ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಮಗೆ ತುಂಬಾನೇ ಪ್ರಮುಖ ಮತ್ತು ಗೆಲ್ಲಲೇಬೇಕಾಗಿದೆ. ಈ ಉಪಚುನಾವಣೆಯಲ್ಲಿ ಯಾರೂ ಗೊಂದಲ ಸೃಷ್ಟಿಸುವುದು ಬೇಡ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಖಡಕ್ ಸೂಚನೆ ಕೊಟ್ಟಿದ್ದಾರೆ.
ನಗರದ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಕೆಲಸ ಯಾರೂ ಮಾಡಬಾರದು. ಅವರಿಗೆ ಹಿನ್ನೆಡೆ ಆಯ್ತು, ಇವರಿಗೆ ಹಿನ್ನೆಡೆ ಆಯ್ತು ಎಂಬ ಸಂದೇಶಗಳನ್ನು ಹರಿಬಿಡಬೇಡಿ. ವಾಟ್ಸಪ್ ನಲ್ಲಿ ವಿನಾಕಾರಣ ಪಕ್ಷಕ್ಕೆ ಮುಜುಗುರವಾಗುವಂಥ ಸಂದೇಶ ಯಾರೂ ರವಾನಿಸಬಾರದು ಎಂದು ಸಲಹೆ ನೀಡಿದರು.
ನಾವು ಒಳ್ಳೆಯ ಕೆಲಸ ಹೇಳುವುದಿಲ್ಲ. ವಿವಾದಾತ್ಮಕ ಮಾತುಗಳನ್ನಷ್ಟೇ ಪ್ರಸಾರ ಮಾಡುತ್ತಾರೆ. ಚುನಾವಣೆ ಆಗುವವರೆಗೆ ಮಾತು ಕಡಿಮೆ ಮಾಡಿ, ಕೆಲಸ ಜಾಸ್ತಿ ಮಾಡಿ. ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಿಸ್ತು ಎಂಬ ಗಾದೆ ಇದೆ. ಮಾತು ಕಡಿಮೆ ಮಾಡಿದರೆ ಅತ್ಯಂತ ಮತಗಳಿಂದ ಶ್ರೀನಿವಾಸ್ ದಾಸಕರಿಯಪ್ಪ ಗೆಲ್ಲುತ್ತಾರೆ. ಯಾವುದೇ ಕಾರಣಕ್ಕೂ ಗೊಂದಲ ಸೃಷ್ಟಿಸಬೇಡಿ ಎಂದು ಹೇಳಿದರು.
ಸಿದ್ದೇಶ್ವರ ಅವರ ಭಾಷಣದ ಪ್ರಮುಖಾಂಶಗಳು:
ವಾಟ್ಸಾಪ್ ಸಂದೇಶಗಳ ಬಗ್ಗೆ ಎಚ್ಚರ: “ಅವರಿಗೆ ಹಿನ್ನೆಡೆಯಾಯಿತು, ಇವರಿಗೆ ಹಿನ್ನೆಡೆಯಾಯಿತು” ಎಂಬಂತಹ ಗೊಂದಲಕಾರಿ ಸಂದೇಶಗಳನ್ನು ವಾಟ್ಸಾಪ್‌ನಲ್ಲಿ ಹರಿಬಿಡಬೇಡಿ. ಇದು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತದೆ.
ಮಾತು ಕಡಿಮೆ, ಕೆಲಸ ಜಾಸ್ತಿ: “ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು” ಎಂಬ ಗಾದೆಯಂತೆ, ಅನಗತ್ಯ ವಿವಾದಾತ್ಮಕ ಮಾತುಗಳನ್ನು ಬಿಟ್ಟು ಕೆಲಸದ ಕಡೆ ಗಮನಹರಿಸಿ.
ಗೆಲುವಿನ ವಿಶ್ವಾಸ: ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿದರೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ಭಾರಿ ಮತಗಳ ಅಂತರದಿಂದ ಜಯಗಳಿಸುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ, ಅಜಯ್ ಕುಮಾರ್, ರಾಜನಹಳ್ಳಿ ಶಿವಕುಮಾರ್, ಯಶವಂತರಾವ್ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
- BJP Karnataka
- BJP Workers Meeting
- Davanagere Politics News
- Davanagere South Bye-election
- Davanagere South Constituency.
- GM Siddeshwara
- Karnataka Bye Election 2026
- Srinivas Dasakariyappa
- ಕರ್ನಾಟಕ ಉಪಚುನಾವಣೆ 2026
- ಜಿ. ಎಂ. ಸಿದ್ದೇಶ್ವರ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕೀಯ ಸುದ್ದಿ
- ಬಿಜೆಪಿ ಕಾರ್ಯಕರ್ತರ ಸಭೆ
- ಶ್ರೀನಿವಾಸ್ ದಾಸಕರಿಯಪ್ಪ





Leave a comment