ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ರಂಗೇರತೊಡಗಿದೆ. ಕಾಂಗ್ರೆಸ್ ಗೆ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಕಣದಿಂದ ಹಿಂದೆ ಸರಿದಿರುವ ಸಾದಿಕ್ ಪೈಲ್ವಾನ್ ಜೊತೆ ಡಿಸಿಎಂ ಡಿ. ಕೆ. ಶಿವಕುಮಾರ್ ಮಾತುಕತೆ ನಡೆಸಿದರು.
ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಹಾಗೂ ಪ್ರಭಾ ಮಲ್ಲಿಕಾರ್ಜುನ ಅವರ ಸಾರಥ್ಯ ಮತ್ತು ಸಾದಿಕ್ ಪೈಲ್ವಾನ್ ಅವರಂತಹ ಮುಖಂಡರ ಬೆಂಬಲ ಈಗ ಕಾಂಗ್ರೆಸ್‌ಗೆ ಆನೆಬಲ ನೀಡಿದಂತಿದೆ.
‘ಕೈ’ಬಲವಾಗಿದೆ:
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ದಾವಣಗೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಮುಖಂಡರಾದ ಸಾದಿಕ್ ಪೈಲ್ವಾನ್ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್,
ಪ್ರಭಾ ಮಲ್ಲಿಕಾರ್ಜುನ ಅವರ ಮನೆಗಳಿಗೆ ಭೇಟಿ ನೀಡಿ, ಅವರ ಆತಿಥ್ಯವನ್ನು ಡಿಸಿಎಂ ಡಿ. ಕೆ. ಶಿವಕುಮಾರ್ ಸ್ವೀಕರಿಸಿದರು.
ನಮ್ಮ ಈ ಒಗ್ಗಟ್ಟಿನ ಬಲದಿಂದ ದಾವಣಗೆರೆಯಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆಯ ರಾಜಕೀಯ ಅಖಾಡದಲ್ಲಿ ಮಲ್ಲಿಕಾರ್ಜುನ ಕುಟುಂಬದ ಪ್ರಭಾವ ಮತ್ತು ಕಾರ್ಯಕರ್ತರ ಈ ಒಗ್ಗಟ್ಟು ಚುನಾವಣಾ ಫಲಿತಾಂಶದ ಮೇಲೆ ಮಹತ್ತರ ಪರಿಣಾಮ ಬೀರುವ ಸಾಧ್ಯತೆಯಿದೆ.
ನಾಯಕತ್ವದ ಒಗ್ಗಟ್ಟು: ಪ್ರಭಾವಿ ನಾಯಕರ ಮನೆಗೆ ಭೇಟಿ ನೀಡಿರುವುದು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬುತ್ತದೆ.
ಕ್ಷೇತ್ರದ ಹಿಡಿತ: ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಪ್ರಭಾ ಮಲ್ಲಿಕಾರ್ಜುನ ಅವರ ಜನಸಂಪರ್ಕ ಮತ್ತು ಅಭಿವೃದ್ಧಿ ಕೆಲಸಗಳು ಪಕ್ಷಕ್ಕೆ ದೊಡ್ಡ ಪ್ಲಸ್ ಪಾಯಿಂಟ್.
ರಣತಂತ್ರ: ಸಾದಿಕ್ ಪೈಲ್ವಾನ್ ಅವರಂತಹ ಸ್ಥಳೀಯ ಮುಖಂಡರ ಜೊತೆಗಿನ ಸಮನ್ವಯವು ಮತದಾರರನ್ನು ತಲುಪಲು ಸಹಕಾರಿ.
“ಒಗ್ಗಟ್ಟಿನಲ್ಲಿ ಬಲವಿದೆ” ಎನ್ನುವಂತೆ, ಈ ಒಕ್ಕೂಟದ ಶಕ್ತಿಯು ಮುಂಬರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಲು ದಾರಿಯಾಗಲಿದೆ ಎಂಬುದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ
ಅಭಿಪ್ರಾಯ.
- Congress Campaign
- Congress Unity
- DAVANAGERE NEWS
- Davanagere South By-election
- DK Shivakumar
- Karnataka Politics
- Prabha Mallikarjun
- Rebel Candidate Withdrawal
- Sadiq Pailwan
- SS Mallikarjun
- ಎಸ್.ಎಸ್. ಮಲ್ಲಿಕಾರ್ಜುನ
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಒಗ್ಗಟ್ಟು
- ಕೈ ಬಲ
- ಡಿ. ಕೆ. ಶಿವಕುಮಾರ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕೀಯ
- ಪ್ರಭಾ ಮಲ್ಲಿಕಾರ್ಜುನ
- ಬಂಡಾಯ ಅಭ್ಯರ್ಥಿ ವಾಪಸ್
- ಸಾದಿಕ್ ಪೈಲ್ವಾನ್





Leave a comment