ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ಸಮರ್ಥಿಸಿರುವ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಒಳ್ಳೆಯ ದಿನ ಎಂಬ ಕಾರಣಕ್ಕೆ ಇಂದೇ ಒಂದು ಸೆಟ್ ನಾಮಪತ್ರ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಟಿಕೆಟ್ ಘೋಷಣೆವರೆಗೆ ಮಾತ್ರ ಗೊಂದಲ, ಆಮೇಲೆ ಎಲ್ಲವೂ ಬಗೆಹರಿಯುತ್ತದೆ ಎಂದಿದ್ದಾರೆ.
ನಾಮಪತ್ರ ಸಲ್ಲಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುಗಾದಿ, ರಂಜಾನ್ ಹಬ್ಬ ಬಂದಿರುವ ಕಾರಣಕ್ಕೆ ಇಂದು ಒಳ್ಳೆಯ ದಿನ. ಈ ಕಾರಣಕ್ಕಾಗಿ ಇಂದೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿಸಿದರು.
ಈ ಹಿಂದೆಯೂ ಶಾಮನೂರು ಶಿವಶಂಕರಪ್ಪಾಜಿ ಅವರು ಬಿ ಫಾರಂ ಇಲ್ಲದೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸೋಮವಾರ ಬಿ ಫಾರಂನೊಂದಿಗೆ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಕೆ ಮಾಡುತ್ತೇವೆ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಶಾಮನೂರು ಶಿವಶಂಕರಪ್ಪಾಜಿ ರಾಜಕಾರಣ ನಮಗೆ ಮಾದರಿ. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರ ಪ್ರೀತಿ ಸಂಪಾದನೆ ಮಾಡಿದ್ದಾರೆ. ಹಾಗಾಗಿ ಬಿ ಫಾರಂ ಇಲ್ಲದೇ ನಾಮಪತ್ರ ಸಲ್ಲಿಸೋದು ವಿಶೇಷ ಏನಲ್ಲ ಎಂದು ಹೇಳಿದರು.
ದೂರದೃಷ್ಟಿತ್ವ ಹೊಂದಿರುವ ಯುವ ನಾಯಕ ಸಮರ್ಥ್ ಶಾಮನೂರು. ಶಾಮನೂರು ಶಿವಶಂಕರಪ್ಪರು ಕನಸು ನನಸು ಮಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಾರೆ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ರಣದೀಜ್ ಸುರ್ಜೇವಾಲ ಬೆಂಗಳೂರಿಗೆ ಬಂದಿದ್ದಾರೆ. ಸಂಜೆ ತನಕ ಕಾಯುತ್ತೇವೆ. ಕಾರ್ಯಕರ್ತರು, ಮುಖಂಡರು ಒಳ್ಳೆಯ ದಿನ ಎಂದು ಹೇಳಿದ್ದಾರೆ. ಹಾಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ಟಿಕೆಟ್ ಸಿಗುವವರೆಗೆ ಗೊಂದಲ. ಟಿಕೆಟ್ ಘೋಷಣೆಯಾದ
ಬಳಿಕ ಎಲ್ಲವನ್ನೂ ಸರಿಮಾಡುತ್ತೇವೆ. ರಾಜಕಾರಣ ಸೇವಾ ಮನೋಭಾವನೆಯಿಂದ ಮಾಡಬೇಕು. ಎಲ್ಲರನ್ನೂ ವಿಶ್ವಾಸದಿಂದ ತೆಗೆದುಕೊಂಡು ಹೋಗಬೇಕು. ಸಂವಿಧಾನ ಮತ್ತು ಕಾನೂನು ಬದ್ಧವಾಗಿ ನಡೆದುಕೊಳ್ಳಬೇಕು. ಅವಕಾಶ ಮಾಡಿಕೊಡಬೇಕು ಜನರು. ಜನರ ಬಳಿ ಹೋಗಿ ಮತ ಕೇಳುತ್ತೇವೆ ಎಂದು ಹೇಳಿದರು.
- Congress B-Form
- Davanagere District News.
- Davanagere South Byelection
- Karnataka Politics News
- Prabha Mallikarjun
- Samarth Shamanur Nomination
- Shamanur Shivashankarappa
- ಕರ್ನಾಟಕ ರಾಜಕೀಯ ಸುದ್ದಿ
- ಕಾಂಗ್ರೆಸ್ ಬಿ ಫಾರಂ
- ದಾವಣಗೆರೆ ಜಿಲ್ಲಾ ಸುದ್ದಿ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ಪ್ರಭಾ ಮಲ್ಲಿಕಾರ್ಜುನ್
- ಶಾಮನೂರು ಶಿವಶಂಕರಪ್ಪ
- ಸಮರ್ಥ್ ಶಾಮನೂರು ನಾಮಪತ್ರ





Leave a comment