ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರು ಇಲ್ಲವೇ ಅಹಿಂದ ವರ್ಗಕ್ಕೆ ಟಿಕೆಟ್ ನೀಡಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಯಾವ ಕಾರ್ಯತಂತ್ರ ರೂಪಿಸಬೇಕೇಂದು ಆಗ ಮಾತನಾಡುತ್ತೇವೆ ಎಂದು ಅಲ್ಪಸಂಖ್ಯಾತ ಮುಖಂಡರು ಹಾಗೂ ಅಹಿಂದ ವರ್ಗದ ನಾಯಕರು ಎಚ್ಚರಿಕೆ ಕೊಟ್ಟಿದ್ದಾರೆ.
READ ALSO THIS STORY: ಕೊಂಡಜ್ಜಿ ಪಬ್ಲಿಕ್ ಶಾಲೆಗೆ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಎಂ. ಟಿ. ಸುಭಾಷ್ ಚಂದ್ರ, ವೀರಣ್ಣ, ಎನ್. ಎಂ. ಆಂಜನೇಯ ಗುರೂಜಿ, ಅಜಾಜ್ ಅಹ್ಮದ್, ಜೆ. ವೀರಭದ್ರಪ್ಪ ಮತ್ತಿತರ ನಾಯಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕೆಲವೇ ದಿನಗಳಲ್ಲಿ ಬರುವ ನಿರೀಕ್ಷೆ ಇದೆ. ದಿವಂಗತ ಶಾಮನೂರು ಶಿವಶಂಕರಪ್ಪರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಅಲ್ಪಸಂಖ್ಯಾತರಲ್ಲಿ ಯಾರಿಗಾದರೂ ಸ್ಪರ್ಧಿಸಲು ಅವಕಾಶ ಕೊಡಲೇಬೇಕು. ಅಹಿಂದ ವರ್ಗಕ್ಕೆ ಕೊಟ್ಟರೂ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡರೆ ನಾವೆಲ್ಲರೂ ಸೇರಿ ಈ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
1994 ರಿಂದ ಅವಿಭಜಿತ ದಾವಣಗೆರೆ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದಿಂದ ಶಾಮನೂರು ಶಿವಶಂಕರಪನವರೇ ಪ್ರತಿನಿಧಿಸುತ್ತಾ ಬಂದಿರುತ್ತಾರೆ 2008ರಲ್ಲಿ ದಾವಣಗೆರೆ ದಕ್ಷಿಣ ಮತ್ತು ಉತ್ತರ ಎರಡು ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ ಶಿವಶಂಕರಪ್ಪರು ಹಾಗೂ ಎಸ್. ಎಸ್ ಮಲ್ಲಿಕಾರ್ಜುನ್ ಅವರೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಶಿವಶಂಕರಪ್ಪನವರು ದಾವಣಗೆರೆ ದಕ್ಷಿಣದಿಂದ ಸತತವಾಗಿ ಗೆದ್ದು ಬಂದಿದ್ದು, ಶಿವಶಂಕರಪ್ಪನವರ ಮರಣದಿಂದ ಈಗ ಕ್ಷೇತ್ರದ ಉಪ ಚುನಾವಣೆ ಬರುತ್ತದೆ. ಹಾಗಾಗಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಅತೀ ಹೆಚ್ಚು ಅಹಿಂದ ವರ್ಗ ಇದ್ದು, ಶೇಕಡಾ 80ರಷ್ಟಿದೆ. ಹಾಗಾಗಿ, ಈ ವರ್ಗಕ್ಕೆ ಪ್ರಾತಿನಿಧ್ಯ ಸಿಗಬೇಕು ಎಂದು ಆಗ್ರಹಿಸಿದರು.
ಶೇಕಡಾ 50ಕ್ಕಿಂತ ಹೆಚ್ಚು ಅಲ್ಪಸಂಖ್ಯಾತರಿದ್ದಾರೆ. ಹಾಗಾಗಿ ದಾವಣಗೆರೆಯ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸುತ್ತಾ ಬಂದಿದೆ. ಈಗ ಬರುವ ಉಪ ಚುನಾವಣೆಯೂ ಸಹ ಕಾಂಗ್ರೆಸ್ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಅಹಿಂದ ವರ್ಗದ ಮತಗಳು ಹೆಚ್ಚು ಇರುವ ಈ ಕ್ಷೇತ್ರಕೆ ಅಲ್ಪಸಂಖ್ಯಾತರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಸಾಮಾಜಿಕ ನ್ಯಾಯಕ್ಕೆ ನ್ಯಾಯ ಸಲ್ಲಿಸಿದಂತಾಗುತ್ತದೆ. ಅಲ್ಲದೇ ಅಲ್ಪಸಂಖ್ಯಾತರಿಗೆ ಮಧ್ಯ ಕರ್ನಾಟಕದಲ್ಲಿ ಯಾವುದೇ ಪ್ರಾತಿನಿಧ್ಯ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತಿ ಹೆಚ್ಚು ಅಹಿಂದ ವರ್ಗದ ಜನ ಪ್ರತಿನಿಧಿಸುವ ಈ ಕ್ಷೇತ್ರವನ್ನು ಈ ವರ್ಗಕ್ಕೆ ಕೊಡಬೇಕಾಗಿರುವುದು ಇಲ್ಲಿರುವ ಜಿಲ್ಲಾ ನಾಯಕರೆಂದು ಪ್ರತಿಬಿಂಬಿಸಿಕೊಂಡವರ ಜವಬ್ದಾರಿಯೂ ಆಗಿದೆ. ಬೇರೆ ವರ್ಗದ ಸಮುದಾಯದವರು ಅಧಿಕಾರದಿಂದ
ವಂಚಿತವಾಗಿರುತ್ತದೆ. ಅಲ್ಪಸಂಖ್ಯಾತರಲ್ಲಿ ಯಾರಿಗಾದರೂ ಸ್ಪರ್ಧಿಸಲು ಅವಕಾಶ ಕೊಡಲೇ ಬೇಕು. ಕಾಂಗ್ರೆಸ್ ಸರ್ಕಾರದ ಸಾಧನೆ ಪ್ರಗತಿಪರ ಮತ್ತು ಜನಪರವಾಗಿರುತ್ತದೆ. ಹಾಗಾಗಿ ಚುನಾವಣೆ ಗೆಲುವು ನಮ್ಮದಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವು ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗದ ಮತ್ತು ಹಿಂದುಳಿದ ಲಿಂಗಾಯತರ ಸಂಖ್ಯೆಯನ್ನು ಹೆಚ್ಚಾಗಿ ಒಳಗೊಂಡಿದೆ. ಈ ವರ್ಗದ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.





Leave a comment