ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ, ವಿವಿಧ ಪಕ್ಷ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿದ್ದ ಒಟ್ಟು 11 ಅಭ್ಯರ್ಥಿಗಳು ಗುರುವಾರ ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ವಾಪಸ್ ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು ನಿಗದಿಪಡಿಸಿದ್ದ ಸಮಯ ಮುಕ್ತಾಯಗೊಂಡಿದ್ದು, ಒಟ್ಟು 11 ಮಂದಿ ಕಣದಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಚುನಾವಣಾ ಕಾವು ಮತ್ತಷ್ಟು ರಂಗೇರಿದ್ದು, ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಚಿತ್ರಣ ಸ್ಪಷ್ಟವಾಗಿದೆ.
ಉಮೇದುವಾರಿಕೆ ಹಿಂಪಡೆದ ಅಭ್ಯರ್ಥಿಗಳ ವಿವರ:
ಆನಂದಪ್ಪ ಎಸ್.ಎಲ್: ಎಸ್.ಎಸ್.ಬಡಾವಣೆ, ಬಿ ಬ್ಲಾಕ್, ದಾವಣಗೆರೆ.
ಸುಭಾನ್ ಖಾನ್: ಕೆ.ಟಿ.ಜೆ ನಗರ, ದಾವಣಗೆರೆ,
ಹೆಚ್. ಫರ್ವೇಜ್, ಕೊಂಡಜ್ಜಿ ರಸ್ತೆ, ಬಿ.ಜೆ.ಎಂ ಶಾಲೆಯ ಹತ್ತಿರ, ದಾವಣಗೆರೆ.
ಅಲ್ಲಾಭಕ್ಷ ಬಿ: ವಿಜಯನಗರ ಬಡಾವಣೆ, ದಾವಣಗೆರೆ.
ಅಮ್ಮಿರಾ ಅಹಮ್ಮದ್ ಖಾನ್: ಹೊಸಕೆರೆ, ಬಸವಪಟ್ಟಣ, ಚನ್ನಗಿರಿ ತಾಲ್ಲೂಕು.
ಇಸ್ಮಾಯಿಲ್ ಜಬೀವುಲ್ಲಾ: ದೇವರಾಜ್ ಲೇಔಟ್, ದಾವಣಗೆರೆ.
ಎಸ್.ಕೆ. ಅಫೈಲ್ ಖಾನ್: ದೇವರಾಜ್ ಅರಸ್ ಬಡಾವಣೆ, ಸಿ ಬ್ಲಾಕ್, ದಾವಣಗೆರೆ.
ಎಸ್.ಸಿ. ತ್ರಿಮೂರ್ತಿ ಬಿ ಕಲಪನಹಳ್ಳಿ, ದಾವಣಗೆರೆ.
ಹಮ್ಮದ್ ಜಬೀವುಲ್ಲಾ: ಆಜಾದ್ ನಗರ, ದಾವಣಗೆರೆ.
ಸೈಯದ್ ಜಬೀವುಲ್ಲಾ: ಆಜಾದ್ ನಗರ, ದಾವಣಗೆರೆ.
ಡಿ. ಹನುಮಂತಪ್ಪ ಹರಿಹರ, ದಾವಣಗೆರೆ ಜಿಲ್ಲೆ.





Leave a comment