಲ ಎಂದಲ್ಲ” ಎಂದು ಎಚ್ಚರಿಸಿದರು.

ಕಾರ್ಯಕರ್ತರಿಲ್ಲದೆ ಯಾವ ಪುಂಗಿಯೂ ನಡೆಯಲ್ಲ:

ಕಾಂಗ್ರೆಸ್ ಕಾರ್ಯಕರ್ತರ ಪಕ್ಷ ಎಂದು ಪುನರುಚ್ಚರಿಸಿದ ಸಚಿವರು, “ಮೊದಲು ಕಾರ್ಯಕರ್ತರ ಅಭಿಪ್ರಾಯ ಪಡೆಯೋಣ. ಕಾರ್ಯಕರ್ತರಿಲ್ಲದೆ ಇಲ್ಲಿ ಯಾವ ಪುಂಗಿಯೂ ನಡೆಯಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಾ ಕುಳಿತರೆ ಇದು ಜೋಕರ್ ಆಟದಂತಾಗುತ್ತದೆ” ಎಂದು ಮಾರ್ಮಿಕವಾಗಿ ನುಡಿದರು.

ಜಮೀರ್ ಅಹ್ಮದ್ ವಿರುದ್ಧವೂ ಅಸಮಾಧಾನ:

ಸಚಿವ ಜಮೀರ್ ಅಹ್ಮದ್ ಅವರ ಹಸ್ತಕ್ಷೇಪದ ಬಗ್ಗೆಯೂ ಕಿಡಿಕಾರಿದ ಮಲ್ಲಿಕಾರ್ಜುನ್, “ಜಮೀರ್ ಅಹ್ಮದ್ ಇಲ್ಲಿಗೆ ಬಂದು ಮಾತನಾಡಿದ ಮೇಲೆಯೇ ಗೊಂದಲ ಶುರುವಾಗಿದೆ. ನನ್ನ ಬಳಿ ಚರ್ಚಿಸದೆ ಈ ರೀತಿ ವರ್ತಿಸುವುದು ಸರಿಯಲ್ಲ. ಸಸ್ಪೆಂಡ್ ಆದವರನ್ನೆಲ್ಲಾ ಸಮಿತಿ ಸದಸ್ಯರನ್ನಾಗಿ ಮಾಡಿದರೆ ಒಪ್ಪಲು ಸಾಧ್ಯವೇ? ರಾಜಕಾರಣದಲ್ಲಿ ನೀತಿ, ನ್ಯಾಯ, ಧರ್ಮ ಇರಬೇಕು” ಎಂದರು.

ಟಿಕೆಟ್ ನೀಡಿಕೆ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಮತದಾರರಿಗೆ ತಪ್ಪು ಸಂದೇಶ ರವಾನಿಸಬೇಡಿ ಎಂದು ಅವರು ಇದೇ ವೇಳೆ ಸಲಹೆ ನೀಡಿದರು.

Share

Leave a comment

Leave a Reply

Your email address will not be published. Required fields are marked *